Advertisement
ಮದಾಲಸಾಳು, ಋತಧ್ವಜ ಎಂಬ ರಾಜ ಬೇಡಿ ಪಡೆದ ಪತ್ನಿ. ಅವರಿಗೆ ಮೊದಲ ಮಗ ಹುಟ್ಟಿದಾಗ ಋತಧ್ವಜ ಮಗುವಿಗೆ ವಿಕ್ರಾಂತ ಎಂದು ನಾಮಕರಣ ಮಾಡುತ್ತಾನೆ. ಆ ಹೆಸರು ಕೇಳಿ ಮದಾಲಸಾ ನಗುತ್ತಾಳೆ. ಮಗುವಿಗೆ ಬಾಲ್ಯದಿಂದಲೂ ಆಕೆ ಪಾರಮಾರ್ಥಿಕ ತಣ್ತೀಗಳನ್ನು ಬೋಧಿಸುವ ಜೋಗುಳ ಹಾಡುತ್ತಾಳೆ.
ಸಂಸಾರ ಮಾಯಾ ಪರಿವರ್ಜಿತೋಸಿ
ಸಂಸಾರ ಸ್ವಪ್ನಂ ತ್ಯಜಮೋಹ ನಿದ್ರಾಂ
ನ ಜನ್ಮ ಮೃತ್ಯು ತತ್ ಸತ್ ಸ್ವರೂಪೇ ||
ನೀನು ಪರಿಶುದ್ಧ ಆತ್ಮ, ನಿರಂಜನ ರೂಪನು. ಸಂಸಾರ ಮಾಯೆಯಿಂದ ನೀನು ಮುಕ್ತನು. ಮೋಹ ನಿದ್ರೆಯನ್ನು ತ್ಯಜಿಸು. ನಿನಗೆ ಯಾವುದೇ ಹೆಸರಿಲ್ಲ. ಇದು ಕೇವಲ ಕಲ್ಪನೆಯಿಂದ ಇಟ್ಟಿರುವ ಹೆಸರು. ಪಂಚಭೂತಗಳಿಂದ ಆದ ಈ ದೇಹವು ನಿನ್ನದಲ್ಲ. ಏಕೆ ಅಳುತಿರುವೆ? ನೀನು ಈ ದೇಹಕ್ಕೆ ಅಂಟಿಕೊಂಡು ಮೋಹಕ್ಕೊಳಗಾಗಬೇಡ, ಎಂದು ತಣ್ತೀ ಪದಗಳಂತೆ ಜೋಗುಳ ಹಾಡುತ್ತಾಳೆ. ಅವರ ಎರಡನೆಯ ಮಗ ನಿಗೆ ಸುಬಾಹು ಎಂದು ನಾಮಕರಣವಾಗುತ್ತದೆ. ಮೂರನೆಯ ಮಗನಿಗೆ ಅರಿಮರ್ಧನ ಎಂದು ಋತಧ್ವಜ ಹೆಸರಿಡುತ್ತಾನೆ. ಮೂರು ಬಾರಿಯೂ ಮಕ್ಕಳಿಗೆ ಕ್ಷತ್ರಿಯೋಚಿತ ಹೆಸರಿಟ್ಟಾಗ ಆಕೆ ಗಂಡನೆಡೆಗೆ ಕುಹಕದ ನಗೆ ಬೀರಿರುತ್ತಾಳೆ. ನಾಲ್ಕನೆಯ ಮಗು ಜನಿಸಿದಾಗ ಮಗುವಿಗೆ ಹೆಸರಿಡುವ ಹೊಣೆಯನ್ನು ಋತಧ್ವಜ ಮದಾಲಸಾಳಿಗೆ ವಹಿಸುತ್ತಾನೆ. ಆಕೆ ಮಗನಿಗೆ “ಅಲರ್ಕ’ ಪೂರ್ಣಜ್ಞಾನಾನಂದ ಸ್ವರೂಪ ಎಂಬ ಅರ್ಥ ಮತ್ತು ಅದೇ ನಾಮಪದಕ್ಕೆ ಕೋಶ ದೊಳಗೆ “ಹುಚ್ಚುನಾಯಿ’ ಎಂಬ ಅರ್ಥವೂ ಇರುವ ಹೆಸರಿಡುತ್ತಾಳೆ. ಈಗ ನಗುವ ಸರದಿ ರಾಜನದಾಗು ತ್ತದೆ. ಆಕೆ ತನ್ನ ತರ್ಕ ಮುಂದಿಟ್ಟು ಮಾತಿನಲ್ಲಿ ಗಂಡ ನನ್ನು ಸೋಲಿಸುತ್ತಾಳೆ. ನಾಲ್ಕನೆಯ ಮಗುವಿಗೆ ವೀರ ಗೀತೆಗಳ ಜೋಗುಳ ಹಾಡುತ್ತಾಳೆ. ಅಲರ್ಕ ದೊಡ್ಡವ ನಾದ ಮೇಲೆ ಆಕೆಯೇ ಯುದ್ಧವಿದ್ಯೆ ಕಲಿಸುತ್ತಾಳೆ. ಮಗನಿಗೆ ಗುರುವಾಗಿ ತನ್ನೆಲ್ಲ ಶಕ್ತಿಯನ್ನೂ ಧಾರೆ ಎರೆಯುತ್ತಾಳೆ. ಇಂದ್ರನಿಗೆ ಸಮನಾಗಿ ರಾಜ್ಯವ ನ್ನಾಳು. ಧರ್ಮದಿಂದ ರಾಜ್ಯ ಕೋಶ ಸಂಪತ್ತನ್ನು ವೃದ್ದಿ ಸುವ ನೀನು ಧನ್ಯನಾಗುತ್ತೀಯ. ಧರ್ಮ ಮಾರ್ಗ ದಲ್ಲಿ ನಿರಂತರ ಇದ್ದು ಜ್ಞಾನಿಗಳನ್ನು ಗೌರವಿಸು. ಸ್ತ್ರೀ ಲಂಪಟನಾಗಬೇಡ. ಸದಾ ಪರರ ಒಳಿತಿಗಾಗಿ ಕಾರ್ಯೋನ್ಮುಖನಾಗು ಎಂದು ಉಪದೇಶ ಮಾಡು ತ್ತಾಳೆ. ಒಂದು ಉಂಗುರ ಕೊಟ್ಟು ಇದರಲ್ಲಿ ಇರುವ ಶ್ಲೋಕವನ್ನು ಅಗತ್ಯ ಬಿದ್ದಾಗ ಬಳಸಿಕೋ ಎಂದು ಉಂಗುರದಲ್ಲಿ ಬರೆದು ಕೊಡುತ್ತಾಳೆ. ಆ ಶ್ಲೋಕ “ಸಂಗಃ ಸರ್ವಾತ್ಮನಾ ತ್ಯಜಃ ಸಚೇತ್ ತ್ಯಕು¤ಂ ನ ಶಕ್ಯತೇ ಣ ಸದಿºಸ್ಸಃ ಕರ್ತವ್ಯಃ ಸತಾಂ ಸಂಗೋ ಹಿ ಭೇಷಜಮ್’ ಎಂದಾಗಿರುತ್ತದೆ. ಅಲರ್ಕ ಉತ್ತಮ ರಾಜನಾಗಿ ಯಶಸ್ವಿಯಾಗಿ ರಾಜ್ಯ ಭಾರ ಮಾಡು ತ್ತಾನೆ. ವರ್ಷಗಳು ಕಳೆದಂತೆ ಅಲರ್ಕನಿಗೆ ಸತ್ಯದ ಸಾಕ್ಷಾತ್ಕಾರವಾಗಿ ರಾಜ್ಯಾಡಳಿತದಲ್ಲಿ ಪರಮ ವಿರಕ್ತ ನಾಗಿ ದತ್ತಾತ್ರೇಯನ ಶಿಷ್ಯನಾಗುತ್ತಾನೆ.
