Advertisement
ಧರ್ಮಸ್ಥಳದಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಕಳೆದ ಕೆಲವು ವರ್ಷ ಗಳಿಂದ ಸ್ಯಾಟಲೈಟ್ ಫೋನ್ ಬಳಕೆ ಹಾಗೂ ಸೈಬರ್ ಅಪರಾಧಗಳು ಹೆಚ್ಚು ತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಅಪರಾಧ ಪತ್ತೆ ಘಟಕಗಳನ್ನು ಪ್ರಾರಂಭಿ ಸಲಾಗುವುದು. ಸಂಚಾರಿ ಎಫ್‌ಎಸ್‌ಎಲ್ ಪ್ರಯೋಗಾಲಯ, ಸಂಚಾರಿ ವಾಹನ ಹಾಗೂ ಗಸ್ತು ಪಡೆ ನಿಯೋಜಿಸಿ ಅಪರಾಧ ಪ್ರಕರಣ ತಡೆಗಟ್ಟಲಾಗುವುದು ಎಂದರು.
ಪೊಲೀಸ್ ವೇತನ ಪರಿಷ್ಕರಣೆಗೆ ಸಂಬಂಧಿಸಿ ಈ ಹಿಂದೆ ನೇಮಕ ವಾದವರಿಗೆ ಅನುಕೂಲತೆ ಕಲ್ಪಿ ಸಲು ಸಮಾ ಲೋಚನೆ ನಡೆಸಲಾಗಿದೆ. ಈಗಾಗಲೇ ಉಪನಿರೀಕ್ಷಕರ ಹುದ್ದೆಗೆ 950 ಮಂದಿಗೆ ಸಂದರ್ಶನ ನಡೆ ಸಿದ್ದು ಸದ್ಯ ದಲ್ಲೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಪ್ರಕಟಿ ಸಿದರು. ಒಂದು ವರ್ಷದಲ್ಲಿ 200 ಕೋ.ರೂ. ವೆಚ್ಚದಲ್ಲಿ 100 ಪೊಲೀಸ್ ಠಾಣೆಗಳನ್ನು ನಿರ್ಮಿಸಲಾ ಗಿದೆ, ಎರಡು ವರ್ಷದೊಳಗೆ ಪೊಲೀಸರಿಗೆ 10,000 ಮನೆಗಳನ್ನು ನಿರ್ಮಿಸ ಲಾಗುವುದು. ರಾಜ್ಯದಲ್ಲಿ 140 ಠಾಣೆ ಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಪೊಲೀಸರ ಮಕ್ಕಳ ಶಿಕ್ಷಣಕ್ಕೂ ವಿಶೇಷ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು. ಇದನ್ನೂ ಓದಿ:