ಬಹುತೇಕ ಸಮಯ ಶಾಲೆಯಲ್ಲಿಯೇ ಕಳೆಯುಂತಾಗಿದೆ. ಶಾಲಾ ಮಕ್ಕಳು ಕಲಿಕೆ ಜತೆ ಕ್ರೀಡೆಗಳಲ್ಲಿ ಭಾಗವಹಿಸಬೇಕು ಎಂಬ ಉದ್ದೇಶದಿಂದ ಸರಕಾರ ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕ್ರೀಡಾಕೂಟ ಏರ್ಪಡಿಸುತ್ತಿದೆ. ಆದರೆ ಮೈದಾನ ಕೊರತೆ ಇರುವುದರಿಂದ ಮಕ್ಕಳು ಕ್ರೀಡಾಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಕೆಲವು ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ಕನಿಷ್ಠ ಖೋ-ಖೋ, ಕಬಡ್ಡಿ, ವಾಲಿಬಾಲ್ ಮೈದಾನ ಇಲ್ಲದ ಶಾಲೆಗಳಿವೆ. ಹೀಗಾಗಿ ವಾರ್ಷಿಕ ಕ್ರೀಡಾಕೂಟವನ್ನು ಖಾಸಗಿ ಮಾಲೀಕರ ಹೊಲ ಗದ್ದೆಗಳಲ್ಲಿ ನಡೆಸಲಾಗುತ್ತಿದೆ. ಸರಕಾರ ಕೇವಲ ಕ್ರೀಡಕೂಟ ಆಯೋಜಿಸುವುದರತ್ತ ಹೆಚ್ಚು ಗಮನಹರಿಸುತ್ತಿದೆ. ಕ್ರೀಡೆಗಳಿಗೆ ಬೇಕಾದ ಮೈದಾನ, ದೈಹಿಕ ಶಿಕ್ಷಕರು, ಪ್ರತಿ ಹೋಬಳಿಗೆ ಮೈದಾನ ನಿರ್ಮಿಸುವುದರ ಕಡೆಗೆ ಅ ಧಿಕಾರಿಗಳು ಮತ್ತು ಜನಪ್ರತಿನಿಧಿ
ಗಳು ಹೆಚ್ಚು ಗಮನಹರಿಸಬೇಕು ಎಂಬುದು ಕ್ರೀಡಾಪಟುಗಳ ಆಗ್ರಹವಾಗಿದೆ. ನಮ್ಮ ಭಾಗದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿದ್ದಾರೆ. ಪ್ರತಿಭವಂತ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ಸರಕಾರದ ಜತೆ ಸಮುದಾಯವು ಕೈಜೋಡಿಸಬೇಕು. ಪ್ರತಿ ಗ್ರಾಮದಲ್ಲಿ ಆಟದ ಮೈದಾನವಿರಬೇಕು. ಇದಕ್ಕೆ ಗ್ರಾಮಸ್ಥರು ಮತ್ತು ಸರಕಾರ ಜತೆಗೂಡಿ ಸ್ಥಾವಕಾಶ ಒದಗಿಸಿ ಮೈದಾನ ಅಭಿವೃದ್ಧಿ ಮಾಡಬೇಕು. ಹೀಗಾದಲ್ಲಿ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎನ್ನುತ್ತಾರೆ ರಾಜ್ಯ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಕ ಯಾದಗಿರಿಯ ಮಲ್ಲಿಕಾರ್ಜುನ ಬಳೆ
Advertisement
ಸಚಿವರು-ಶಾಸಕರು ಗಮನ ಹರಿಸಲಿ: ಮಕ್ಕಳು ಶೈಕ್ಷಣಿಕವಾಗಿ ಪ್ರಗತಿ ಹೊಂದಬೇಕಾದರೆ ಕ್ರೀಡೆ ಪೂರಕವಾಗಿದೆ. ಆದರೆ ಕೆಲವು ಶಾಲೆಯಲ್ಲಿ ಆಟದ ಮೈದಾನಗಳು ಇಲ್ಲದಿರುವುದು ಬೇಸರದ ಸಂಗತಿ. ಮೈದಾನ ಇಲ್ಲದ ಸರ್ಕಾರಿ ಶಾಲೆಗಳ ಬಗ್ಗೆ ಅಧಿ ಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾ ಉಸ್ತವಾರಿ ಸಚಿವರು ಮತ್ತು ಶಾಸಕರು ಕಟ್ಟಡ ಮತ್ತು ಮೈದಾನ ನಿರ್ಮಿಸಲು ಗಮನಹರಿಸಬೇಕು ಮತ್ತು ಶಿಕ್ಷಣಾಧಿ ಕಾರಿಗಳು ಮೂಲಭೂತ ಸೌಕರ್ಯ ಇಲ್ಲದ ಖಾಸಗಿ ಶಾಲೆಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.ಶಶಿಕಲಾ ಪಾಟೀಲೆ ಜಿಪಂ ಸದಸ್ಯರು ಸೈದಾಪುರ
ಜಿಪಂ ವತಿಯಿಂದ ಸುಜ್ಜಿತವಾದ ಕಟ್ಟಡ ಮತ್ತು ಆಟದ ಮೈದಾನ ಒದಗಿಸಲಾಗಿದೆ. ಮೈದಾನವಿಲ್ಲದ ಕೆಲವು ಹಳೆ ಸರಕಾರಿ ಶಾಲೆಗಳನ್ನು ಸ್ಥಳಾಂತರಿಸಿ ಮೈದಾನ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ. ಅದೇ ರೀತಿ ಖಾಸಗಿ ಶಾಲೆ ಪ್ರಾರಂಭಿಸಬೇಕಾದರೆ
ಮೂಲಭೂತ ಸೌಕರ್ಯದ ಜತೆ ಮೈದಾನಗೋಸ್ಕರ ಒಂದು ಎಕರೆ ಭೂಮಿ ಇರಬೇಕು ಎಂಬ ನಿಯಮವಿದೆ. ಅದರಂತೆ ನಿಮಯ ಮೀರಿ ನಡೆದುಕೊಳ್ಳುವ ಶಾಲೆಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು.
ರುದ್ರಗೌಡ ಪಾಟೀಲ, ಕ್ಷೇತ್ರ ಶಿಕ್ಷಣಾ ಧಿಕಾರಿ, ಯಾದಗಿರಿ