Advertisement

ಇಂಡೋನೇಶ್ಯ ಭೂಕಂಪ: ಆಹಾರ, ಔಷಧ, ನೀರು ಇಲ್ಲದ ನಿರಾಶ್ರಿತರು 70,000

11:49 AM Aug 08, 2018 | Team Udayavani |

ಮಾತಾರಾಂ, ಇಂಡೋನೇಶ್ಯ : ಕಳೆದ ಭಾನುವಾರ 6.9 ಅಂಕಗಳ ತೀವ್ರತೆಯ ಅತ್ಯಂತ ವಿನಾಶಕಾರಿ ಭೂಕಂಪಕ್ಕೆ ತುತ್ತಾದ ಇಂಡೋನೇಶ್ಯದ ಲೋಂಬೋಕ್‌ ದ್ವೀಪದಲ್ಲಿ 70,000 ಜನರು ನಿರಾಶ್ರಿತಾಗಿದ್ದಾರೆ. ಆಹಾರ, ಔಷಧ, ಕುಡಿಯುವ ಶುದ್ಧ ನೀರು ಇತ್ಯಾದಿ ಯಾವುದೂ ಇಲ್ಲದೆ ಕಂಗೆಟ್ಟಿರುವ ಈ ನಿರಾಶ್ರಿತರು ತಾತ್ಕಾಲಿಕ ಟೆಂಟ್‌ಗಳಲ್ಲಿ ಬದುಕುತ್ತಿದ್ದಾರೆ.

Advertisement

ಕಳೆದ ಭಾನುವಾರ ಲೋಂಬೋಕ್‌ ದ್ವೀಪದಲ್ಲಿ ಸಂಭವಿಸಿದ್ದ  ಭೀಕರ ಭೂಕಂಪಕ್ಕೆ ಕನಿಷ್ಠ 105 ಮಂದಿ ಬಲಿಯಾಗಿದ್ದರು. ವಾರದ ಹಿಂದಷ್ಟೇ ಸಂಭಿವಿಸಿದ್ದ ಭೂಕಂಪಕ್ಕೆ 17 ಮಂದಿ ಬಲಿಯಾಗಿದ್ದರು. 

ಕನಿಷ್ಠ 236 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಸಾವಿರಾರು ಜನರು ತಮ್ಮ ಮನೆ ಮಾರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಅಂತೆಯೇ ಅಧಿಕಾರಿಗಳು ಇತರೆಡೆಯ ಜನರಿಗೆ ಉದಾರತೆ ತೋರಿ ಆಹಾರ, ಔಷಧ, ಬಟ್ಟೆ ಬರೆ ಇತ್ಯಾದಿಗಳ ರೂಪದಲ್ಲಿ ನೆರವಾಗುವಂತೆ ಕೋರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next