Advertisement

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ತಾಯಿ- ಮಗಳು ಸಾವು

05:56 PM Dec 20, 2022 | Team Udayavani |

ಚಿಕ್ಕಮಗಳೂರು: ಕೆರೆಯಲ್ಲಿ ಮುಳುಗಿ ತಾಯಿ- ಮಗಳು ಸಾವನ್ನಪ್ಪಿದ ಘಟನೆ ಚಿಕ್ಕಮಗಳೂರು ತಾಲೂಕಿನ ವಡ್ಡರಹಳ್ಳಿ ಕೆರೆಯಲ್ಲಿ ನಡೆದಿದೆ.

Advertisement

ಮೃತರನ್ನು ಶೋಭ (40 ವ), ವರ್ಷ (8 ವ) ಎಂದು ಗುರುತಿಸಲಾಗಿದೆ. ಜೊತೆಯಲ್ಲಿದ್ದ ಮಗ ಚೇತನ್ ಪಾರಾಗಿದ್ದಾನೆ.

ಇದನ್ನೂ ಓದಿ:ಮ್ಯಾನ್ ಹೋಲ್ ದುರಂತಗಳಿಗೆ ಕನ್ನಡಿ ಹಿಡಿದ ‘ವಿಟ್ನೆಸ್’ ಸಿನಿಮಾ

ದನ ಮೇಯಿಸಲು ಹೋದಾಗ ಈ ಘಟನೆ ನಡೆದಿದೆ. ಈ ತಾಯಿ – ಮಕ್ಕಳು ನೀರಿನ ಪ್ರಮಾಣ ಕಡಿಮೆ ಇರುವ ಕಡೆ ಕೆರೆ ದಾಟುತ್ತಿದ್ದರು. ಮಗಳು ನೀರಿನ ಪ್ರಮಾಣ ಹೆಚ್ಚಿರುವ ಕಡೆ ಹೋಗಿ ಸಿಲುಕಿಕೊಂಡಾಗ ತಾಯಿ ಶೋಭ ರಕ್ಷಣೆಗೆ ತೆರಳಿದ್ದಾರೆ. ಈ ವೇಳೆ ಅವರೂ ನೀರುಪಾಲಾಗಿದ್ದಾರೆ.

ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next