ಸಂಭಲ್: ಮೊಘಲ್ ಕಾಲದ ಮಸೀದಿ ಸಮೀಕ್ಷೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಒಟ್ಟು 7 ಎಫ್ಐಆರ್ಗಳನ್ನು ಪೊಲೀಸರು ದಾಖಲಿಸಿದ್ದು, ಸಮಾಜವಾದಿ ಪಕ್ಷದ ಸಂಸದ ಜಿಯಾ ಉರ್ ರೆಹಮಾನ್ ಬರ್ಕ್ ಮತ್ತು ಶಾಸಕ ಇಕ್ಬಾಲ್ ಮೆಹಮೂದ್ ಅವರ ಪುತ್ರ ನವಾಬ್ ಸುಹೈಲ್ರನ್ನು ಹೆಸರಿಸ ಲಾಗಿದೆ. ನ.30ವರೆಗೂ ಸಂಭಲ್ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗಾಯಾಳು ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದು, ಗೋಲಿಬಾರ್ಗೆ ಬಲಿಯಾದವರ ಸಂಖ್ಯೆ 4ಕ್ಕೇರಿದೆ.
ಸ್ಥಳೀಯ ಸಂಸದ, ಶಾಸಕರ ಪುತ್ರ ಸೇರಿ 6 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 2,750 ಮಂದಿಯನ್ನು ಅಪರಿಚಿತರೆಂದು ಎಫ್ಐಆರ್ ನಲ್ಲಿ ಹೆಸರಿಸಲಾಗಿದೆ. ಬರ್ಕ್ ಅವರ ಪ್ರಚೋದನೆಯಿಂದಾಗಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಸಂಭಲ್ ಎಸ್ಪಿ ತಿಳಿಸಿದ್ದಾರೆ. ಇದೇ ವೇಳೆ ಸಂಭಲ್ಗೆ ಹೊರಗಿನವರ ಪ್ರವೇಶ ನಿಷೇಧಿಸಲಾ ಗಿದೆ. ಅನುಮತಿ ಇಲ್ಲದೆ ಪ್ರವೇಶಿಸು ವಂತಿಲ್ಲ ಎಂದಿದ್ದಾರೆ.
ಹಿಂದೂ-ಮುಸ್ಲಿಮರ ನಡುವೆ ಬಿರುಕು ಸೃಷ್ಟಿಸಲು ಬಿಜೆಪಿ ತನ್ನ ಅಧಿಕಾರ ಬಳಸಿಕೊಳ್ಳುತ್ತಿದೆ. ಇದು ರಾಜ್ಯ ಅಥವಾ ದೇಶದ ಹಿತಕ್ಕಾಗಿಯಂತೂ ಅಲ್ಲ. ಆದ್ದರಿಂದ ನ್ಯಾಯಸ್ಥಾಪನೆಗಾಗಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು.
– ರಾಹುಲ್ ಗಾಂಧಿ, ವಿಪಕ್ಷ ನಾಯಕ