Advertisement
ಮಲೇರಿಯಾ ಇಳಿಮುಖಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಮಲೇರಿಯಾ ಪ್ರಕರಣ ಕಡಿಮೆ. 2016ರಲ್ಲಿ 1,168 ಪ್ರಕರಣಗಳಿದ್ದು, 2017ರಲ್ಲಿ 513 ಪ್ರಕರಣಗಳು ಹಾಗೂ ಈ ವರ್ಷ ಇದುವರೆಗೆ 79 ಪ್ರಕರಣ ವರದಿಯಾಗಿವೆ. ನಗರ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಜಿಲ್ಲೆಯಲ್ಲಿ ಈ ವರ್ಷ ಇದುವರೆಗೆ ಉಡುಪಿಯಲ್ಲಿ 35,563, ಕುಂದಾಪುರದಲ್ಲಿ 4,450, ಕಾರ್ಕಳದಲ್ಲಿ 200 ಸೇರಿದಂತೆ ಒಟ್ಟು 40,213 ಸೊಳ್ಳೆ ಪರದೆ ವಿತರಿಸಲಾಗಿದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ಪ್ರೇಮಾನಂದ ಮಾಹಿತಿ ನೀಡಿದರು.
ಹಾಸ್ಟೆಲ್ ಕಿಟಕಿಗಳಿಗೆ ಮೆಷ್ ಅಳವಡಿಸುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 383 ಡೆಂಗ್ಯೂ ಪ್ರಕರಣ ವರದಿಯಗಿದ್ದು, ಈ ವರ್ಷ 91 ಪ್ರಕರಣ ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರೋಹಿಣಿ ಉಪಸ್ಥಿತರಿದ್ದರು.