Advertisement

ಭಾರತದಲ್ಲಿ ಅತೀ ಹೆಚ್ಚು ಬಾರಿ ಟ್ವೀಟ್ ಮಾಡಲಾದ ಹ್ಯಾಶ್ ಟ್ಯಾಗ್  ಯಾವುದು ಗೊತ್ತಾ ?

09:35 AM Aug 25, 2019 | Mithun PG |

ನವದೆಹಲಿ: ಭಾರತದಲ್ಲಿ ಹ್ಯಾಶ್ ಟ್ಯಾಗ್ ನ ಬಳಕೆ ಆರಂಭವಾಗಿ 12 ವರುಷ ಕಳೆದಿದೆ. ಈ ನಿಟ್ಟಿನಲ್ಲಿ  ಟ್ವೀಟರ್ ಸಂಸ್ಥೆ ಈ ವರ್ಷದ ಪ್ರಥಮಾರ್ಧದಲ್ಲಿ ಅತೀ ಹೆಚ್ಚು ಬಳಸಲ್ಪಟ್ಟ ಹ್ಯಾಶ್ ಟ್ಯಾಗ್ ಅನ್ನು ಅನಾವರಣಗೊಳಿಸಿದೆ .

Advertisement

ಈ ಹ್ಯಾಶ್ ಟ್ಯಾಗ್ ಎಂಬುದು ಟ್ವೀಟ್ ಗಳನ್ನು ವರ್ಗೀಕರಿಸಲು ಸಹಾಯ ಮಾಡುತ್ತದೆ . ಅದರ ಜೊತೆಗೆ ಒಂದೇ ವೇದಿಕೆಯಡಿಯಲ್ಲಿ  ನಿರ್ದಿಷ್ಟ ವಿಷಯಗಳ ಮಾಹಿತಿ ಕೊಡಲು ಮತ್ತು ಚರ್ಚಿಸಲು ನೆರವಾಗುತ್ತದೆ.

ಅಜಿತ್ ಕುಮಾರ್ ಮತ್ತು ನಯನ್ ತಾರ ಅಭಿನಯದ  ತಮಿಳು ಚಲನಚಿತ್ರ #Viswasam  ಭಾರತದಲ್ಲಿ ಇಂದಿಗೂ ಕೂಡ  ಅಗ್ರಸ್ಥಾನವನ್ನು ಗಳಿಸಿದ ಟ್ವೀಟ್ ಹ್ಯಾಶ್ ಟ್ಯಾಗ್. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಸದ್ದು ಮಾಡಿ 200 ಕೋಟಿ ಗಳಿಕೆ ಮಾಡಿತ್ತು. ಪ್ರಾದೇಶಿಕ ಮನೋರಂಜನೆ ವಿಭಾಗದಲ್ಲಿ #Viswasam ಹ್ಯಾಶ್ ಟ್ಯಾಗ್ ಅನ್ನು ಅತೀ ಹೆಚ್ಚು ಜನ ಬಳಕೆ ಮಾಡಿದ್ದರು .

ತದನಂತರದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ರಾಜಕೀಯ ಮತ್ತು ಆಡಳಿತ ವಲಯದಲ್ಲಿ ಮಾತ್ರವಲ್ಲದೆ ಟ್ವಿಟರ್ ನಲ್ಲೂ ಭಾರೀ ಟ್ರೆಂಡ್ ಕ್ರಿಯೇಟ್ ಮಾಡಿತ್ತು. ರಾಜಕೀಯ ಪಕ್ಷಗಳ ನಾಯಕರು, ದೇಶದ ಮತ್ತು ವಿಶ್ವದಾದ್ಯಂತ ಜನರೊಂದಿಗೆ ಸಂವಹನ ನಡೆಸಲು, #LokSabhaElections2019 ಎಂಬ ಹೆಸರಿನಲ್ಲಿ ಟ್ವೀಟ್ ಮಾಡುತ್ತಿದ್ದರು. ಇದರ ಜೊತೆಗೆ ನಾಗರಿಕರು ಕೂಡ ರಾಷ್ಟ್ರಮಟ್ಟದ ನಾಯಕರಿಗೆ ತಮ್ಮ ಅಹವಾಲುಗಳನ್ನು ತಲುಪಿಸಲು ಈ ಹ್ಯಾಶ್ ಟ್ಯಾಗನ್ನು ಹೆಚ್ಚು ಹೆಚ್ಚು ಬಳಕೆ ಮಾಡುತ್ತಿದ್ದರು. ಇದು ಹ್ಯಾಶ್ ಟ್ಯಾಗ್ ವಲಯದಲ್ಲಿ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.

ಮೂರನೇ ಸ್ಥಾನವನ್ನು  ಈ ಬಾರಿಯ ವಿಶ್ವಕಪ್ ಕ್ರಿಕೆಟ್ ನ ಹ್ಯಾಶ್ ಟ್ಯಾಗ್ #CWC19 ಪಡೆದುಕೊಂಡಿದೆ. ವಿಶ್ವಕಪ್ ಗೆಲುವಿನ ಸಂಭ್ರಮದ ಕ್ಷಣಗಳು , ಅದ್ಭುತ ಕ್ಯಾಚ್ ಗಳು,  ಶಾಕಿಂಗ್ ಅಪ್ಸೆಟ್ ಗಳು ಮತ್ತು ವಿಶ್ವಕಪ್ ನ ವಿಶೇಷ ಮಾಹಿತಿಗಳ ಜೊತೆಗೆ ಮಳೆಯಿಂದಾದ ಅಡಚಣೆ ಕುರಿತ ಮೀಮ್ಸ್ ಗಳು ಅತೀ ಹೆಚ್ಚು ಬಾರಿ ಟ್ವೀಟರ್ ಹ್ಯಾಶ್ ಟ್ಯಾಗ್ ನೊಂದಿಗೆ ಹರಿದಾಡಿದವು.

Advertisement

ಮಹೇಶ್ ಬಾಬು ಮತ್ತು ಪೂಜೆ ಹೆಗ್ಡೆ ಅಭಿನಯದ ಮಹರ್ಷಿ ಚಿತ್ರ ಮನರಂಜನೆ ಆಧಾರಿತದಲ್ಲಿ #Maharshi ಎಂಬ ಹ್ಯಾಶ್ ಟ್ಯಾಗ್ ನಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಹಲವಾರು ಟ್ವೀಟ್ ಬಳೆಕೆದಾರರು ಸಾಮಾನ್ಯ ವಾಗಿ ತಮ್ಮ ಪ್ರೊಪೈಲ್ ಫೋಟೋ ಅಪ್ ಡೇಟ್ ಮಾಡುವಾಗ #NewProfilePic ಬಳಸುತ್ತಾರೆ. ಈ ಕಾರಣ ದಿಂದ ಐದನೇ ಸ್ಥಾನವನ್ನು ಈ ಹ್ಯಾಶ್ ಟ್ಯಾಗ್ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next