Advertisement
ಪ್ರಕರಣದಲ್ಲಿ ಸೆರೆ ಯಾಗಿರುವ ಡಾ| ಚಂದನ್ ಬಲ್ಲಾಳ್‌ನ ಮಾತಾ ಆಸ್ಪತ್ರೆ ಮತ್ತು ಆಯುರ್ವೇದಿಕ್ ಆಸ್ಪತ್ರೆಯ ನರ್ಸ್ ಮಂಜುಳಾ ಪೊಲೀಸರ ಎದುರು ಇಂತಹ ಸ್ಫೋಟಕ ಹೇಳಿಕೆ ನೀಡಿದ್ದಾಳೆ. ಮತ್ತೂಂದೆಡೆ ಕಳೆದ 1 ವರ್ಷದಲ್ಲಿ ಮಾತಾ ಆಸ್ಪತ್ರೆ ಮತ್ತು ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಭ್ರೂಣಗಳ ಹತ್ಯೆ ಮಾಡಲಾಗಿದೆ ಎಂಬುದು ಈಕೆಯ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
Related Articles
ಚಂದನ್ ಬಲ್ಲಾಳ್ ಸೂಚನೆ ಮೇರೆಗೆ ಪ್ರತೀ ತಿಂಗಳು 70ಕ್ಕೂ ಹೆಚ್ಚು ಹೆಣ್ಣು ಭ್ರೂಣಗಳನ್ನು ಗರ್ಭಪಾತ ಮಾಡಿ ಎಸೆಯಲಾಗುತ್ತಿತ್ತು. “12 ವಾರಗಳ ಒಳಗಿನ ಭ್ರೂಣಗಳನ್ನು ಶೌಚಾಲಯಕ್ಕೆ ಎಸೆದು ಫ್ಲಷ್ ಮಾಡುತ್ತಿದ್ದೆವು. ಮೂರು ತಿಂಗಳ ಅಥವಾ ಅದಕ್ಕಿಂತ ಮೇಲ್ಪಟ್ಟ ಭ್ರೂಣಗಳನ್ನು ವೈದ್ಯಕೀಯ ತ್ಯಾಜ್ಯ ಎಂದು ಎಸೆಯುತ್ತಿದ್ದೆವು. ನಾಲ್ಕೈದು ಅಥವಾ ಆರು ತಿಂಗಳ ಭ್ರೂಣಗಳನ್ನು ಪ್ರಯೋಗಾಲಯದ ಸಿಬಂದಿ ನಿಸಾರ್‌ಗೆ ಕೊಡುತ್ತಿದ್ದೆವು. ಆತ ಅವುಗಳನ್ನು ಕಾವೇರಿ ನದಿಗೆ ಎಸೆಯುತ್ತಿದ್ದ. ಕೆಲವೊಮ್ಮೆ 7 ತಿಂಗಳ ಮಗು ತೆಗೆಯುವಾಗ ತಾಯಿಗೆ ಮಾತ್ರೆಗಳು ಹಾಗೂ ಇಂಜೆಕ್ಷನ್ ನೀಡುತ್ತಿದ್ದೆವು. ಬಳಿಕ ಸಾಮಾನ್ಯ ಹೆರಿಗೆ ಅಥವಾ ಸಿಸೇರಿಯನ್ ಮಾಡಿ ಹೊರ ತೆಗೆಯುತ್ತಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ಮಗು ಸಾಯುತ್ತಿತ್ತು. ಅವುಗಳನ್ನು ಕಾವೇರಿ ನದಿಗೆ ಎಸೆಯಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಆಪ್ತ ಸಮಾಲೋಚಕಿ ಆಗಿದ್ದಳುಈಕೆ ಚಂದನ್ ಬಲ್ಲಾಳ್‌ನ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಶುಶ್ರೂಶಕಿ ಜತೆಗೆ ರೋಗಿಗಳಿಗೆ ಆಪ್ತ ಸಮಾಲೋಚಕಿಯೂ ಆಗಿದ್ದಳು ಎಂಬುದು ಗೊತ್ತಾಗಿದೆ. 2022ಕ್ಕೂ ಮೊದಲು ಒಂದೆರಡು ಆಸ್ಪತ್ರೆಯಲ್ಲಿ ಕೆಲಸ ಮಾಡಿದ್ದ ಮಂಜುಳಾ ಆ ಸಂಪರ್ಕದ ಆಧಾರದ ಮೇಲೆ ಭ್ರೂಣಲಿಂಗ ಪತ್ತೆ ಹಚ್ಚುವ ಅವಕಾಶವಿದೆ ಎಂದು ಮಾತಾ ಆಸ್ಪತ್ರೆಗೆ ಕರೆಯಿಸಿಕೊಳ್ಳುತ್ತಿದ್ದಳು. ಭ್ರೂಣ ಪತ್ತೆ ಹಚ್ಚಿ, ಹೆಣ್ಣು ಮಗುವಾದರೆ, ಗರ್ಭಪಾತಕ್ಕೆ ಹೆತ್ತವರ ಒಲವಿದ್ದರೆ, ಇಲ್ಲಿಯೇ ಮಾಡಲಾಗುತ್ತದೆ ಎಂದು ಗರ್ಭಪಾತ ಮಾಡಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ತನಿಖೆಯಲ್ಲಿ ಆಕೆಯ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿದ ಬೈಯಪ್ಪನಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಪ್ರಶಾಂತ್ ಮತ್ತು ತಂಡ ಈಕೆಯ ಬೆನ್ನು ಬಿದ್ದಿತ್ತು. ಇತ್ತೀಚೆಗೆ ಕೆಲಸಕ್ಕೆ ಸೇರಿಕೊಂಡಿದ್ದ ಆಸ್ಪತ್ರೆಯಿಂದಲೇ ಮಂಜುಳಾನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. 3 ಸಾವಿರ ಗಡಿ ದಾಟಿದ ಭ್ರೂಣ ಹತ್ಯೆ
ಪ್ರಕರಣದಲ್ಲಿ ಇದುವರೆಗೆ ಬಂಧನಕ್ಕೆ ಒಳಗಾಗಿರುವ ಎಲ್ಲ ಆರೋಪಿಗಳು 3 ವರ್ಷಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಹೆಣ್ಣುಭ್ರೂಣಗಳ ಹತ್ಯೆ ಮಾಡ ಲಾಗಿದೆ ಎಂದು ಹೇಳಿಕೆ ನೀಡಿ ದ್ದರು. ಆದರೆ ನರ್ಸ್ ಮಂಜುಳಾ ಹೇಳಿಕೆ ಆಘಾತ ನೀಡಿದೆ. ಕಳೆದ ಒಂದು ವರ್ಷದಲ್ಲೇ ಒಂದು ಸಾವಿರಕ್ಕೂ ಹೆಚ್ಚು ಭ್ರೂಣಗಳ ಹತ್ಯೆಗೈಯಲಾಗಿದೆ ಎಂದು ಆಕೆ ಹೇಳಿದ್ದಾಳೆ. ಹಾಗಾಗಿ ಮೂರು ವರ್ಷದಲ್ಲಿ ಸರಾಸರಿ ಮೂರು ಸಾವಿರಕ್ಕೂ ಹೆಚ್ಚು ಭ್ರೂಣಗಳ ಹತ್ಯೆ ನಡೆದಿದೆ ಎಂದು ಅಂದಾಜಿಸ ಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.