Advertisement

 ಬರೋಬ್ಬರಿ 8 ತಿಂಗಳಿಗಾಗುವ ಊಟ ಸಿದ್ಧಪಡಿಸಿ ಇಟ್ಟುಕೊಂಡಿರುವ ಮಹಿಳೆ!

09:24 PM Aug 29, 2022 | Team Udayavani |

ವಾಷಿಂಗ್ಟನ್‌: ಪ್ರತಿನಿತ್ಯ ಅಡುಗೆ ಮಾಡುವುದೇ ಒಂದು ದೊಡ್ಡ ಸಮಸ್ಯೆ. ಆದರೆ ಅಮೆರಿಕದ ಇಂಡಿಯಾನಾದ ಮಹಿಳೆ ಕೆಲ್ಸೆ ಶಾ(30)ಗೆ ಈ ತಲೆನೋವಿಲ್ಲ. ಏಕೆಂದರೆ ಅವರು ಈಗಾಗಲೇ ಬರೋಬ್ಬರಿ 8 ತಿಂಗಳಿಗಾಗುವಷ್ಟು ಅಡುಗೆ ತಯಾರಿಸಿಟ್ಟುಕೊಂಡಿದ್ದಾರಂತೆ!

Advertisement

ಹೌದು. ಕೆಲ್ಸೆ 2017ರಲ್ಲಿ ಪತಿಯೊಂದಿಗೆ ತೋಟದಲ್ಲಿಯೇ ಮನೆ ಮಾಡಿಕೊಂಡು ಜೀವನ ಆರಂಭಿಸಿದ್ದಾರೆ. ಅಲ್ಲಿ ಅವರು ಎಲ್ಲ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಮುಂದಿನ 8 ತಿಂಗಳ ದಿನಕ್ಕೆ ಎರಡು ಬಾರಿ ತಿನ್ನುವುದಕ್ಕೆ ಆಗುವಷ್ಟು ಹಣ್ಣು ಮತ್ತು ತರಕಾರಿಯನ್ನು ಕೆಲ್ಸೆ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಅವುಗಳು ಕೆಡದಂತೆ ಒಣಸಿ, ಉಪ್ಪಿನಕಾಯಿ ಮಾಡಿಕೊಂಡು ಅಥವಾ ಪುಡಿ ಮಾಡಿ ಇಟ್ಟುಕೊಂಡಿದ್ದಾರೆ. ಅವುಗಳನ್ನು ಕೆಡದಂತೆ ದೀರ್ಘಾವಧಿ ಕಾಲ ಉಳಿಸಿಕೊಳ್ಳುವುದಕ್ಕೇ ಕೆಲ್ಸೆ ವಿಶೇಷ ತರಬೇತಿಯನ್ನೂ ಪಡೆದಿದ್ದಾರೆ. ಅದರಿಂದಾಗಿ ಕೊರೊನಾ ಸಮಯದಲ್ಲಿ ನಮಗೆ ಊಟದ ಸಮಸ್ಯೆಯೇ ಬರಲಿಲ್ಲ ಎನ್ನುತ್ತಾರೆ ಕೆಲ್ಸೆ.

ಅಕ್ಕಿ, ಗೋಧಿಯಂತಹ ಕೆಲವು ಅವಶ್ಯ ಸಾಮಾಗ್ರಿಗಳನ್ನು ತರುವುದಕ್ಕೆ ಎರಡು ವಾರಗಳಿಗೊಮ್ಮೆ ಪೇಟೆಗೆ ಹೋಗಿ ಬರುವ ಅಭ್ಯಾಸ ಈ ದಂಪತಿಗಿದೆ.

Advertisement

Udayavani is now on Telegram. Click here to join our channel and stay updated with the latest news.

Next