Advertisement
ವಯನಾಡ್‌ನಲ್ಲಿ ಒಟ್ಟು 13,57,819 ಮಂದಿ ಮತದಾರರಿದ್ದು, ಇವರಲ್ಲಿ 6,73,011 ಮಂದಿ ಹೊರ ಜಿಲ್ಲೆಯ ವ್ಯಕ್ತಿಗಳು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಚುನಾವಣ ಆಯೋಗ ಮಾ.25ರವರೆಗೆ ಅರ್ಜಿಗಳನ್ನು ಸ್ವೀಕರಿಸಿದೆ. ಮತದಾರರ ಪಟ್ಟಿ ಪ್ರಕಾರ ಇಲ್ಲಿ 6,73, 011 ಮಂದಿ ಪುರುಷರು ಮತ್ತು 6,84,807 ಮಂದಿ ಮಹಿಳೆಯರಿದ್ದಾರೆ. ಇಡೀ ಜಿಲ್ಲೆಯ ಜನಸಂಖ್ಯೆ 9,17,420 ಆಗಿದ್ದು 4,01,684 ಮಂದಿ ಪುರುಷರು ಮತ್ತು 4,15,736 ಮಂದಿ ಮಹಿಳೆಯರಿದ್ದಾರೆ. ವಯನಾಡ್ 7 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದು ವಯನಾಡ್ ಜಿಲ್ಲೆಯಲ್ಲಿ 3, ಕೋಯಿಕ್ಕೋಡ್‌ನಲ್ಲಿ 1 ಮತ್ತು ಮಲಪ್ಪುರಂನಲ್ಲಿ 3 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ.
ವಯನಾಡ್‌ನಲ್ಲಿ ಸುಗಮ ಮತದಾನ ಪ್ರಕ್ರಿಯೆ ನಡೆಸಲು ಚುನಾವಣ ಆಯೋಗ 5 ಸಾವಿರ ಸಿಬಂದಿ ನಿಯೋಜನೆ ಮಾಡಲಿದೆ. 3750 ಮಂದಿ ಬೂತ್ ಮಟ್ಟದ ಸಿಬಂದಿ ಸೇರಿ 5 ಸಾವಿರ ಮಂದಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವಯನಾಡ್‌ನಲ್ಲಿ ಈ ಬಾರಿ 575 ಮತದಾನ ಕೇಂದ್ರ ಗಳಿರಲಿದ್ದು ಭದ್ರತೆಗಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಕೇರಳ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ನಕ್ಸಲ್ ಬೆದರಿಕೆ ಇರುವ ಮತ ಗಟ್ಟೆಗಳು, ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕೇಂದ್ರೀಯ ಪಡೆಗಳನ್ನು ನಿಯೋಜಿಸ ಲಾಗುವುದು ಎಂದು ಕೇರಳ ಚುನಾವಣ ಆಯುಕ್ತರು ಹೇಳಿದ್ದಾರೆ.