Advertisement
ಇದು ಒಬ್ಬರಿಬ್ಬರ ದೂರಲ್ಲ. ಎಲ್ಲರ ಮನೆ ದೋಸೆ ತೂತು ಅನ್ನುವಂತೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡು ಬರುವಂಥಾ ಸಮಸ್ಯೆ. ಅತ್ತೆ-ಸೊಸೆ ನಡುವೆ ಅನ್ಯೋನ್ಯ ಸಂಬಂಧ ಇರುವುದು ಬಹಳ ವಿರಳ. ಹಲವರು ಅನ್ಯೋನ್ಯ ಇರುವಂತೆ ಸಮಾಜಕ್ಕೆ ತೋರಿಸಲು ಇನ್ನಿಲ್ಲದ ಕಷ್ಟಪಡುತ್ತಾರೆ. ಮನೆಯಿಂದ ಹೊರಗಡೆ ಮದುವೆ, ಪೂಜೆ ಎಂದಾಗ ಖುಷಿಯಿಂದ ಓಡಾಡುತ್ತಾರೆ. ಮನೆಯೊಳಗೆ ಮಾತ್ರ ಇಬ್ಬರೂ ಉತ್ತರ-ದಕ್ಷಿಣ. ಒಬ್ಬರನ್ನು ಕಂಡ್ರೆ ಇನ್ನೊಬ್ಬರಿಗಾಗಲ್ಲ.
Related Articles
Advertisement
ಆದರೆ, ಎಲ್ಲಾ ಅತ್ತೆಯಂದಿರೂ ತಿಳಿದುಕೊಳ್ಳಬೇಕು, ಎಲ್ಲರೂ ಸರ್ವಗುಣ ಸಂಪನ್ನರಲ್ಲ. ಎಲ್ಲರ ವ್ಯಕ್ತಿತ್ವದಲ್ಲೂ ಪಾಸಿಟಿವ್ ಗುಣಗಳ ಜತೆ ನೆಗೆಟಿವ್ ಗುಣಗಳೂ ಇರುತ್ತವೆ. ಎಲ್ಲಾ ಸರಿ-ತಪ್ಪುಗಳನ್ನು ಒಪ್ಪಿಕೊಂಡು ನಮ್ಮವರಾಗಿಸಿಕೊಳ್ಳುವುದೇ ಪರಿಪೂರ್ಣತೆ. ಬಹುತೇಕ ಪ್ರತಿಯೊಬ್ಬ ಅತ್ತೆಯೂ ತಾನೂ ಸೊಸೆಯಾಗಿಯೇ ಬಳಿಕ ಅತ್ತೆಯಾದೆ ಅನ್ನೋದನ್ನೇ ಮರೆತುಬಿಡುತ್ತಾರೆ. ಎಲ್ಲರೂ ಅಲ್ಲ, ಕೆಲವೊಬ್ಬರು. ಹೀಗಾಗಿಯೇ ಸೊಸೆಯ ವ್ಯಕ್ತಿತ್ವದಲ್ಲಿ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ.
ಹಾಗಂತ ಜಗಳ, ಮುನಿಸು ನಡೆಯಲೇಬಾರದು ಅಂತಲ್ಲ. ಅದ್ಯಾವುದೇ ಇರದ ಸಂಬಂಧಗಳು ಯಾವುದಿವೆ. ಎಲ್ಲಾ ಸಂಬಂಧಗಳು ಪ್ರೀತಿ, ಗೌರವದ ಜತೆ ಅಷ್ಟಿಷ್ಟು ಜಗಳ, ಕಿತ್ತಾಟ ನಡೆದಾಗಲೇ ಸರಿಯಾಗಿದೆ ಎಂದರ್ಥ. ಆದರೆ ಜಗಳ, ಆಗಿನ ಮಾತು ಎಲ್ಲವನ್ನೂ ಮರೆತು, “ಸ್ಸಾರಿ’ ಎಂದು ಮತ್ತೆ ಪ್ರೀತಿಯಿಂದ ಮುನ್ನಡೆಯುವ ಮನಸ್ಸಿರಬೇಕು ಅಷ್ಟೆ.
ಪ್ರತಿಯೊಬ್ಬ ಹೆಣ್ಣುಮಗಳು ತನ್ನ ಮನೆಯಿಂದ ತನ್ನ ಕುಟುಂಬವನ್ನೇ ತೊರೆದು ಗಂಡನ ಮನೆಗೆ ಬಂದಿರುತ್ತಾಳೆ. ಹೊಸ ಮನೆಯಲ್ಲಿ ಎಲ್ಲರನ್ನೂ ತನ್ನವರೆಂದು ಅಂದುಕೊಳ್ಳುತ್ತಾಳೆ. ಅತ್ತೆ ಅಂದರೆ ಅವಳಿಗೆ ಮತ್ತೂಬ್ಬಳು ತಾಯಿ. ಮಗಳು ತಪ್ಪು$ಮಾಡಿದಾಗ ತಿದ್ದಿ ಬುದ್ಧಿ ಹೇಳುವಂತೆ ಅತ್ತೆ ತನ್ನ ಸೊಸೆಗೂ ಬುದ್ಧಿ ಹೇಳಬೇಕು. ಸೊಸೆಯ ತಪ್ಪುಗಳನ್ನು ಎತ್ತಿ ಹಿಡಿದು ದೂಷಿಸುವ ಬದಲು ಸರಿಪಡಿಸಿಕೊಳ್ಳಲು ಸೂಚಿಸಬೇಕು. ಹೀಗಾದಾಗಲಷ್ಟೇ ಎಲ್ಲರ ಸೊಸೆಯೂ ಸರ್ವಗುಣ ಸಂಪನ್ನೆಯಾಗಿ ಬದಲಾಗಲು ಸಾಧ್ಯ.
ವಿನುತಾ ಪೆರ್ಲ