ಗದಗ: ಜಿಲ್ಲೆ ಕಳೆದ ಕೆಲ ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಜತೆಗೆ ನೆರೆ ಹಾಗೂ ಬರಗಾಲದಂತಹ ಪರಿಸ್ಥಿತಿ ಅನುಭವಿಸಿದೆ. ಇದರಿಂದ ಕೆಲ ಕೆರೆಗಳು ಭರ್ತಿಯಾಗಿ ಕೋಡಿ ಹರಿದಿದ್ದರೆ, ಇನ್ನೂ ಕೆಲವು ಕೆರೆಗಳು ನೀರಿಲ್ಲದೇ ಬತ್ತಿ ಹೋದ ಉದಾಹರಣೆ ಸಾಕಷ್ಟಿವೆ. ಜಿಲ್ಲೆಯಲ್ಲಿ ನೀರಾವರಿ ಮತ್ತು ಸಣ್ಣ ನೀರಾವರಿ ವ್ಯಾಪ್ತಿಯಲ್ಲಿ 22 ಕುಡಿಯಲು ಯೋಗ್ಯವಾದ ಕೆರೆಗಳು, 192 ಬಳಕೆಗೆ ಸೀಮಿತವಾದ ಕೆರೆಗಳು ಸೇರಿ ಒಟ್ಟು 214 ಕೆರೆಗಳಿದ್ದು, ಬಹುತೇಕ ಕೆರೆಗಳು ಮಳೆಯ ನೀರನ್ನೇ ನೆಚ್ಚಿಕೊಂಡಿವೆ. ಆದರೆ ಸದ್ಯ ಮುಂಗಾರು ಚಾಲ್ತಿಯಲ್ಲಿದ್ದು, ಕಳೆದ 15 ದಿನಗಳಲ್ಲಿ ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಬಹುತೇಕ
ಕೆರೆಗಳು ತುಂಬದಿದ್ದರೂ ತಕ್ಕಮಟ್ಟಿನ ನೀರು ಶೇಖರಣೆಯಾಗಿದೆ.
Advertisement
ಇನ್ನು ತುಂಗ-ಭದ್ರಾ ಎಡದಂಡೆ ಕಾಲುವೆ ಮೂಲಕ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಡಂಬಳ, ಶಿರೋಳ, ತಾಮ್ರಗುಂಡಿ, ನಾಗರಳ್ಳಿ, ಜಂತ್ಲಿ ಶಿರೂರು ಸೇರಿ 15 ಕೆರೆಗಳು, 20ಕ್ಕೂ ಹೆಚ್ಚು ಚೆಕ್ ಡ್ಯಾಂಗಳಿಗೆ ಹಾಗೂ ಗದಗ ತಾಲೂಕಿನ ಲಕ್ಕುಂಡಿ, ಸಂಭಾಪುರ, ಕಳಸಾಪುರ, ಕಣಗಿನಹಾಳ ಸೇರಿ 8 ಗ್ರಾಮದ ಕೆರೆಗಳಿಗೆ ಕಳೆದ ಕೆಲ ವರ್ಷಗಳ ಹಿಂದೆ ನದಿ ನೀರು ಹರಿಸಿದ್ದರಿಂದ ಪುನಶ್ಚೇತನಗೊಂಡಿದ್ದವು. ಆದರೆ ಕಳೆದ ವರ್ಷ ಬರಗಾಲ ಆವರಿಸಿದ್ದರಿಂದ ಕೆರೆಗಳು ನದಿ ನೀರನ್ನು ಕಂಡಿಲ್ಲ.
Related Articles
Advertisement
ಕಳೆದ ಎರಡು ವರ್ಷಗಳಿಂದ ಯಾವುದೇ ಅನುದಾನವಿರದ ಕಾರಣ ಜಿಲ್ಲೆಯ ಸಣ್ಣ ನೀರಾವರಿ ವ್ಯಾಪ್ತಿಯ ಕೆರೆಗಳ ಹೂಳೆತ್ತುವುದು ಮತ್ತು ಬೌಂಡರಿಂಗ್ ಕ್ರಂಚ್ ಹಾಕುವುದು ಸೇರಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಅನುದಾನ ಬಿಡುಗಡೆಗೊಂಡ ನಂತರ ಆದ್ಯತೆ ಮೇರೆಗೆ ಹೂಳೆತ್ತುವುದು ಸೇರಿ ಕೆರೆಗಳ ಬೌಂಡರಿಂಗ್ ಕ್ರಂಚ್ ಹಾಕಲು ಸೂಕ್ತಕ್ರಮ ಕೈಗೊಳ್ಳಲಾಗುವುದು.
●ಎನ್. ಚಂದ್ರಶೇಖರ, ಸಹಾಯಕ
ಕಾರ್ಯನಿರ್ವಾಹಕ ಎಂಜಿನಿಯರ್, ಸಣ್ಣ ನೀರಾವರಿ. ■ ಅರುಣಕುಮಾರ ಹಿರೇಮಠ