Advertisement

ಮೇಘ ಸ್ಪೋಟ : ಲಾಹೌಲ್ ಸ್ಪಿಟಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ 200ಕ್ಕೂ ಹೆಚ್ಚು ಪ್ರವಾಸಿಗರು..!

11:32 AM Jul 30, 2021 | Team Udayavani |

ಲಾಹೌಲ್ ಸ್ಪಿಟಿ : ಭಾರಿ ಮಳೆ,  ಗುಡ್ಡ ಕುಸಿತ ಹಾಗೂ ಮೇಘ ಸ್ಪೋಟದ ಕಾರಣದಿಂದಾಗಿ ಹಿಮಾಚಲ ಪ್ರದೇಶದ ಲಾಹೌಲ್  ಸ್ಪಿಟಿಯಲ್ಲಿ ಅಂದಾಜು 221 ಪ್ರವಾಸಿಗರು ಅಂತಂತ್ರ ಸ್ಥಿತಿಗೆ ಸಿಲುಕಿಕೊಂಡಿದ್ದಾರೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

Advertisement

ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಡಳಿತ,  ಒಟ್ಟು 191 ಮಂದಿ ಹಿಮಾಚಲ ಪ್ರದೇಶದ ಸ್ಥಳೀಯ ಪ್ರವಾಸಿಗರು ಮತ್ತು 30 ಮಂದಿ ಪಂಜಾಬ್, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ದೆಹಲಿ, ಒಡಿಶಾದವರು ಎಂದು ತಿಳಿದು ಬಂದಿದ್ದು, ಸದ್ಯ ಎಲ್ಲರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದೆ.

ಇದನ್ನೂ ಓದಿ : ಬೈಕ್ ಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಯತ್ನದಲ್ಲಿ ಕೆರೆಗೆ ಉರುಳಿದ ಕೆಎಸ್ಆರ್ ಟಿಸಿ ಬಸ್!

ಜನರನ್ನು ಉದಯಪುರದಿಂದ ಲಾಹೌಲ್‌ ನ ಸಿಸ್ಸು ಹೆಲಿಪ್ಯಾಡ್‌ ನಿಂದ ಹೆಲಿಕಾಪ್ಟರ್ ಮೂಲಕ ಆದ್ಯತೆಯ ಮೇರೆಗೆ ಸ್ಥಳಾಂತರಿಸಲಾಗುವುದು, ನಂತರ ಅವುಗಳನ್ನು ಅಟಲ್ ಟನಲ್ ಮೂಲಕ ಮನಾಲಿಗೆ ಸಾಗಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನೀರಜ್ ಕುಮಾರ್ ಅವರು ಈ ಹಿಂದೆ ಜನರನ್ನು ಸ್ಥಳಾಂತರಗೊಳಿಸಲು ಹಿಮಾಚಲ ಪ್ರದೇಶ ಸರ್ಕಾರದಿಂದ ಹೆಲಿಕಾಪ್ಟರ್ ಸಹಾಯವನ್ನು ಕೋರಿದ್ದರು ಎಂದು ಜಿಲ್ಲಾ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಹವಾಮಾನ ವೈಪರೀತ್ಯದಿಂದಾಗಿ ರಾಜ್ಯ ಸರ್ಕಾರದ ಹೆಲಿಕಾಪ್ಟರ್‌ ನ ಕಾರ್ಯಾಚರಣೆಯೂ ಕೂಡ ಲಭ್ಯವಿದೆ.

ಇನ್ನು, ಪರಿಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ,  ಪಂಗಿ ಮಾರ್ಗವು ಇಂದು(ಶುಕ್ರವಾರ, ಜುಲೈ 30) ಸಂಜೆಯೊಳಗೆ ಓಡಾಟಕ್ಕೆ ಮುಕ್ತವಾಗುವ ಸಾಧ್ಯತೆಗಳು ಕಡಿಮೆ ಇದೆ ಎಂದು ಹಿಂದೆ ಹೇಳಿದ್ದರು.

ಹವಾಮಾನ ವೈಪರೀತ್ಯದಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಮತ್ತೊಂದು ಪದಕ ಖಚಿತ: ಸೆಮಿ ಫೈನಲ್ ಗೆ ಲವ್ಲೀನಾ

Advertisement

Udayavani is now on Telegram. Click here to join our channel and stay updated with the latest news.

Next