Advertisement

ಭಜನಾ ಪದಗಳ ಮೋಡಿಗಾರ್ತಿ ಹಳ್ಳೂರಿನ ರುಕ್ಮಿಣಿ

03:35 PM Dec 01, 2020 | sudhir |

ಮೂಡಲಗಿ : ಹಳ್ಳೂರ ಗ್ರಾಮದ ಬಾಲಕಿ ರುಕ್ಮಿಣಿಗೆ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಶಾರದೆ ಒಲಿತಿದ್ದು, ಒಂದಲ್ಲ, ಎರಡಲ್ಲ ಸಾವಿರಾರು ಭಜನಾಪದಗಳ ಭಂಡಾರವೇ ಇದೆ ಎಂದರೂ ತಪ್ಪಾಗದು. ಇಪ್ಪತಾಲ್ಕು ಗಂಟೆಗಳ ಕಾಲವೂ ಹಾಡುವಷ್ಟು
ಹಾಡುಗಳು ಆಕೆಯ ಕಂಠಸಿರಿಯಲ್ಲಿ ಅಡಗಿವೆ.

Advertisement

ಹಳ್ಳೂರ ಗ್ರಾಮದ ಶಂಕರ ಅಟಮಟ್ಟಿ , ಲಕ್ಕವ್ವಾ ಬಡ ದಂಪತಿಯ ಪುತ್ರಿ ರುಕ್ಮಿಣಿ ನಾಲ್ಕನೇ ತರಗತಿಯಿಂದಲೇ ಭಜನಾಪದ
ಹಾಡುಗಳ ಮೂಲಕವೇ ಸಮಾಜದಲ್ಲಿರುವ ಮೌಡ್ಯಗಳನ್ನು ಅಳಿಸುವ ಕಾಯಕ ಮಾಡುತ್ತಿದ್ದಾಳೆ.

ಗ್ರಾಮದವರೇ ಆದ ರಾಜ್ಯ ಪ್ರಶಸ್ತಿ ಪುರಸ್ಕೃತ ಪರಯ್ಯ ಮಠಮತಿ ರುಕ್ಮಿಣಿಗೆ ಸಂಗೀತ ಕಲಿಸುತ್ತಿದ್ದು, ರುಕ್ಮಿಣಿ ಸಾವಿರಾರು ಭಜನಾಪದ ಹಾಡುವ ಮೂಲಕ ಭಜನಾಪದ ಹಾಡುಗಳ ಮೋಡಿಗಾರ್ತಿಯಾಗಿದ್ದಾಳೆ. ರುಕ್ಮಿಣಿಯು ಜಾತ್ರೆ, ಸಾಂಸ್ಕೃತಿಕ
ಕಾರ್ಯಕ್ರಮಗಳಲ್ಲಿ, ಶ್ರಾವಣ ಮಾಸದಲ್ಲಿ ಮತ್ತು ಗ್ರಾಮದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಮಾತ್ರವಲ್ಲದೇ ಧಾರವಾಡ, ಬಾಗಲಕೋಟ, ವಿಜಯಪುರ, ಹಾವೇರಿ ಜಿಲ್ಲೆಗಳು ಮತ್ತು ಮಹಾರಾಷ್ಟ್ರ ರಾಜ್ಯ ಸೇರಿದಂತೆ ಸುಮಾರು ನಾಲ್ಕುನೂರು ಪ್ರದರ್ಶನ ನೀಡಿದ್ದಾರೆ. ಅನೇಕ ಸಂಘ ಸಂಸ್ಥೆಗಳು ಇವಳಿಗೆ ಪ್ರಶಸ್ತಿ ನೀಡಿ ಗೌರವಿಸಿವೆ.

ಇದನ್ನೂ ಓದಿ:ತೆಲಂಗಾಣ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದ್ದು ಹೇಗೆ? ದಿಢೀರ್‌ ಬೆಳವಣಿಗೆಗೆ ಕಾರಣವೇನು…

ಭಜನಾಪದಗಳಲ್ಲದೇ ಅನಿಷ್ಠ, ಮೂಢನನಂಬಿಕೆಗಳ ಕುರಿತು ಜಾಗೃತಿ ಮೂಡಿಸುವ ಸಾಕಷ್ಟು ಹಾಡುಗಳನ್ನು ರುಕ್ಮಿಣಿ
ಹಾಡಿದ್ದಾಳೆ. ತನ್ನದು ಅನಕ್ಷರಸ್ಥ ಕುಟುಂಬ ಆಗಿದ್ದರೂ ಈಗಿನ ಮಕ್ಕಳು ಸಾಕ್ಷರರಾಗಬೇಕು ಎನ್ನುವ ಮನೋಭಾವದಿಂದ ಸಾಕ್ಷರತೆ ಕುರಿತು ಅರಿವು ಮೂಡಿಸುವ ಹಾಡುಗಳನ್ನೂ ಹಾಡುತ್ತಿರುವುದು ಅವಳ ಸಾಮಾಜಿಕ ಕಳಕಳಿ ತೋರಿಸುತ್ತದೆ.

Advertisement

ಕಾರ್ಯಕ್ರಮಗಳಿಂದ ಬರುವ ಅಲ್ಪಸ್ವಲ್ಪ ಸಹಾಯಧನದಿಂದ ಕುಟುಂಬದ ಜವಾಬ್ದಾರಿಗೂ ಕೈ ಜೋಡಿಸಿದ್ದಾಳೆ. ಪತ್ರಾಸ್‌ ಶೆಡ್ಡಿನಲ್ಲಿ ವಾಸ ಮಾಡುತ್ತಿರುವ ರುಕ್ಮಿಣಿಯ ತಂದೆ-ತಾಯಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವುದರ ಜೊತೆಗೆ ಮಗಳು ತಮ್ಮಂತೆ ಅನಕ್ಷರಸ್ಥೆ ಆಗಬಾರದು ಎಂಬ ಕಾಳಜಿಯಿಂದ ಶಾಲೆ ಕಲಿಸುತ್ತಿದ್ದಾರೆ. ರುಕ್ಮಿಣಿ ಈ ವರ್ಷ ಹತ್ತನೇ ತರಗತಿ ಕಲಿಯುತ್ತಿದ್ದಾಳೆ.

– ಕೆ.ಬಿ.ಗಿರೆಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next