Advertisement

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

08:39 AM Nov 28, 2021 | Team Udayavani |

ನವದೆಹಲಿ: ಪತ್ನಿಯ ಬೇಜವಾಬ್ದಾರಿ ವರ್ತನೆಯಿಂದ ಬೇಸತ್ತ ಪತಿಯು ತನ್ನ ಪತ್ನಿಗೆ ಥಳಿಸಿದರೆ ಅದು ತಪ್ಪೇ? ಇಂಥದ್ದೊಂದು ಪ್ರಶ್ನೆಯನ್ನಿಟ್ಟುಕೊಂಡು ಸುಮಾರು 18 ರಾಜ್ಯಗಳು ಹಾಗೂ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲಾಗಿದ್ದ “ನ್ಯಾಷನಲ್‌ ಫ್ಯಾಮಿಲಿ ಹೆಲ್ತ್‌’ ಸಮೀಕ್ಷೆಗೆ ಬಹುತೇಕರು ಅದು ಸರಿ ಎಂದಿದ್ದಾರೆ. ಅವರಲ್ಲಿ ತೆಲಂಗಾಣದ ಮಹಿಳೆಯರ ಸಂಖ್ಯೆಯೇ ಹೆಚ್ಚಾಗಿದೆ. ಕರ್ನಾಟಕದಲ್ಲಿ ಪುರುಷರ ಸಂಖ್ಯೆ ಹೆಚ್ಚಿದೆ.

Advertisement

“ಪತಿಗೆ ಹೇಳದೆಯೇ ಹೊರಗೆ ಸುತ್ತಾಡಲು ಹೋಗುವುದು, ಮನೆ ಅಥವಾ ಮಕ್ಕಳ ಬಗ್ಗೆ ನಿರ್ಲಕ್ಷ್ಯ ತೋರುವುದು, ಸಣ್ಣ ಸಣ್ಣ ವಿಚಾರಕ್ಕೂ ಪತಿಯ ಜೊತೆಗೆ ಜಗಳವಾಡುವುದು, ಲೈಂಗಿಕ ಸಂಬಂಧಕೆ ಒಲ್ಲೆ ಎನ್ನುವುದು, ಅಡುಗೆ ಹಾಳುಗೆಡವುವುದು, ಆಕೆಯ ನಡತೆ ಅನುಮಾನಾಸ್ಪದವಾಗಿ ಇರುವುದು..’ ಈ ಏಳು ಕಾರಣ ಗಳಿಗೆ ಪತಿಯು ಪತ್ನಿಯ ಮೇಲೆ ಕೈ ಮಾಡಿದರೆ ಅದು ಸರಿಯೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಮೀಕ್ಷೆ ನಡೆಸಲಾಗಿತ್ತು.

ಇದನ್ನೂ ಓದಿ:ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

ತೆಲಂಗಾಣದ ಶೇ. 83.8ರಷ್ಟು ಮಹಿಳೆಯರು ಈ ಏಳು ಕಾರಣಗಳಡಿ ಪತಿಯು ಪತ್ನಿಯ ಮೇಲೆ ಕೈ ಮಾಡುವುದು ಸರಿ ಎಂದಿದ್ದರೆ, ಹಿಮಾಚಲ ಪ್ರದೇಶದಲ್ಲಿ ಇಂಥ ಮಹಿಳೆಯರ ಸಂಖ್ಯೆ ಕಡಿಮೆ (ಶೇ. 14.8) ಇದೆ. ಸಮೀಕ್ಷೆಗೆ ಉತ್ತರಿಸಿದ ಪುರುಷರಲ್ಲಿ, ಮೇಲಿನ ಕಾರಣಗಳಿಗೆ ಪತ್ನಿಯನ್ನು ದಂಡಿಸುವವರು ಅತಿ ಹೆಚ್ಚು ಜನ ಕರ್ನಾಟಕದವರೇ (ಶೇ. 81.9) ಆಗಿದ್ದಾರೆ. ಅತಿ ಕಡಿಮೆ ಎಂದರೆ ಹಿಮಾಚಲ ಪ್ರದೇಶದವರು (ಶೇ. 14.2).

Advertisement

Udayavani is now on Telegram. Click here to join our channel and stay updated with the latest news.

Next