ವಾಷಿಂಗ್ಟನ್: ಮಿಲ್ಕಿ ವೇ ಗ್ಯಾಲಕ್ಸಿಯ ಆಚೆಗೂ ಗ್ರಹಗಳಿವೆ ಎಂಬುದನ್ನು ಬಾಹ್ಯಾಕಾಶ ವಿಜ್ಞಾನಿ ಗಳು ಇದೇ ಮೊದಲ ಬಾರಿಗೆ ಕಂಡುಕೊಂಡಿದ್ದಾರೆ. ನಾಸಾದ ಚಂದ್ರ ಎಕ್ಸ್‌ರೇ ಪರಿವೀಕ್ಷಣಾಲಯವನ್ನು ಬಳಸಿಕೊಂಡು ಓಕ್ಲಹಾಮಾ ವಿವಿ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದು, ಚಂದ್ರ ಹಾಗೂ ಜುಪಿಟರ್ ಗಾತ್ರದ ಗ್ಯಾಲಕ್ಸಿಗಳನ್ನು ಕಂಡುಕೊಂಡಿದ್ದಾರೆ.
ಗ್ರಹಗಳನ್ನು ಗುರುತಿಸಲು ಬೆಳಕಿನ ಕಿರಣ ಅಧ್ಯಯನ ನಡೆಸಿದ್ದಾರೆ. ಗ್ರಹಗಳ ಗುರುತ್ವಾಕರ್ಷಣೆಯಿಂದಾಗಿ ಬೆಳಕು ಬಾಗುವ ರೀತಿಯನ್ನು ಮೈಕ್ರೋಲೆನ್ಸಿಂಗ್ ಬಳಸಿ ಅಧ್ಯಯನ ನಡೆಸಿದ್ದಾರೆ. ಸಾಮಾನ್ಯವಾಗಿ ಮೈಕ್ರೋಲೆನ್ಸಿಂಗ್ ಬಳಸಿ ಗ್ಯಾಲಕ್ಸಿಯಲ್ಲಿರುವ ಉಪಗ್ರಹ, ಆಕಾಶ ಕಾಯಗಳ ಅಧ್ಯಯನ ಮಾಡಲಾಗುತ್ತದೆ.