Advertisement
ಕುಂದಾಪುರ ವಲಯದ ಸೂರ್ಗೊಳಿ ಸರಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕ ಶ್ರೀನಿವಾಸ ಅವರು ತಮ್ಮ ಶಾಲೆಯಲ್ಲಿ ಈ ಅಪರೂಪದ ಹಳೆಯ ವಸ್ತುಗಳ ಸಂಗ್ರಹಗಾರ ತೆರೆದಿದ್ದಾರೆ.
ತೆಂಗಿನ ಪೊರಕೆ,ಅಡಿಕೆ ಪೊರಕೆ,ಮರದ ಬಾಚಣಿಗೆ,ಹಾಳೆ ಕಡ್ಡಿ,ಚಿಟ್ ಬಿಲ್ಲೆ,ವಿಭೂತಿ ಕರಡಿಕೆ,ಕೋಳಿ ಮರ್ಗಿ,ದೀಪದ ಕಾಲು,ಚಿಮಣಿ,ಸಾಣೆ ಕಲ್ಲು,ಅಡ್ಡ ಕತ್ತರಿ, ಕಣಸೆ, ರೇಡಿಯೋ,ನಾರು ಹಗ್ಗ, ತಳಕಿ ಬಳ್ಳಿ, ಕುಕ್ಕೆ, ಹಿಟ್ಟಿನ ಕುಕ್ಕೆ,ಹಚ್ ಕುಕ್ಕೆ,ಓಲಿ ಚಾಪೆ, ಹಣ್ಣು ಕಾಯಿ ತರುವ ಬುಟ್ಟಿ,ಸಿಬ್ಬಲು,ಇಟ್ಟಿಗೆ ಅಚ್ಚು,ಕಡಕಲ್ಲು ಮಣೆ, ಚರಕ, ಮಡೆ ಬಳ್ಳಿ,ಜೊತಕ,ಹೋರಿ ದುಡಿ,ಭತ್ತ ಎಳೆಯುವ ಗೋರಿ,ಕಂಬಳದ ಗೋರಿ,ದಾಮಸ್, ಸೈಂಗೋಲು, ಕಡಲಿ, ಚಕ್ಕೆ ಮಚ್ಚು, ಕೋಳಿ ಗೂಡು, ಕಮ್ ಗೂಡು, ಕರಾವಳಿ, ಮಲೆನಾಡು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಳಸುತ್ತಿದ್ದ 300ಕ್ಕೂ ಹೆಚ್ಚಿನ ವಸ್ತುಗಳು ಇವರ ಸಂಗ್ರಹದಲ್ಲಿವೆ. ಕೇವಲ ತಮ್ಮ ಶಾಲೆಯ ಮಕ್ಕಳಿಗೆ ಮಾತ್ರವಲ್ಲದೆ, ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಸಮಾರಂಭಗಳಲ್ಲಿ ಕೂಡ ಇವುಗಳ ಪ್ರದರ್ಶನವನ್ನು ಇವರು ಏರ್ಪಡಿಸಿದ್ದಾರೆ.
Related Articles
ಆಧುನಿಕ ಯಂತ್ರೋಪಕರಣ ಇಲ್ಲದಿದ್ದ ಸಮಯದಲ್ಲಿ ನಮ್ಮ ಪೂರ್ವಜರು ತಾವೇ ಅಗತ್ಯಕ್ಕೆ ತಕ್ಕ ಉಪಕರಣಗಳನ್ನು ತಯಾರಿಸಿಕೊಂಡು ಹೇಗೆ ಬಳಸುತ್ತಿದ್ದರು?, ಗ್ರಾಮೀಣ ಜೀವನ ವಿಧಾನವನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಈ ವಸ್ತುಗಳ ಸಂಗ್ರಹ ಹಾಗೂ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಶಾಲೆಯಲ್ಲಿ ನಲಿ – ಕಲಿ ಯೋಜನೆಯಲ್ಲಿ ಮಕ್ಕಳಿಗಾಗಿ ಸಂಗ್ರಹಿಸಿದ ವಸ್ತುಗಳ ಮೂಲಕ ಆಸಕ್ತಿ ಬೆಳದು, ವಸ್ತುಗಳ ಸಂಗ್ರಹ ಕಾರ್ಯದಲ್ಲಿ ತೊಡಗಿಸಿದೆ.
-ಶ್ರೀನಿವಾಸ್ ಸೂರ್ಗೋಳಿ,ಶಿಕ್ಷಕರು
Advertisement