ಬೆಂಗಳೂರು: ಲೋಕಸಭಾ ಚುನಾವಣಾ ಕರ್ತವ್ಯದಲ್ಲಿ ನಿರತರಾದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಅನುಕೂಲಕ್ಕಾಗಿ ಅಂಚೆ ಮತ ಚಲಾಯಿಸುವ ವ್ಯವಸ್ಥೆ ಮಾಡಲಾಗಿದ್ದು, ಈ ಸಂಬಂಧ ಎಲ್ಲ ವಿಭಾಗಗಳಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ ಸಿಬ್ಬಂದಿ ಚುನಾವಣೆಸಮಯದಲ್ಲಿ ತಾವು ಮತ ಚಲಾಯಿಸುವ ಸ್ಥಳಗಳ ಹೊರತಾಗಿ ಚುನಾವಣಾ ಕರ್ತವ್ಯದಲ್ಲಿ ನಿರತಾಗಿರುತ್ತಾರೆ. ಮತದಾನದ ಹಕ್ಕಿನಿಂದ ದೂರ ಉಳಿಯಬಾರದು ಎಂಬ ಕಾರಣಕ್ಕೆ ಅಂಚೆ ಮತ ಚಲಾವಣೆ ವ್ಯವಸ್ಥೆ ಮಾಡಲಾಗಿದೆ. ಅತಿ ಹೆಚ್ಚು ಶೇಕಡಾವಾರು ಅಂಚೆ ಮತ ಸಂಗ್ರಹಿಸುವ ಘಟಕ ಹಾಗೂ ವಿಭಾಗಕ್ಕೆ ಬಹುಮಾನ ನೀಡುವುದಾಗಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಘೋಷಿಸಿದ್ದಾರೆ.
ಚಾಲಕರು-ನಿರ್ವಾಹಕರು ಆಯಾ ವಿಭಾಗಗಳಲ್ಲಿ ನೇಮಿಸಲಾದ ನೋಡಲ್ ಅಧಿಕಾರಿಗಳೊಂದಿಗೆ ಸಮನ್ವಯ ಮಾಡಿಕೊಂಡು, ಯಾವುದೇ ಲೋಪಗಳಿಗೆ ಎಡೆಮಾಡಿಕೊಡದಂತೆ ಕಾರ್ಯ
ನಿರ್ವಹಿಸಬೇಕು ಎಂದು ನಿಗಮದ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.