Advertisement
ಅತೀ ವೇಗದ ಸಂಚಾರಜಿಲ್ಲೆಯಲ್ಲಿ ಲಾಕ್‌ಡೌನ್ ಕಾರಣದಿಂದ ಕೆಲದಿನಗಳ ಹಿಂದೆ ಬಿಗು ತಪಾಸಣೆ ಇದ್ದ ಕಾರಣ ಬೆರಳೆಣಿಕೆಯ ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ವೇಗದ ಪ್ರಮಾಣವೂ ಹೆಚ್ಚಿತ್ತು. ಈಗ ಲಾಕ್‌ಡೌನ್ ಸಡಿಲಿಕೆ ಮಾಡಿರುವುದರಿಂದ ವಾಹನಗಳ ಓಡಾಟ ಹೆಚ್ಚಾಗಿದೆ ಆದರೆ ವೇಗದ ಮಿತಿ ಮಾತ್ರ ಕಡಿಮೆಯಾಗಿಲ್ಲ. ಈ ಕಾರಣಕ್ಕಾಗಿ ದಿನಂಪ್ರತಿ ಸಣ್ಣಪುಟ್ಟ ಅಪಘಾತಗಳು ಉಡುಪಿ-ಮಣಿಪಾಲ ಮಾರ್ಗದಲ್ಲಿ ನಡೆಯುತ್ತಿವೆ.
ಹೆಚ್ಚುತ್ತಿರುವ ಅಪಘಾತಗಳು ಹಾಗೂ ಟ್ರಾಫಿಕ್ ದಟ್ಟಣೆಗೆ ಕಡಿವಾಣ ಬೀಳಬೇಕೆಂದರೆ ಅನಧಿಕೃತ ಯೂ ಟರ್ನ್ಗಳನ್ನು ಮುಚ್ಚಬೇಕಿದೆ. 2 ಕಿಮೀಗೆ ಒಂದರಂತೆ ಅಗತ್ಯವಾಗಿ ಯೂ ಟರ್ನ್ ನಿರ್ಮಿಸುವ ಕೆಲಸ ಆಗಬೇಕಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು. ಹೆದ್ದಾರಿ ಇಲಾಖೆಯವರು ಕಾನೂನು ಪ್ರಕಾರ ಯೂ ಟರ್ನ್ಗಳನ್ನು ನಿರ್ಮಿಸಿದರೂ ವಾಹನ ಸವಾರರು ವಿರುದ್ದ ದಿಕ್ಕಿನಲ್ಲಿ ಸಂಚರಿಸುವ ಘಟನೆಗಳು ನಡೆಯುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆಯವರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೆ ಎಲ್ಲ ಸಮಸ್ಯೆಗಳೂ ನಿವಾರಣೆಯಾಗಲು ಸಾಧ್ಯವಿದೆ. ಮಾರ್ಗಸೂಚಿಯಂತೆ ನಿರ್ಮಾಣ
ಹೆದ್ದಾರಿ ಇಲಾಖೆಯ ಮಾರ್ಗಸೂಚಿಯಂತೆ 2 ಕಿ. ಮೀ.ಗೆ ಒಂದರಂತೆ ಯೂ ಟರ್ನ್ ನಿರ್ಮಿಸುವ ನಿಯಮವಿದೆ. ಇವಿಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಇರುವ ರಸ್ತೆ ಸುರಕ್ಷಾ ಸಮಿತಿ ಸ್ಥಳ ಪರಿಶೀಲಿಸಿ ನಿರ್ಧರಿಸಿದಂತೆ ಯುಟರ್ನ್ ಗಳನ್ನು ನಿರ್ಮಿಸಲಾಗಿದೆ. ರಸ್ತೆ ಸುರಕ್ಷಾ ಸಮಿತಿಯ ನಿರ್ದೇಶನಗಳನ್ನು ಪಾಲಿಸಿ ನಿರ್ಮಿಸಲಾಗಿದೆ.
-ಮಂಜುನಾಥ ನಾಯಕ್, ಎಂಜಿನಿಯರ್
Related Articles
– ಕಲ್ಸಂಕ.
– ಕುಂಜಿಬೆಟ್ಟು .
– ಎಂಜಿಎಂ.
– ಇಂದ್ರಾಳಿ.
– ಇಂದ್ರಾಳಿ ಪೆಟ್ರೋಲ್ ಪಂಪ್.
– ಸಿಂಡಿಕೇಟ್ ಸರ್ಕಲ್.
– ಮಣಿಪಾಲ ಪೊಲೀಸ್ ಠಾಣೆ ಬಳಿ.
– ಮಣಿಪಾಲ ಜಂಕ್ಷನ್.
– ಬಬ್ಬುಸ್ವಾಮಿ ದೇವಸ್ಥಾನದ ಬಳಿ.
Advertisement