ನವದೆಹಲಿ : ಹೊಸ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ದೆಹಲಿಯ ಕೆಂಪುಕೋಟೆ ಪ್ರವೇಶಿಸಿ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡಿರುವುದನ್ನು ನಾನು ಖಂಡಿಸುತ್ತೇನೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
Advertisement
ಗಣರಾಜ್ಯೋತ್ಸವದಂದು ಪವಿತ್ರ ತಿರಂಗವನ್ನು ಹೊರತ ಪಡಿಸಿ ಯಾವುದೇ ಧ್ವಜ ಕೆಂಪುಕೋಟೆಯ ಮೇಲೆ ಹಾರಬಾರದು. ನಾನು ಮೊದಲಿನಿಂದಲೂ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತಿದ್ದೆ. ಆದರೇ, ಇಂದು ಅವರು ಕಾನೂನು ಬಾಹೀರವಾಗಿ ನಡೆದುಕೊಂಡದ್ದನ್ನು ಕ್ಷಮಿಸುವುದಕ್ಕೆ ಸಾದ್ಯವಿಲ್ಲ. ಇದು “ಅತ್ಯಂತ ದುರದೃಷ್ಟಕರ” ಎಂದು ತಮ್ಮ ಟ್ವೀಟರ್ ಖಾತೆಯಲ್ಲಿ ತರೂರ್ ಬರೆದುಕೊಂಡಿದ್ದಾರೆ.