ಚಿಕ್ಕಬಳ್ಳಾಪುರ: ಚಲಿಸುತ್ತಿದ್ದ ರೈಲಿನಿಂದ ಮಗುವಿನೊಂದಿಗೆ ತಾಯಿಯೊಬ್ಬರು ಅತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಅದೃಷ್ಟವಶಾತ್ ತಾಯಿ, ಮಗು ಪ್ರಾಣಪಾಯದಿಂದ ಪಾರಾಗಿದ್ದು ಘಟನೆಯಲ್ಲಿ ಮಹಿಳೆಗೆ ಕಾಲು ಮುರಿದಿದ್ದರೆ ಮಗುವಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಿಂತಾಮಣಿ ತಾಲೂಕಿನ ಪಲ್ಲಿಗಡ್ಡ ಗ್ರಾಮದ ಚಂದ್ರಕಲಾ ತನ್ನ ನಾಲ್ಕು ವರ್ಷದ ಮಗು ದಿವ್ಯಶ್ರೀ ಸಹಿತ ನಗರದ ಕರಿಯಪಲ್ಲಿ ಸಮೀಪ ಚಲಿಸುತ್ತಿದ್ದ ರೈಲುನಿಂದ ಕೆಳಗೆ ಜಿಗಿದು ಅತ್ಮಹತ್ಯಗೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆಗೆ ಕೈ ಕಾಲು ಮುರಿದಿದ್ದು ಮಗುವಿಗೆ ಗಂಭೀರ ಗಾಯಗಳಾಗಿವೆ. ಘಟನೆ ಇಂದು ಬೆಳ್ಳಗೆ 6.30ರ ಸಮಯದಲ್ಲಿ ತಾಲೂಕಿನ ಕರಿಯಪಲ್ಲಿ ಬಳಿ ನಡೆದಿದೆ.
ವಿಷಯ ತಿಳಿದ ಚಿಂತಾಮಣಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಅಮರೇಶ್ ಮತ್ತು ಕೀ ಮ್ಯಾನ್ ನಾರಾಯಣ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಮಗುವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಚಿಕಿತ್ಸೆ ಗೆ ಸ್ಪಂದಿಸಿದ್ದು ಸದ್ಯ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ಬಾರದ ಕುಟುಂಬಸ್ಥರು
ಚಂದ್ರಕಲಾ ಆತ್ಮಹತ್ಯೆಗೆ ಬಗ್ಗೆ ಪತಿ ಅಮರನಾಥರವರಿಗೆ ದೂರವಾಣಿ ಮೂಲಕ ಸಾರ್ವನಿಕರು ಮಾಹಿತಿ ತಿಳಿಸಿದರು ಸ್ಥಳಕ್ಕೆ ಬಾರದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.