Related Articles
Advertisement
ಒಳಾಂಗಣದ ಆಟಗಳಾದ ಚೆಸ್, ಪಗಡೆ, ಕಡ್ಡಿ ಆಟ ಹಾವುಏಣಿ ಚನ್ನೆಮಣೆ ಎಲ್ಲವೂ ಹೆಚ್ಚಿನ ಮನೆ ಗಳಲ್ಲಿ ಕೊರೊನಾ ಮೊದಲ ಅಲೆಯಲ್ಲೇ ಆಡಿ ಆಡಿ ಕೊಚ್ಚಿ ಹೋಗಿರುವುದರಿಂದ ಈಗ ಬೇರೆ ಆಟಗಳು ಬೇಕು. ಅದೆಷ್ಟು ಮಜಾ ಕೊಡುವ ಒಳಾಂಗಣ ಆಟ ಆಡಿದರೂ ಕ್ರಿಕೆಟ್ ಆಡಿದಷ್ಟು ತೃಪ್ತಿ ಮಕ್ಕಳಿಗೆ ಸಿಗುವು ದಿಲ್ಲವಂತೆ. ಇದು ನಾನು ನನ್ನಂತೇ ಅನೇಕ ಅಮ್ಮಂದಿ ರನ್ನು ಕೇಳಿ ಖಚಿತಪಡಿಸಿಕೊಂಡ ಸತ್ಯ. ಹಾಗಾಗಿ ಮನೆಯ ಒಂದು ಕೋಣೆಯನ್ನು ಕ್ರಿಕೆಟ್ ಸ್ಟೇಡಿಯಂ ಆಗಿಸಬೇಕು. ಮನೆಯ ಲೈಟು ಟೀವಿಗಳಿಗೆ ತಾಗ ದಂತೆ ಎಚ್ಚರ ವಹಿಸಿ ನಿಧಾನವಾಗಿ ಬೌಲಿಂಗ್, ಬ್ಯಾಟಿಂಗಿಗೆ ವ್ಯವಸ್ಥೆ ಮಾಡಿಕೊಡಬೇಕು. ಯೂಟ್ಯೂಬ್ ನಿಂದ ಸ್ಟೇಡಿಯಂ ಹಾಹಾಕಾರದ ಹಿನ್ನೆಲೆ ಸಂಗೀತ ಹುಡುಕಿ ಹಾಕಿಕೊಂಡರೆ, ಅಪ್ಪನೋ ಅಮ್ಮನೋ ಕಾಮೆಂಟರಿ ಹೇಳಿದರೆ ನಮ್ಮ ಮನೆಗಳೂ ಕೂಡ ಯಾವ ಇಂಟರ್‌ನ್ಯಾಶನಲ್ ಸ್ಟೇಡಿಯಂಗೂ ಕಡಿಮೆ ಎಂದೆನಿಸುವುದಿಲ್ಲ. ಆಟ ಮುಗಿದ ಮೇಲೆ ಗೆದ್ದವ ರ್ಯಾರು? ಸೋತವರು ಸೋತಿದ್ದು ಹೇಗೆ? ಎಂದು ಕನ್ನಡದಲ್ಲೋ ಇಂಗ್ಲಿಷ್‌ನಲ್ಲೋ ಒಂದರ್ಧ ಪುಟ ಪತ್ರಿಕಾ ವರದಿ ಬರೆಯಲು ಹೇಳಿದರೆ ಮತ್ತರ್ಧ ಗಂಟೆ ಅಲ್ಲಿ ಕಳೆದಿರುತ್ತದೆ. ಮಕ್ಕಳ ಸ್ವಂತ ವಾಕ್ಯ ರಚನೆಯ ಸಾಮರ್ಥ್ಯ ಕೂಡ ಹೆಚ್ಚುತ್ತದೆ.
