Advertisement

ಹೈದರಾಬಾದ್: ಖ್ಯಾತ ಕವಿ, ವಿಮರ್ಶಕ, ಕತೆಗಾರ ಕೆ.ವಿ.ತಿರುಮಲೇಶ್ ವಿಧಿವಶ

10:38 AM Jan 30, 2023 | Team Udayavani |

ಬೆಂಗಳೂರು: ಖ್ಯಾತ ಕವಿ, ವಿಮರ್ಶಕ ಕೆ.ವಿ.ತಿರುಮಲೇಶ್ (80ವರ್ಷ) ಅವರು ಸೋಮವಾರ (ಜನವರಿ 30) ಹೈದರಾಬಾದ್ ನಲ್ಲಿರುವ ತಮ್ಮ ನಿವಾಸದಲ್ಲಿ ವಿಧಿವಶರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

ಇದನ್ನೂ ಓದಿ:ಎರಡು ವರ್ಷದಿಂದ ಕಾಡಿದ ಕ್ಯಾನ್ಸರ್;‌ 45ರ ವಯಸ್ಸಿಗೆ ಕೊನೆಯುಸಿರೆಳೆದ ಅಮೆರಿಕಾದ ಜನಪ್ರಿಯ ನಟಿ

ಕೆ.ವಿ.ತಿರುಮಲೇಶ್ ಅವರು ಕನ್ನಡ ಭಾಷೆಯ ಬಹುಮುಖಿ ಕವಿ, ಭಾಷಾ ವಿಜ್ಞಾನಿ, ವಿದ್ವಾಂಸರು, ವಿಮರ್ಶಕರಾಗಿ ಪ್ರಸಿದ್ಧರಾಗಿದ್ದರು. ಅವರು ಹೈದರಾಬಾದ್ ನ ಸೆಂಟ್ರಲ್ ಇನ್ಸಿಟಿಟ್ಯೂಟ್ ಆಫ್ ಇಂಗ್ಲಿಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದರು. ನಂತರ ಅವರು ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲಿಷ್ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ತದನಂತರ ಅವರು ಹೈದರಾಬಾದ್ ನ ತಮ್ಮ ನಿವಾಸದಲ್ಲಿ ನಿವೃತ್ತಿ ಜೀವನ ಕಳೆದಿದ್ದರು.

ಕೆ.ವಿ.ತಿರುಮಲೇಶ್ ಅವರು ಕಾಸರಗೋಡಿನ ಕಾರಡ್ಕದವರು. 1940ರ ಸೆಪ್ಟೆಂಬರ್ 12ರಂದು ಕಾರಡ್ಕದಲ್ಲಿ ಕೆವಿ ಜನಿಸಿದ್ದರು. ತಿರುಮಲೇಶ್ ಅವರು ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಖ್ಯಾತಿ ಪಡೆದಿದ್ದರು.

ಮುಖವಾಡಗಳು ಹಾಗೂ ವಠಾರ ಇವರ ಎರಡು ಜನಪ್ರಿಯ ಕೃತಿಗಳು. ಇವರ ಸಾಹಿತ್ಯ ಕೃಷಿಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದವು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next