Advertisement

ಎಡವಟ್ಟು ಮಾತಾಡಿ ಕ್ಷಮೆ ಕೇಳಿದ “ಮೊರಿನಿ’

09:46 PM Jul 31, 2021 | Team Udayavani |

ಟೋಕಿಯೊ: 10 ಮೀ. ಏರ್‌ ಪಿಸ್ತೂಲ್‌ ಶೂಟಿಂಗ್‌ನಲ್ಲಿ ಮನು ಭಾಕರ್‌ ವಿವಾದಾತ್ಮಕವಾಗಿ ಸೋತು ಹೋಗಿದ್ದರು. ಅವರ ಪಿಸ್ತೂಲ್‌ನ ಕಾಕಿಂಗ್‌ ಲಿವರ್‌ ಮುರಿದದದ್ದೇ ಇದಕ್ಕೆ ಕಾರಣ. ಇದನ್ನು ದುರಸ್ತಿ ಮಾಡುವ ಗಡಿಬಿಡಿಯಲ್ಲಿ 20 ನಿಮಿಷ ವ್ಯರ್ಥವಾಗಿತ್ತು.

Advertisement

ಇದರಿಂದ ಸಿಟ್ಟಾಗಿದ್ದ ಕೋಚ್‌ ರೋನಕ್‌ ಪಂಡಿತ್‌, ಪಿಸ್ತೂಲನ್ನು ತಯಾರಿಸಿಕೊಟ್ಟಿದ್ದ “ಮೊರಿನಿ ಕಂಪೆನಿ’ ಮೇಲೆ ಹರಿಹಾಯ್ದಿದ್ದರು. ಇದಕ್ಕೆ ಹಾಸ್ಯಾಸ್ಪದವಾಗಿ ಉತ್ತರಿಸಿದ್ದ ಮೊರಿನಿ ಮಾಲಕ ಫ್ರಾನ್ಸಿಸ್ಕೊ ರೆಪಿಚ್‌, “ಆ ಸಮಯದಲ್ಲಿ ಯಾವುದೇ ಭಾರತೀಯ ಸ್ಪರ್ಧಿ ನಮ್ಮ ಸಹಾಯವನ್ನೇ ಕೇಳಲಿಲ್ಲ’ ಎಂದಿದ್ದರು.

ಮೊರಿನಿ ಉತ್ತರವನ್ನು ಭಾರತ ಶೂಟಿಂಗ್‌ ಸಂಸ್ಥೆ ಎನ್‌ಆರ್‌ಎಐ ಗಂಭೀರವಾಗಿ ಪರಿಗಣಿಸಿ ನೋಟಿಸ್‌ ಕಳುಹಿಸಿತ್ತು. ಸಮಸ್ಯೆಯ ತೀವ್ರತೆಯನ್ನು ಅರಿತ ರೆಪಿಚ್‌ ಇದೀಗ ಬೇಷರತ್‌ ಕ್ಷಮೆಯಾಚಿಸಿದ್ದಾರೆ. ತಾನು ಬೇಜವಾಬ್ದಾರಿಯಿಂದ ಮಾತಾಡಿದ್ದೇನೆ, ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next