Advertisement
ಕ್ಷೇತ್ರ ವ್ಯಾಪ್ತಿಯ ವಡಕೆಹಳ್ಳ ಗ್ರಾಮದಲ್ಲಿ ವಿಶ್ವ ರೈತ ಚೇತನ ಪ್ರೋ.ಎಂ.ಡಿ.ನಂಜುಂಡಸ್ವಾಮಿ ಅವರ 82ನೇ ಜನ್ಮ ದಿನಾಚರಣೆ ಅಂಗವಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಮ್ಮಿಕೊಂಡಿದ್ದ ಮಹದೇಶ್ವರ ಸಾವಯವ ಸಿರಿಧಾನ್ಯ ಸ್ವ-ಸಹಾಯ ಸಂಘ ಮತ್ತು ಸಿರಿ ಧಾನ್ಯಗಳ ಸಂಸ್ಕರಣಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
Related Articles
Advertisement
ಬಿತ್ತನೆ ಬೀಜ ಒದಗಿಸುವುದೇ ಸವಾಲು: ಸಿರಿಧಾನ್ಯ ಹೊರತುಪಡಿಸಿ ಉಳಿದಂತಹ ಬಿತ್ತನೆ ಬೀಜಗಳನ್ನು ಸರ್ಕಾರದಿಂದ ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಆದರೆ, ಸಿರಿಧಾನ್ಯಗಳ ಉತ್ಪಾದನೆ ಅತ್ಯಲ್ಪ ಪ್ರಮಾಣದಲ್ಲಿದೆ. ಸಾಮೆ, ಜೋಳ, ನವಣೆ, ರಾಗಿ, ಸಜ್ಜೆ, ಆರ್ಕ, ಊದಲು ಬಿತ್ತನೆ ಬೀಜ ರೈತರ ಅವಶ್ಯಕತೆಗೆ ಅನುಗುಣವಾಗಿ ವಿತರಿಸುವುದು ಸವಾಲಾಗಿದೆ. ಈ ಹಿನ್ನೆಲೆ ರೈತರಪರ ಸಂಘಟನೆಗಳು ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸನ್ಮಾನ: ಜಿಲ್ಲೆಯ ಬೋಗಾಪುರದಲ್ಲಿ ಅಂಧರ ಶಾಲೆ ಆರಂಭಿಸಿ ಪೋಷಣೆ ಮಾಡುತ್ತಿರುವ ದೀಪಾ ಅಕಾಡೆಮಿಯ ಮುಖ್ಯ ಶಿಕ್ಷಕಿ ಶಿಲ್ಪಾಗೆ ರೈತ ಚೇತನ ಪ್ರೋ.ಎಂಡಿಎನ್ ಪ್ರತಿಷ್ಠಾನದಿಂದ ನೀಡುವ ಸಾಮಾಜಿಕ ಕಳಕಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬರಗೂರು ಕೆಳಮಠದ ಸುಬ್ರಹ್ಮಣ್ಯ ರಾಜೇಂದ್ರ ಸ್ವಾಮಿ, ಕೃಷಿ ನಿರ್ದೇಶಕ ಯೋಗೇಶ್, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಕಾರ್ಯದರ್ಶಿ ಗುರುಪ್ರಸಾದ್, ಚೆಂಗಡಿ ಕರಿಯಪ್ಪ, ಒಬಳಿ ವಿದ್ಯಾಸಂಸ್ಥೆಯ ಗಂಗಾಧರ್ ಇದ್ದರು.