Advertisement
ಕಾಂಗ್ರೆಸ್ ಮಾಡಿರುವ ಟ್ವೀಟ್‌ನಲ್ಲಿ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಕರ್ನಾಟಕದ ಗಣಿ ಉದ್ಯಮಿ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿ 11 ನಾಯಕರ ಜತೆಗೆ ಅವರ ಮೇಲಿರುವ ಆರೋಪವನ್ನು ಹೆಸರಿಸಿದೆ.
ಕೇಂದ್ರ ಸಚಿವ ನಾರಾಯಣ ರಾಣೆ (ಭೂ ಹಗರಣ), ಹಿಮಂತ್ ಬಿಸ್ವಾ ಶರ್ಮಾ ಮತ್ತು ಸುವೇಂಧು ಅಧಿಕಾರಿ (ಶಾರದಾ ಹಗರಣ), ಶಿವರಾಜ್ ಸಿಂಗ್ ಚೌಹಾಣ್(ವ್ಯಾಪಂ ಹಗರಣ), ಬಸವರಾಜ ಬೊಮ್ಮಾಯಿ(ಪೇ ಸಿಎಂ), ಪ್ರಫುಲ್ ಪಟೇಲ್(ಏರ್ ಇಂಡಿಯಾ ಹಗರಣ), ರಘುಬರ್ ದಾಸ್(ಟೀ ಶರ್ಟ್ ಹಗರಣ), ಹಸನ್ ಮುಶ್ರಿಫ್(1500 ಕೋಟಿ ಹಗರಣ), ಅಜಿತ್ ಪವಾರ್(ನೀರಾವರಿ ಹಗರಣ), ಪೆಮಾ ಖಂಡು(2000 ಕೋಟಿ ರೂ. ಹಗರಣ) ಮತ್ತು ಗಾಲಿ ಜನಾರ್ದನ ರೆಡ್ಡಿ (35 ಸಾವರಿ ಕೋಟಿ ರೂ. ಗಣ ಹಗರಣ) ಹೆಸರುಗಳು ಮತ್ತು ಫೋಟೋಗಳನ್ನು ಟ್ವೀಟ್ ಮಾಡಿದೆ.