ಧಾರವಾಡ: ತಾಯಿಯು ಮಕ್ಕಳ ಅಮೂಲ್ಯ ಸ್ನೇಹಿತೆಯಾಗಿದ್ದು, ಅವಳ ಗಾಢ ಪರಿಣಾಮವೇ ದೊಡ್ಡ ದೊಡ್ಡ ಸಾಹಿತಿಗಳನ್ನು ಸೃಷ್ಟಿಸಿದ ಉದಾಹರಣೆಗಳು ಸಾರಸ್ವತ ಲೋಕದಲ್ಲಿ ಇವೆ ಎಂದು ಕವಿವಿ ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ| ಆನಂದ ಸ್ವಾಮೀಜಿ ಹೇಳಿದರು.
ತಾಯಿಯ ಬಗ್ಗೆ ಏನೇ ಮಾತನಾಡಿದರೂ ಅದು ಕನಿಷ್ಠವಾಗುತ್ತದೆ. ಭೂಮಿ ತೂಕದ ತಾಯಿಯನ್ನು ಯಾವಾಗಲೂ ಸಹ ಕಡೆಗಣಿಸಬಾರದು. ಅವರ ಕೊನೆ ಗಳಿಗೆಯಲ್ಲಿ ಪ್ರೀತಿಯಿಂದ ನೋಡಿಕೊಳ್ಳುತ್ತಾ ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸಿದಾಗ ಮಾತ್ರ ಅವರು ಸಂತೋಷದಿಂದ ಇರಲು ಸಾಧ್ಯ. ಆಗ ಮಾತ್ರ ನಮ್ಮ ಮನಸ್ಸಿನ ಸಂತೋಷವು ಸಹ ಹೆಚ್ಚಾಗುತ್ತಾ ಆತ್ಮತೃಪ್ತಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ಸಾಹಿತ್ಯ ಕೃಷಿಯಲ್ಲಿ ತಾಯಿಯ ಪಾತ್ರ ಕುರಿತು ಉಪನ್ಯಾಸ ನೀಡಿದ ಮಾತಾಂರ್ಡಪ್ಪ ಕತ್ತಿ, ಜಗತ್ತಿನ ಯಾವುದೇ ಭಾಷೆಯ ಸಾಹಿತ್ಯದಲ್ಲಿ ಪ್ರಧಾನ ಸ್ಥಾನ ತಾಯಿಗೆ ಇರುವುದು ಕಂಡು ಬರುತ್ತದೆ. ಈ ಸಂಗತಿ ನೋಡಿದಾಗ ಸಾಹಿತಿಯ ಮೇಲೆ ತಾಯಿ ಎಷ್ಟೊಂದು ಅಗಾಧವಾದ ಪರಿಣಾಮ ಬೀರಿದ್ದಳು. ಆ ಪರಿಣಾಮವೇ ಸಾಹಿತ್ಯ ಕೃಷಿಗೆ ದಾರಿದೀಪವಾಗುತ್ತಲೇ ಇವೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ತಾಯಿಯ ಋಣವನ್ನು ಏಳೇಳು ಜನ್ಮದಲ್ಲೂ ತೀರಿಸಲು ಸಾಧ್ಯವಿಲ್ಲ ಎಂದರು. ಸದಾನಂದ ಶಿವಳ್ಳಿ, ಸಿದ್ಧಾರ್ಥ ಹೊಸಕೋಟಿ ಇದ್ದರು. ಶಿವಪುತ್ರಯ್ಯ ರಾಚಯ್ಯನವರ ಪ್ರಾರ್ಥಿಸಿದರು. ಕೃಷ್ಣ ಜೋಶಿ ಸ್ವಾಗತಿಸಿದರು. ಎಸ್.ಬಿ. ಗಾಮನಗಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಉಡಿಕೇರಿ ಪರಿಚಯಿಸಿದರು. ಕೆ.ಎಚ್. ನಾಯಕ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.
Advertisement
ಕವಿಸಂನಲ್ಲಿ ಜರುಗಿದ ಚನ್ನಮ್ಮ ಬಸಲಿಂಗಪ್ಪ ಹೊಸಕೋಟಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.