Advertisement
ಶ್ರವಣಬೆಳಗೊಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಅವರು, ವಿಂಧ್ಯಗಿರಿಗೆ ಭೇಟಿ ನೀಡಿ ಬಾಹುಬಲಿ ಮೂರ್ತಿಯ ಅಭಿಷೇಕಕ್ಕೆ ನಿರ್ಮಿಸಿ ರುವ ಅಟ್ಟಣಿಗೆ ಪರಿಶೀಲಿಸಿದರು. ಬೆಂಗಳೂರು ಮಾರ್ಗದ ರಸ್ತೆಯಲ್ಲಿರುವ ಹೊಸಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಮುಖ್ಯ ವೇದಿಕೆ, ತ್ಯಾಗಿನಗರ, ಪಂಚಕಲ್ಯಾಣನಗರ, ಎರಡು ಕಳಶ ನಗರಗಳು, ಅಧಿಕಾರಿಗಳ ನಗರ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಸ್ತುಪ್ರದರ್ಶನ, ಭೋಜನಾಲಯ, ಮಾಧ್ಯಮ ನಗರ, ಪೋಲಿಸ್ ನಗರ, ಅಗ್ನಿಶಾಮಕ, ಹೆಲಿಪ್ಯಾಡ್, ತಾತ್ಕಾಲಿಕ ವಾಹನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಪ್ರವಾಸಿಗರು, ಯಾತ್ರಾರ್ಥಿಗಳ ಆಗಮದ ಸಂಖ್ಯೆ ಆಧರಿಸಿ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗೆ ಬಳಸಿಕೊಳ್ಳ ಲಾಗುವುದು. ಶ್ವಾನದಳ ಸೇರಿ ಎಲ್ಲಾ
ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ರಾಷ್ಟ್ರಪತಿಯವರು ಫೆ.7ರಂದು ಉದ್ಘಾಟನೆಗೆ ಆಗಮಿಸಲಿದ್ದಾರೆಂಬ ಮಾಹಿತಿ ಇದೆ. ಆದರೆ ಇನ್ನೂ ಖಚಿತವಾಗಿಲ್ಲ. ಅತಿಗಣ್ಯರು ಆಗಮಿಸುವ ವೇಳೆ ವಿಶೇಷ ಬಂದೋಬಸ್ತ್ ಇದ್ದೇ ಇರುತ್ತದೆ ಎಂದ ಅವರು, ಹೊರ ರಾಜ್ಯ ಮತ್ತು ಹೊರ ದೇಶಗಳ ಯಾತ್ರಾರ್ಥಿಗಳೂ
ಬರುವುದರಿಂದ ಸಂವಹನದ ತೊಂದರೆಯಾಗದಂತೆ ಕನ್ನಡ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾಹಿತಿ ಫಲಕ ಅಳವಡಿಕೆ, ಹಾಗೂ ಮಾಹಿತಿ ಪ್ರಕಟಣೆ ವ್ಯವಸ್ಥೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿ ದರು. ಕಾನೂನು ಸುವ್ಯವಸ್ಥೆಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್ ಪಂಥ್, ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್
ಶಹಪುರವಾಡ್ ಈ ಸಂದರ್ಭದಲ್ಲಿ ಹಾಜರಿದ್ದರು. ನೀಲಮಣಿ ರಾಜು ಅವರು ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರೊಂದಿಗೂ ಸಮಾಲೋಚನೆ ನಡೆಸಿದರು. ಹಿಂದಿನ ಮಹಾ
ಮಸ್ತಕಾ ಭಿಷೇಕದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸಿಲ್ಲ. ಈ ಬಾರಿಯೂ ಅದೇ ರೀತಿಯ ಸಹಕಾರವನ್ನು
ನೀಡಬೇಕೆಂದು ಸ್ವಾಮೀಜಿ ಕೋರಿದರು.