Advertisement

ಭಾರತದಿಂದ ಅತ್ಯಧಿಕ ಪ್ರವಾಸಿಗರು

02:28 PM May 30, 2019 | Sriram |
ಹೊಸದಿಲ್ಲಿ: ಇಂಗ್ಲೆಂಡ್‌ನ‌ಲ್ಲಿ ವಿಶ್ವಕಪ್‌ ಶುರು ವಾಗಿದೆ. ಮತ್ತೂಂದು ಕಡೆ ಭಾರತದಿಂದ ಇಂಗ್ಲೆಂಡ್‌ಗೆ ತೆರಳುವವರ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗಿದೆ. ಕಳೆದ ವರ್ಷದ ಅಂಕಿಅಂಶಕ್ಕೆ ಹೋಲಿಸಿದರೆ, ಈ ಏರಿಕೆ ವಿಶ್ವಕಪ್‌ ಕ್ರಿಕೆಟ್ ಕಾರಣದಿಂದಲೇ ಎನ್ನುವುದು ಸ್ಪಷ್ಟ. ಮೇ 21ರ ಅಂಕಿಅಂಶದ ಪ್ರಕಾರ, ಜಾಗತಿಕವಾಗಿ 47,939 ಮಂದಿ ಇಂಗ್ಲೆಂಡ್‌ ವಿಶ್ವಕಪ್‌ ಕೂಟಕ್ಕೆ ತೆರಳಿದ್ದಾರೆ. ಅದರಲ್ಲಿ ಭಾರತೀಯರ ಪ್ರಮಾಣ 17,505. ಅನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ (2654), ಬಾಂಗ್ಲಾದೇಶ (1565), ಪಾಕಿಸ್ಥಾನದ (1449) ಪ್ರವಾಸಿಗರಿದ್ದಾರೆ.

ಆದರೆ ಆಸ್ಟ್ರೇಲಿಯದಿಂದ ಇಂಗ್ಲೆಂಡ್‌ಗೆ ಬರುವವರ ಸಂಖ್ಯೆ ತುಸು ಇಳಿಮುಖವಾಗಿದೆ. ಇಂಗ್ಲೆಂಡ್‌ನ‌ಲ್ಲಿ ಈಗಾಗಲೇ ವಾಸವಾಗಿರುವವರ ಸಂಖ್ಯೆ ಹೆಚ್ಚಿರುವುದರಿಂದ ಬುಕ್ಕಿಂಗ್‌ ಕಡಿಮೆ ಇದೆ ಎನ್ನಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next