ಹೊಸದಿಲ್ಲಿ: ದೇಶದ ಬಹುತೇಕ ಮಂದಿ ಆಧಾರ್ ಕಾರ್ಡ್ ಹೊಂದಿದ್ದು, ಡೇಟಾಗಳು ಸುರಕ್ಷಿತವಾಗಿವೆ ಎಂದು ಸಾಮಾಜಿಕ ಪರಿಣಾ ಮಗಳ ಸಲಹಾ ಸಂಸ್ಥೆಯಾದ ಡೆಲ್‌ಬರ್ಗ್ ನಡೆಸಿದ ಅಧ್ಯಯನದಲ್ಲಿ ತಿಳಿದು ಬಂದಿದೆ.
ಸ್ಟೇಟ್ ಆಫ್ ಆಧಾರ್-2019 ಶೀರ್ಷಿಕೆ ಯಡಿ ಅಧ್ಯಯನ ನಡೆಸಿದ್ದು, ಸುಮಾರು ಶೇ.80ರಷ್ಟು ಮಂದಿ ವಿಶಿಷ್ಟ ಗುರುತಿನ ಆಧಾರ್ ಕಾರ್ಡ್ ಇಟ್ಟುಕೊಂಡಿದ್ದು, ಪಡಿತರ, ಪಿಂಚಣಿ ಹಾಗೂ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ.
ಶೇ.33ರಷ್ಟು ಮಂದಿ ತಮ್ಮ ಆಧಾರ್ ಅಪ್‌ಡೇಟ್ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದು, ಈ ಪ್ರಕ್ರಿಯೆ ಜಟಿಲವಾಗಿದೆ.
ಶೇ.77ರಷ್ಟು ಜನ ಆಧಾರ್ ಸಂಬಂಧಿಸಿದಂತೆ ಡಿಜಿಟಲ್ ವ್ಯವಸ್ಥೆ ಹೊಂದಿಲ್ಲ. ಆಧಾರ್ ಹೊಂದಿರುವ ಶೇ. 95ರಷ್ಟು ಮಂದಿ ಸರಾಸರಿ ತಿಂಗಳಿಗೆ ಒಂದು ಬಾರಿ ಆಧಾರ್ ಬಳಕೆ ಮಾಡಿ ಕೊಳ್ಳುತ್ತಿದ್ದಾರೆ. ದೇಶದಲ್ಲಿ ಶೇ.8ರಷ್ಟು ಮಂದಿ ಅಂದರೆ 10.2 ಲಕ್ಷ ಜನರು ಇನ್ನೂ ಆಧಾರ್ ಕಾರ್ಡ್ ಪಡೆದಿಲ್ಲ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.