Advertisement

2050ರೊಳಗೆ ಒಂದಕ್ಕಿಂತ ಹೆಚ್ಚು ಮಹಾರಾಷ್ಟ್ರೀಯರು ಪ್ರಧಾನಿ: ಫ‌ಡ್ನವೀಸ್

11:48 AM Jan 05, 2019 | udayavani editorial |

ನಾಗ್ಪುರ, ಮಹಾರಾಷ್ಟ್ರ : 2050 ರೊಳಗೆ ಒಬ್ಬರಿಗಿಂತ ಹೆಚ್ಚು ಸಂಖ್ಯೆಯ ಮಹಾರಾಷ್ಟ್ರೀಯರು ದೇಶದ ಪ್ರಧಾನಿಯಾಗಬಲ್ಲರು ಎಂದು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

Advertisement

ಹದಿನಾರನೇ ಜಾಗತಿಕ ಮರಾಠಿ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ  ಏರ್ಪಟ್ಟ  ಸಾರ್ವಜನಿಕ ಸಂದರ್ಶನದಲ್ಲಿ  ಸಿಎಂ ಫ‌ಡ್ನವೀಸ್‌ ಮಾತನಾಡುತ್ತಿದ್ದರು. 

2050ರೊಳಗೆ ಭಾರತ ಒಬ್ಬನಾದರೂ ಮಹಾರಾಷ್ಟ್ರೀಯ ಪ್ರಧಾನಿಯಾಗುವುದನ್ನು ಕಂಡೀತೇ ಎಂದು ಕೇಳಲಾದ ಪ್ರಶ್ನೆಗೆ ಫ‌ಡ್ನವೀಸ್‌, ‘ಒಬ್ಬರೇ ಏಕೆ, ಒಬ್ಬರಿಗಿಂತಲೂ ಹೆಚ್ಚು ಸಂಖ್ಯೆಯ ಮಹಾರಾಷ್ಟ್ರೀಯರು 2050 ರೊಳಗೆ ದೇಶದ ಪ್ರಧಾನಿ ಆದಾರು’ ಎಂದು ಉತ್ತರಿಸಿದರು. 

‘ಭಾರತವನ್ನು ಯಾರಾದರೂ ಸಮಗ್ರವಾಗಿ ಆಳಿದ್ದರೆ ಅದು ಮಹಾರಾಷ್ಟ್ರೀಯರು. ಅಧಿಕಾರದ ತುತ್ತ ತುದಿ ಏರುವ ಸಾಮರ್ಥ್ಯ ಮಹಾರಾಷ್ಟ್ರೀಯರಿಗಿದೆ’ ಎಂದು ಫ‌ಡ್ನವೀಸ್‌ ಹೇಳಿದರು. ಹಾಗಿದ್ದರೂ ಈ ತನಕ ಒಬ್ಬನೇ ಒಬ್ಬ  ಮಹಾರಾಷ್ಟ್ರೀಯ ದೇಶದ ಪ್ರಧಾನಿ ಆಗಿಲ್ಲ ಎಂಬುದನ್ನು ಫ‌ಡ್ನವೀಸ್‌ಗೆ ನೆನಪಿಸಿಕೊಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next