Advertisement
ಸುಮಾರು ಏಳು ಅಡಿ ಎತ್ತರದ ಶಾಸನದ ಮೇಲ್ಭಾಗದಲ್ಲಿ ಪಾಣಿ ಪೀಠವನ್ನು ಹೊಂದಿದ ಲಿಂಗ ಮತ್ತು ಇಕ್ಕೆಲಗಳಲ್ಲಿ ದನ ಕರು ಮತ್ತು ದೀಪದ ಕೆತ್ತನೆಗಳಿವೆ.
Related Articles
ಅಧ್ಯಯನದ ಪ್ರಕಾರ ಈ ಊರಿನ ಹೆಸರು ಮೊಳತ್ತೂರು ಎಂದಿತ್ತು ಎಂದು ಹೇಳಲಾಗುತ್ತಿದ್ದು ಕರಾವಳಿ ತೀರದಿಂದ ಒಳ ಭಾಗದಲ್ಲಿರುವ ಈ ಗ್ರಾಮದಲ್ಲಿ ಎಷ್ಟೇ ಮಳೆ , ನೆರೆ ಬಂದರು ಈ ಊರು ಉಳಿಯುತ್ತಿತ್ತು ಇಲ್ಲಿನ ಗುಡ್ಡೆವಳಲಿನಲ್ಲಿರುವ ಶಿಲಾ ಶಾಸನದಂತೆ ಇಲ್ಲಿನ ಐತಿಹಾಸಿಕ ವೈಭವದ ಆಡಳಿತವನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಹೀಗಾಗಿ ಈ ಪ್ರದೇಶವನ್ನು ಶಾಸನಗಳು ಉಲ್ಲೇಖೀಸುವಂತೆ ದೇವಸ್ಥಾನ ಇರುವ ಸ್ಥಳವನ್ನು ” ಮಾಳತೂರು ಕೇರಿಯ ಮಹಾದೇವ ” ಎಂದು ನಮೂದಿಸಲ್ಪಟ್ಟಿತ್ತು. ವಿಜಯ ನಗರ ಸಾಮ್ರಾಜ್ಯದ ಸ್ಥಾಪಕರಲ್ಲೊಬ್ಬನಾದ ಒಂದನೇ ಬುಕ್ಕರಾಯನ ಆಳ್ವಿಕೆಯ ಶಾಸನವೊಂದು ದೇವಳದ ಗರ್ಭಗೃಹದ ಎದುರು ಶಿಲಾ ಶಾಸನ 34 ಸಾಲುಗಳನ್ನು ಕ್ರಿ.ಶ.1438 ಬರೆಸಿದ್ದಾಗಿದ್ದು ಇದು ಕನ್ನಡ ಭಾಷೆಯಲ್ಲಿದೆ. ಹೀಗೆ ಈ ಗ್ರಾಮದಲ್ಲಿ ಇನ್ನು ಕೆಲವು ಶಿಲಾ ಶಾಸನಗಳಿದ್ದು ಕೆಲವೊಂದು ಶಾಸನಗಳು ನೀರಿನಲ್ಲಿ ವೆ ಎಂದು ದಿ| ಡಾ| ಬಿ.ವಸಂತ ಶೆಟ್ಟಿಯವರು ತಮ್ಮ ಸಂಶೋಧನಾತ್ಮಕ ಲೇಖನದಲ್ಲಿ ಉಲ್ಲೇಖೀಸಿದ್ದಾರೆ.
Advertisement
ಸಂರಕ್ಷಿಸಿ ಅಧ್ಯಯನಗೈಯುವ ಕೆಲಸವಾಗಬೇಕುಸುಮಾರು 700 ವರ್ಷಗಳ ಇತಿಹಾಸ ಹೊಂದಿರುವ ಈ ಶಿಲಾ ಶಾಸನಗಳ ಬಗ್ಗೆ ನಮ್ಮ ಪೂರ್ವಜರು ಹೇಳುವಂತೆ ಇತಿಹಾಸ ಪ್ರಸಿದ್ಧ ಮಹತೋಭಾರ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಳಪಟ್ಟಿದ್ದು ಆಗ ದೇವಳಕ್ಕೆ ಸಂಬಂಧಿಸಿದ ನೂರಾರು ಎಕರೆ ಹೊಲವನ್ನು ಕಾಯಲು ಇಬ್ಬರು ಕಾವಲುಗಾರರಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಶಾಸನದಲ್ಲಿ ಲಿಂಗ ಹಾಗೂ ಇದರ ಎರಡು ಬದಿಯಲ್ಲಿ ದನ ಕರು ಮತ್ತು ದೀಪದ ಸಂಕೇತಗಳಿರುವುದರಿಂದ ಇದರ ಅನತಿ ದೂರದಲ್ಲಿಯೇ ವಿಷ್ಣುವಿನ ಸಾನ್ನಿಧ್ಯದ ಕುರುಹುಗಳಿದೆ ಎನ್ನುವುದು ಆರೂಢ ಶಾಸ್ತ್ರದಲ್ಲಿ ಉಲ್ಲೇಖೀಸಿದ್ದಾರೆ. ಇಂತಹ ಅತ್ಯಮೂಲ್ಯ ಶಾಸನಗಳು ಸಂರಕ್ಷಿಸಿ ಅಧ್ಯಯನಗೈಯಬೇಕಾದ ಅಗತ್ಯತೆ ಇದೆ.
-ಸುರೇಂದ್ರ ಹೆಗ್ಡೆ ಹಲ್ತೂರು,
ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಉಳ್ತೂರು