ಶಾಲೆ ಕನಸೆಂಬಂತೆ ಆಗಿರುವ ಈ ದಿನಗಳಲ್ಲಿ, ತನ್ನ ನಾಲ್ಕು ಮಕ್ಕಳಿಗೂ ಮನೆಯನ್ನೇ ಪಾಠಶಾಲೆಯನ್ನಾಗಿ ಮಾಡಿಕೊಂಡ ಮದಾಲಸಾ ತುಂಬಾ ನೆನಪಾಗುತ್ತಾಳೆ ಮತ್ತು ಮಾದರಿಯಾಗುತ್ತಾಳೆ. ಈಗ ನಾವು ಅಮ್ಮಂದಿರು ಮಕ್ಕಳ ಕ್ಲಾಸ್ ವರ್ಕ್, ಹೋಂ ವರ್ಕ್, ಪಾಠದ ತುದಿಯ ಚಟುವಟಿಕೆಗಳು ಪ್ರಾಜೆಕ್ಟ್ ವರ್ಕ್ ಎಂದು ಇಡೀ ದಿನ ತಲೆ ಕೆಡಿಸಿಕೊಳ್ಳುತ್ತೇವೆ. ಶಾಲೆಯಲ್ಲಿ ಮಾಡಬೇಕಾದ್ದೆಲ್ಲವನ್ನು ನಾವೇ ಬರೆಯಿಸಿ, ತಪ್ಪುಗಳನ್ನು ತಿದ್ದಿ ಬರೆಯಿಸಿ, ಕೊಂಬು ಇಳಿ ತಲೆಕಟ್ಟು ಎಲ್ಲವನ್ನೂ ಹದವಾಗಿ ಹಾಕಿಸಿ ಯಾವ ವಿಷಯ ಯಾವ ಗ್ರೂಪ್ ಎಂದು ಹುಡುಕಿ ಪೋಸ್ಟ್ ಮಾಡುವಷ್ಟರಲ್ಲಿ ನಮ್ಮ ತಾಳ್ಮೆ ಕೈ ಜಾರಿ ಹೋಗಿರುತ್ತದೆ. ಗುಂಪಿನಲ್ಲಿ ಹೋಂ ವರ್ಕ್, ಕ್ಲಾಸ್‌ವರ್ಕ್ ಪೋಸ್ಟ್ ಮಾಡುವವರಲ್ಲಿ ನಾವೇ ಕೊನೆಯ ವರಾದರಂತೂ ಉತ್ಸಾಹ ಮತ್ತೂ ಇಳಿದು “ನಾವ್ಯಾವಾಗ ಬರವಣಿಗೆಯಲ್ಲಿ ಚುರುಕಾ ಗುವುದು?’ ಎಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಮನಸ್ಸಿನಲ್ಲಿ ಮೂಡುತ್ತದೆ. ಇಡೀ ದಿನದಲ್ಲಿ ಇಷ್ಟೆಲ್ಲ ಬರವಣಿಗೆ, ಆಟಗಳ ಮಧ್ಯೆಯೂ ಮಕ್ಕಳಿಗೆ ಕೆಲವು ನಿಮಿಷಗಳು ಕಳೆಯಲು ಬಾಕಿ ಉಳಿಯುತ್ತದೆ. ಅವರು ಕರೆಯುವ ಆಟಗಳಿಗೆ ಸಮಯ ಮಾಡಿ ಕೊಳ್ಳಲೇ ಬೇಕು. ನಮ್ಮ ಮನೆಯಲ್ಲಿ ಅನೇಕ ಹಳೆಯ ಆಟಗಳೆಲ್ಲ ಬೇಸರ ಬಂದಿರುವುದರಿಂದ ಮಕ್ಕಳು ಹೊಸ ಆಟ ಹುಡುಕುತ್ತಾರೆ. ಇತ್ತೀಚೆಗೆ ಹೆಚ್ಚಾಗಿ ಚಕ್ರವರ್ತಿ ಅಶೋಕ ಸಾಮ್ರಾಟ್, ವೀರ್ ಶಿವಾಜಿ ಯಂತಹ ಐತಿಹಾಸಿಕ ಧಾರಾವಾಹಿಗಳನ್ನು ನೋಡು ವುದರಿಂದ ಅದೇ ಸಾಮ್ರಾಜ್ಯದ ಆಟ ಆಡಲು ಆಸಕ್ತಿ ತೋರಿಸುತ್ತಾರೆ.
