Advertisement

ರಾಷ್ಟ್ರ ಗೀತೆ ಅಭಿಯಾನಕ್ಕೆ ದನಿಗೂಡಿಸಿದ 1.5 ಕೋಟಿ ಜನ

08:37 AM Aug 15, 2021 | Team Udayavani |

ನವದೆಹಲಿ: ಈ ಬಾರಿ, 75ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ, ಆಸಕ್ತರು ಭಾರತದ ರಾಷ್ಟ್ರಗೀತೆಯನ್ನು ಹಾಡುವ ವಿಡಿಯೊ ಕಳುಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ, ಅಭೂತಪೂರ್ವ ಸ್ಪಂದನೆ ಸಿಕ್ಕಿದೆ.

Advertisement

ದೇಶ- ವಿದೇಶಗಳಲ್ಲಿರುವ ಸುಮಾರು 1.5 ಕೋಟಿಗೂ ಹೆಚ್ಚು ಭಾರತೀಯರು, ದಾಖಲೆಯ ಸಂಖ್ಯೆಯಲ್ಲಿ “ಜನಗಣಮನ’ ಹಾಡಿ, ಅದರ ವಿಡಿಯೊ ಕಳುಹಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕಳೆದ ತಿಂಗಳು, 25ರಂದು ಬಾನುಲಿ ಕೇಂದ್ರದ ಮೂಲಕ ಬಿತ್ತರವಾಗುವ ತಮ್ಮ “ಮನ್‌ ಕೀ ಬಾತ್‌’ ಕಾರ್ಯಕ್ರಮದಲ್ಲಿ ಮೋದಿ, ಈ ವಿಡಿಯೊ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಆಸಕ್ತರು, ರಾಷ್ಟ್ರಗೀತೆಯನ್ನು ಹಾಡಿ ಅದರ ವಿಡಿಯೊವನ್ನು ಆ. 15ರೊಳಗೆ ಕೇಂದ್ರ ಸಂಸ್ಕೃತಿ ಸಚಿವಾಲಯದ ವೆಬ್‌ಸೈಟ್‌ ನಲ್ಲಿ ಅಪ್ಲೋಡ್‌ ಮಾಡುವಂತೆ ಸೂಚಿಸಿದ್ದರು.

ಇದನ್ನೂ ಓದಿ:Independence day : 25 ವರ್ಷದಲ್ಲಿ ಹೊಸ ಭಾರತವನ್ನು ಕಟ್ಟಲು ಪಣ : ಮೋದಿ

ಇದಕ್ಕೆ ಸ್ಪಂದಿಸಿದ ಹಲವಾರು ಗಾಯಕರು, ನಾನಾ ಕ್ಷೇತ್ರಗಳ ತಜ್ಞರು, ಹಿರಿಯ ಅಧಿಕಾರಿಗಳು, ಹಿರಿಯ ನಾಗರಿಕರು, ಕ್ರೀಡಾಳುಗಳು, ರೈತರು, ಜನಸಾಮಾನ್ಯರು, ಮಕ್ಕಳು ತಾವು ಹಾಡಿದ ರಾಷ್ಟ್ರಗೀತೆಯ ವಿಡಿಯೊಗಳನ್ನು ಅಪ್ಲೋಡ್‌ ಮಾಡಿದ್ದಾರೆಂದು ಇಲಾಖೆ ಪ್ರಕಟಿಸಿದೆ.

Advertisement

ಈ ಎಲ್ಲಾ ವಿಡಿಯೊಗಳನ್ನು15ರಂದು ನಡೆಯುವ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಇಲಾಖೆ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next