Advertisement

ಶವಾಗಾರಕ್ಕೆ ಬೇಕಿದೆ ಕಾಯಕಲ್ಪ

07:16 PM Mar 08, 2021 | Team Udayavani |

ಸಿರುಗುಪ್ಪ: ನಗರದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಶವಗಾರ ಕಟ್ಟಡವು ಅತ್ಯಂತ  ಹಳೆ ಕಟ್ಟಡವಾಗಿದ್ದು, ಶಿಥಿಲಾವಸ್ಥೆ ತಲುಪಿದ್ದು, ಶವಾಗಾರ ಕಟ್ಟಡಕ್ಕೆ ಕಾಯಕಲ್ಪ ಒದಗಿಸಬೇಕಾಗಿದೆ. ಶವಗಳನ್ನು ರಕ್ಷಿಸಲು ಡಿಫ್ರಿಜರ್‌ ಯಂತ್ರಗಳು ಬಂದಿದ್ದರೂ ಆ ಯಂತ್ರಗಳನ್ನು ಅಳವಡಿಸಲು ಕೊಠಡಿಗಳ ಕೊರತೆ ಇದೆ.

Advertisement

ತಾಲೂಕಿನ ಏಕೈಕ ದೊಡ್ಡ ಆಸ್ಪತ್ರೆಯಾದ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಸಾಕಷ್ಟು ವೈದ್ಯರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಒಂದು ದಿನಕ್ಕೆ 250ರಿಂದ 300 ಹೊರರೋಗಿಗಳಿಗೆ ಇಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಅತಿಹೆಚ್ಚು ಹೆರಿಗೆಯನ್ನು ಇಲ್ಲಿ ಮಾಡಲಾಗುತ್ತಿದೆ. ಆದರೆ ಈ ಆಸ್ಪತ್ರೆಯಲ್ಲಿರುವ ಶವಗಾರ ಕಟ್ಟಡವು ಶಿಥಿಲಾವಸ್ಥೆ ತಲುಪಿದ್ದು, ವೈದ್ಯರು ಮತ್ತು ಸಿಬ್ಬಂದಿ ಶಿಥಿಲಗೊಂಡ ಶವಗಾರದಲ್ಲೇ ಅಪರಾಧ ಕೃತ್ಯ ಮತ್ತು ಅಪರಿಚಿತ ಶವ ಮೊದಲಾದವುಗಳನ್ನು ಪೋಸ್ಟ್‌ಮಾರ್ಟಮ್‌ ಮಾಡುತ್ತಾರೆ. ಸಾಧಾರಣವಾಗಿ ಎಲ್ಲ ವ್ಯವಸ್ಥೆಗಳು ಇರುವ ಈ ಆಸ್ಪತ್ರೆಯಲ್ಲಿ ಶವಾಗಾರ ಕಟ್ಟಡದ ಕೊರತೆ ಇದ್ದು ಸದ್ಯ ಇರುವ ಶವಾಗಾರ ಸಣ್ಣ ಕಟ್ಟಡದಲ್ಲಿದ್ದು ಕಟ್ಟಡದಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ.

ಕೇವಲ ಮೂರರಿಂದ ನಾಲ್ಕು ಶವಗಳನ್ನು ಇಡಲು ಮಾತ್ರ ವ್ಯವಸ್ಥೆ ಇದ್ದು, ಹೆಚ್ಚಿನ ಶವಗಳು ಬಂದಾಗ ಪರದಾಡಬೇಕಾದ ಸ್ಥಿತಿ ಇದೆ. ಮರಣೋತ್ತರ ಪರೀಕ್ಷೆ ನಡೆಸುವ ಸಂದರ್ಭದಲ್ಲಿ ವೈದ್ಯರಿಗೆ ಬೇಕಾಗಿರುವ ಡ್ರೆಸ್ಸಿಂಗ್‌ರೂಂ ವ್ಯವಸ್ಥೆ ಇಲ್ಲ. ಮೃತ ದೇಹವನ್ನು ಸುರಕ್ಷಿತವಾಗಿಡುವ ಡಿಪ್ರೀಜರ್‌ ಗಳಿದ್ದರೂ ಅವುಗಳನ್ನು ಅಳವಡಿಸಲು ಕೋಣೆ ವ್ಯವಸ್ಥೆ ಇಲ್ಲದೆ ಬಳ್ಳಾರಿಗೆ ಸಾಗಿಸಬೇಕಾದ ಅನಿವಾರ್ಯತೆ ಇದೆ. ಇದರಿಂದಾಗಿ ಸಂಬಂಧಪಟ್ಟ ವಾರಸುದಾರರ ಹಲವು ಬಾರಿ ಮೃತದೇಹಕ್ಕಾಗಿ ದಿನಗಟ್ಟಲೇ  ಕಾಯಬೇಕಾದ ಸ್ಥಿತಿ ನಿಮಾರ್ಣವಾಗಿದೆ. ಆದ್ದರಿಂದ ಇಲ್ಲಿ ಶವಗಳನ್ನು ಸಂರಕ್ಷಿಸುವ ಡಿಫ್ರಿಜರ್‌ಗಳಿಗೆ ಕೋಣೆಯ ವ್ಯವಸ್ಥೆ ಮತ್ತು ಸುಸಜ್ಜಿತ ಶವಗಾರ ನಿರ್ಮಾಣವಾಗಬೇಕಾಗಿದೆ.

ಆರ್‌.ಬಸವರೆಡ್ಡಿ ಕರೂರು  

Advertisement

Udayavani is now on Telegram. Click here to join our channel and stay updated with the latest news.

Next