Advertisement

ಮಮತಾ ಬ್ಯಾನರ್ಜಿಗೆ ಮತ್ತಷ್ಟು ಸಂಕಷ್ಟ; ಕಲ್ಲಿದ್ದಲು ಹಗರಣ-ಅಭಿಷೇಕ್ ಗೆ ಇ.ಡಿ. ಸಮನ್ಸ್

05:05 PM Aug 30, 2022 | Team Udayavani |

ಕೋಲ್ಕತಾ: ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 2ರಂದು ವಿಚಾರಣೆಗೆ ಹಾಜರಾಗಬೇಕೆಂದು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್ ಬ್ಯಾನರ್ಜಿಗೆ ಜಾರಿ ನಿರ್ದೇಶನಾಲಯ ಮಂಗಳವಾರ (ಆಗಸ್ಟ್ 30) ಸಮನ್ಸ್ ಜಾರಿ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಗಣೇಶ ವಿಸರ್ಜನೆ: ಸೆ.2 ರಂದು ಮಂಗಳೂರು ನಗರದ ಕಮೀಷನರೇಟ್ ವ್ಯಾಪ್ತಿಯ ಶಾಲಾ, ಕಾಲೇಜುಗಳಿಗೆ ರಜೆ

ಅಭಿಷೇಕ್ ವಿರುದ್ಧ ಹಣಕಾಸು ವರ್ಗಾವಣೆ ನಿಗ್ರಹ ಕಾಯ್ದೆ 2002ರ ಅಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಕಲ್ಲಿದ್ದಲು ಹಗರಣದಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು ಎಂದು ಸಿಬಿಐ 2020ರ ನವೆಂಬರ್ ನಲ್ಲಿ ಎಫ್ ಐಆರ್ ದಾಖಲಿಸಿದ್ದು, ಈ ಆಧಾರದ ಮೇಲೆ ಇ.ಡಿ. ಪ್ರಕರಣ ದಾಖಲಿಸಿಕೊಂಡಿತ್ತು ಎಂದು ವರದಿ ವಿವರಿಸಿದೆ.

ಗೋ ಕಳ್ಳಸಾಗಣೆಯಲ್ಲಿ ಬಿಜೆಪಿ ಮುಖಂಡರು ಅತೀ ಹೆಚ್ಚು ಶಾಮೀಲಾಗಿರುವುದಾಗಿ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ ಸೋಮವಾರ ಆರೋಪಿಸಿದ್ದರು. ಗಡಿಯಲ್ಲಿ ಯಾವ ರೀತಿ ಗೋ ಕಳ್ಳಸಾಗಣೆಯಾಗುತ್ತಿದೆ ಎಂಬುದನ್ನು ಗೃಹ ಸಚಿವ ಅಮಿತ್ ಶಾ ಯಾಕೆ ಪ್ರಶ್ನಿಸುತ್ತಿಲ್ಲ. ಇದರಿಂದ ಬಂದ ಹಣ ನೇರವಾಗಿ ಗೃಹ ಸಚಿವಾಲಯ ತಲುಪುತ್ತಿದೆ ಎಂದು ಅಭಿಷೇಕ್ ದೂರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next