Advertisement

ತಾಯಿ-ಮಗು “ಸಹಾಯವಾಣಿ’ಆರಂಭಕ್ಕೆ ಚಿಂತನೆ: ಪ್ರಿಯಾಂಕ್‌

05:12 AM Mar 10, 2019 | Team Udayavani |

ಕಲಬುರಗಿ: ರಾಜ್ಯ ಸರ್ಕಾರ ತಾಯಿ ಹಾಗೂ ಮಗುವಿನ ಆರೋಗ್ಯ ಕುರಿತು ಸಹಾಯವಾಣಿ ಆರಂಭಿಸುವ ಚಿಂತನೆ ಹೊಂದಿದ್ದು, ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

Advertisement

ನಗರದ ಬಿಗ್‌ ಬಜಾರ ಎದುರಿಗೆ ಆರಂಭವಾಗಿರುವ ಹೆಜಲ್‌ ಟ್ರಿ ಮದರ್‌ ಆಂಡ್‌ ಚೈಲ್ಡ್‌ ಹಾಸ್ಪಿಟಲ್‌ಗೆ ಭೇಟಿ ನೀಡಿ ಮಾತನಾಡಿ, ತಾಯಿ ಹಾಗೂ ಮಗುವಿನ ಆರೋಗ್ಯದ ಕುರಿತು ಒಂದೇ ಸೂರಿನಡಿ ಚಿಕಿತ್ಸೆ ನೀಡುವ ಪರಿಕಲ್ಪನೆ ಅದ್ಭುತವಾಗಿದೆ. ಅಲ್ಲದೇ ಆಸ್ಪತ್ರೆ ಸ್ವತ್ಛತೆ ಕಾರ್ಯ ಮೆಚ್ಚುವಂತದ್ದಾಗಿದೆ ಎಂದರು.

ಕಲಬುರಗಿ ನಗರ ಆರೋಗ್ಯ ವಿಭಾಗದಲ್ಲಿ ಮುಂದಿನ ದಿನಗಳಲ್ಲಿ ಪ್ರಾದೇಶಿಕ ಕೇಂದ್ರವಾಗಿ ಹೊಮ್ಮುತ್ತಿದೆ. ಸರ್ಕಾರದ ಹಿಂದಿನ ಪ್ರಯತ್ನದ ಫಲವಾಗಿ ಜಯದೇವ, ಕಿದ್ವಾಯಿ ಇತ್ಯಾದಿ ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಇವುಗಳ ಸೇವೆ ಪಡೆದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಸರ್ಕಾರ ಎಂಎಂಆರ್‌ ಹಾಗೂ ಐಎಂಆರ್‌ನ್ನು ನಗರಕ್ಕೆ ತರಲು ಪ್ರಯತ್ನಿಸುತ್ತಿದೆ ಎಂದರು.

ರಾಜ್ಯ ಸರ್ಕಾರ ಯಶಸ್ವಿ ಯೋಜನೆಯಾದ ಯಶಸ್ವಿನಿ ಯೋಜನೆ ಜಾರಿಗೆ ತರಲಿದೆ. ಸರ್ಕಾರದೊಂದಿಗೆ ಸಾರ್ವಜನಿಕ ಆರೋಗ್ಯ ಯೋಜನೆಗಳನ್ನು ಖಾಸಗಿ ಸೆಕ್ಟರ್‌ನವರು ತಮ್ಮ ಕೊಡುಗೆ ನೀಡಬಹುದಾಗಿದೆ. ಅಲ್ಲದೇ ಜನೋಪಕಾರಿ ಹಾಗೂ ಜನಸ್ನೇಹಿಯಾದ ಯಶಸ್ವಿನಿ ಯೋಜನೆಯನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರ 2001ರಲ್ಲಿ ಜಾರಿಗೆ ತಂದಿತ್ತು. ದೇಶದಲ್ಲಿಯೇ ಈ ತರಹದ್ದು ಪ್ರಥಮ ಯೋಜನೆಯಾಗಿದೆ ಎಂದು ಹೇಳಿದರು. 

ಡಾ| ವಿಕ್ರಮ ಸಿದ್ದಾರೆಡ್ಡಿ, ಡಾ| ಪ್ರಶಾಂತ ಕುಲಕರ್ಣಿ, ಡಾ| ಮಮತಾ ಪಾಟೀಲ, ಡಾ| ಚಂದ್ರಿಕಾ ಲಾಖೆ, ಸಂತೋಷ ಪಾಟೀಲ, ಗಣೇಶ ವಂದನೆ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next