Advertisement

Bhopal: 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸೆರೆ

01:52 PM Jun 22, 2023 | Team Udayavani |

ಭೋಪಾಲ್: 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಮಧ್ಯಪ್ರದೇಶದ ರಾಜ್‌ಗಢ್ ಪಟ್ಟಣದ ಜನರ ನಿದ್ದೆಗೆಡಿಸಿದ್ದ ಮೋಸ್ಟ್ ವಾಂಟೆಡ್ ಕೋತಿಯೊಂದನ್ನು ಸೆರೆ ಹಿಡಿಯುವಲ್ಲಿ ಉಜ್ಜಯಿನಿಯ ರಕ್ಷಣಾ ತಂಡ ಯಶಸ್ವಿಯಾಗಿದೆ.

Advertisement

ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ರಾಜ್‌ಗಢ್ ಪಟ್ಟಣದ ಸುತ್ತಮುತ್ತಲಿನ ಜನರ ಮೇಲೆ ಕೋತಿಯೊಂದು ದಾಳಿ ನಡೆಸಿ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು, ಇದರ ಕುರಿತು ಸ್ಥಳೀಯ ಆಡಳಿತ ಮಂಡಳಿಗೆ ದೂರು ನೀಡಿದರೂ ಕೋತಿಯನ್ನು ಸೆರೆ ಹಿಡಿಯಲು ಮಾತ್ರ ಸಾಧ್ಯವಾಗಲಿಲ್ಲ, ಈ ಕೋತಿಯ ಪರಾಕ್ರಮ ಊರಿನ ಕೆಲ ಮನೆಗಳಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಅಲ್ಲದೆ ಕೋತಿಯ ದಾಳಿಗೆ ಮಕ್ಕಳು, ಯುವಕರು ಸೇರಿ ಹಿರಿಯ ವ್ಯಕ್ತಿಗಳು ಗಾಯಕ್ಕೆ ತುತ್ತಾಗಿದ್ದಾರೆ, ಅಷ್ಟು ಮಾತ್ರವಲ್ಲದೆ ಕೆಲವು ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯೂ ನಡೆದಿದೆ. ಇದರ ದಾಳಿಗೆ ಹೆದರಿದ ಊರಿನ ಮಂದಿ ಮನೆಯಿಂದ ಹೊರಬರಲು ಹೆದರುತ್ತಿದ್ದರು, ಒಂದು ವೇಳೆ ಮನೆಯಿಂದ ಹೊರಬಂದರೂ ಸುರಕ್ಷತೆಗಾಗಿ ಕೈಯಲ್ಲಿ ಕೋಲು ಹಿಡಿದುಕೊಂಡು ಬರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕೋತಿಯನ್ನು ಹಿಡಿಯಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಕೋತಿ ಹಿಡಿದವರಿಗೆ 21,000 ಬಹುಮಾನವನ್ನೂ ಘೋಷಣೆ ಮಾಡಿತ್ತು.

ಅದರಂತೆ ಉಜ್ಜಯಿನಿಯಿಂದ ಬಂದ ರಕ್ಷಣಾ ತಂಡ ಡ್ರೋನ್ ಕ್ಯಾಮೆರಾ ಬಳಸಿ ಕೋತಿಯನ್ನು ಪತ್ತೆ ಹಚ್ಚಿ ಬಳಿಕ ಅರಿವಳಿಕೆ ನೀಡಿ ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ತಂಡ ಯಶಸ್ವಿಯಾಗಿದೆ. ಕೋತಿಯನ್ನು ಸೆರೆಹಿಡಿಯುತ್ತಿದ್ದಂತೆ ಸ್ಥಳೀಯರಲ್ಲಿದ್ದ ಆತಂಕ ದೂರವಾಗಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಬಳಿಕ ಕೋತಿಯನ್ನು ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋದ ರಕ್ಷಣಾ ತಂಡ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಇದನ್ನೂ ಓದಿ: ಅಂದು ಗ್ಯಾರಂಟಿಗಳ ಡಂಗುರ ಹೊಡೆದವರು ಈಗ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸಿಟಿ ರವಿ

Advertisement
Advertisement

Udayavani is now on Telegram. Click here to join our channel and stay updated with the latest news.

Next