ನಮ್ಮ ಮನೆಯ ಕೋಣೆಗಳೆಲ್ಲ ಒಂದೊಂದು ಸಾಮ್ರಾಜ್ಯ. ಕೋಟೆ ಭೇದಿಸಿ ಯುದ್ದಕ್ಕೆ ಆಹ್ವಾನ ನೀಡಿ ಸಾಮ್ರಾಜ್ಯ ವಶಪಡಿಸಿಕೊಳ್ಳುವ ಆಟವನ್ನು ಬಹಳ ರಚನಾತ್ಮಕವಾಗಿ ಆಡುತ್ತಾರೆ. ನಾನಂತೂ ರಾಜಮಾತೆಯಾಗಿ ಮನಸಾರೆ ತೃಪ್ತಿ ಪಟ್ಟಿದ್ದೇನೆ. ಆಡುವುದು ಆಟವಾದರೂ ಇಂತಹ ಆಟಗಳಲ್ಲಿ ಇಸ್ವಿ ನೆನಪಿಟ್ಟುಕೊಳ್ಳುವ ಗೋಜಿಲ್ಲದೇ ಮಕ್ಕಳಿಗೆ ಇತಿಹಾಸದ ಅರಿವು ಮತ್ತು ಚಿಕ್ಕ ಮಕ್ಕಳಿ ಗಾದರೆ ಅವರ ಶಬ್ದಕೋಶವೂ ಬೆಳೆಯುತ್ತದೆ. ಇನ್ನು ಕೊರೊನಾ ಮೂರನೆಯ ಅಲೆ ಬಂದರೆ ಆ ದಿನಗಳಿಗಾಗಿ ಮತ್ತೂ ಹೊಸ ಹೊಸ ಆಟಗಳನ್ನು ಹುಡುಕಿಕೊಳ್ಳಬೇಕು. ಒಟ್ಟಿನಲ್ಲಿ ಇಡೀ ದಿನ ಮಕ್ಕಳ ಹಿಂದೆಯೇ ಇರುವಂತೆ ಆದರೂ ಅಪ್ಪ ಅಮ್ಮನ ಸಾಂಗತ್ಯ ಮುಂದೊಂದು ದಿನ ಮಕ್ಕಳ ಜೀವನದಲ್ಲಿ ಒಳ್ಳೆಯ ಫಲ ಕೊಟ್ಟೇ ಕೊಡುತ್ತದೆ ಎಂಬ ನಂಬಿಕೆ ನಮಗಿದ್ದರೆ ಅಷ್ಟೇ ಸಾಕು.
ಮೂರು ಹೊತ್ತೂ ಮಕ್ಕಳ ಕಲಿಕೆ, ಊಟ ತಿಂಡಿ, ಅವರನ್ನು ಖುಷಿಯಾಗಿಡುವುದು ಹೇಗೆ ಎಂದು ಚಿಂತಿಸುವ ಅಮ್ಮಂದಿರ ಮನಃಸ್ಥಿತಿಗೆ “ಮದಾಲಸಾ ಕಾಂಪ್ಲೆಕ್ಸ್’ ಎಂದು ಕರೆಯಬಹುದು. ತಾಯಂದಿರಲ್ಲಿ ಸಹಜವಾಗಿಯೇ ಬರುವ ಈ ಪ್ರಜ್ಞೆ ಇಂದಿನ ದಿನಗ ಳಲ್ಲಿ ಹೆಚ್ಚೆಚ್ಚು ಜಾಗ್ರತವಾಗಬೇಕಾಗಿದೆ. ಪರಿಸ್ಥಿತಿ ನಿಭಾಯಿಸುವಲ್ಲಿ ಒಂದೊಂದು ಮನೆಯ ವಾತಾ ವರಣವೂ ವಿಭಿನ್ನವಾಗಿರುತ್ತದೆ. ಆದರೆ ನಾವೆಲ್ಲರೂ ಮದಾಲಸಾಳಂತೆ ಸ್ವಲ್ಪವೂ ಶಕ್ತಿ ಕುಂದದೇ, ನಮ್ಮ ನಮ್ಮ ಅಂತಃಶಕ್ತಿ, ಮನೋಬಲ ಹೆಚ್ಚಿಸಿಕೊಳ್ಳುವ ಮಾರ್ಗ ಹುಡುಕಿಕೊಂಡು ಸಮಾಜದ ದೃಷ್ಟಿ ಯಿಂದಲೂ, ಮಕ್ಕಳ ಹಿತದೃಷ್ಟಿಯಿಂದಲೂ “ದಿ ಬೆಸ್ಟ್’ ಅಮ್ಮನಾಗಲು ಪ್ರಯತ್ನಿಸೋಣ.
– ವಿದ್ಯಾ ದತ್ತಾತ್ರಿ