ಪಣಜಿ : ವಿಮಾನದಲ್ಲಿ ಬಾಂಬ್ ಇದೆ ಎನ್ನುವ ಬೆದರಿಕೆ ಹಿನ್ನೆಲೆ ರಷ್ಯಾದ ಮಾಸ್ಕೋದಿಂದ – ಗೋವಾಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಮಾರ್ಗಮಧ್ಯೆಯೇ ಉಜ್ಬೇಕಿಸ್ತಾನದಲ್ಲಿ ತುರ್ತಾಗಿ ಇಳಿಸಲಾಗಿದೆ.
2 ವಾರದಲ್ಲಿ ಇದು 2ನೇ ಬಾರಿಗೆ ಮಾಸ್ಕೋ-ಗೋವಾ ಮಾರ್ಗದ ವಿಮಾನ ಬಾಂಬ್ ಬೆದರಿಕೆ ಕರೆ ಬಂದಿದೆ.
ರಷ್ಯಾದ ವಿಮಾನ ಶನಿವಾರ ಬೆಳಗ್ಗೆ 4.15ಕ್ಕೆ ಗೋವಾದ ದಬೋಲಿಮ್ ವಿಮಾನದಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ, ಮಧ್ಯರಾತ್ರಿ 12.30ರ ಸಂದರ್ಭದಲ್ಲಿ ದಬೋಲಿಂ ವಿಮಾನ ನಿಲ್ದಾಣದ ನಿರ್ದೇಶಕರಿಂದ ವಿಮಾನದಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಇದೆ ಎನ್ನುವ ಮೇಲ್ ಸ್ವೀಕರಿಸಿದ ಹಿನ್ನೆಲೆ ಭಾರತ ವ್ಯಾಪ್ತಿ ಪ್ರವೇಶಿಸುವ ಮುಂಚೆಯೇ ವಿಮಾನವನ್ನು ಉಜ್ಬೇಕಿಸ್ತಾನದಲ್ಲಿ ಇಳಿಸಲಾಯಿತು.