Advertisement

ರಾಮಮಂದಿರ ಪರ ಶಿಯಾ ವಕ್ಫ್ ಮಂಡಳಿ ಒಲವು; ಸುಪ್ರೀಂಗೆ ಅಫಿಡವಿಟ್

04:53 PM Aug 08, 2017 | Sharanya Alva |

ನವದೆಹಲಿ: ಮಹತ್ವದ ಬೆಳವಣಿಗೆ ಎಂಬಂತೆ ವಿವಾದಿತ ರಾಮಜನ್ಮಭೂಮಿ ಸ್ಥಳದಿಂದ ದೂರದಲ್ಲಿ ಅಥವಾ ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಪ್ರದೇಶದಲ್ಲಿ ಬಾಬ್ರಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಉತ್ತರಪ್ರದೇಶದ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಮಂಗಳವಾರ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅಫಿಡವಿಟ್ ನಲ್ಲಿ ತಿಳಿಸಿದೆ.

Advertisement

ರಾಮ ಜನ್ಮಭೂಮಿ ವಿವಾದ ಪ್ರಕರಣ ಇತ್ಯರ್ಥಕ್ಕೆ ತ್ರಿಸದಸ್ಯ ನ್ಯಾಯಪೀಠವನ್ನು ಸುಪ್ರೀಂ ಕೋರ್ಟ್ ಸೋಮವಾರವಷ್ಟೇ ರಚನೆ ಮಾಡಿದ ಬೆನ್ನಲ್ಲೇ ಶಿಯಾ ವಕ್ಫ್ ಮಂಡಳಿ ಈ ಅಫಿಟವಿತ್ ಸಲ್ಲಿಸಿದೆ.

ಎಎನ್ ಐ ವರದಿ ಪ್ರಕಾರ, ಅಯೋಧ್ಯೆಯಲ್ಲಿರುವ  ಶ್ರೀರಾಮನ ಜನ್ಮಸ್ಥಳದಿಂದ ದೂರದಲ್ಲಿ ಮುಸ್ಲಿಮ್ ಬಾಹುಳ್ಯ ಇರುವ ಪ್ರದೇಶದಲ್ಲಿ ಮಸೀದಿಯನ್ನು ನಿರ್ಮಿಸಲಾಗುವುದು ಎಂದು ಮಂಡಳಿ ಅಫಿಡವಿಟ್ ನಲ್ಲಿ ತಿಳಿಸಿರುವುದಾಗಿ ವರದಿ ಮಾಡಿದೆ.

ಅಲ್ಲದೇ ಬಾಬ್ರಿ ಮಸೀದಿ ಶಿಯಾ ವಕ್ಫ್ ಆಸ್ತಿಯಾಗಿದೆ. ಪರಸ್ಪರ ಸೌಹಾರ್ದತಯುತವಾಗಿ ಸಂಧಾನದ ಮೂಲಕವೇ ವಿವಾದವನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಹಾಗಾಗಿ ವಿವಾದವನ್ನು ಹೊಂದಾಣಿಕೆ ಮೂಲಕ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಸಮಿತಿಯನ್ನು ರಚಿಸಲು ಸುಪ್ರೀಂ ಪೀಠದಲ್ಲಿ ಮಂಡಳಿ ಕಾಲಾವಕಾಶವನ್ನು ಕೋರಿದೆ.

Advertisement

Udayavani is now on Telegram. Click here to join our channel and stay updated with the latest news.

Next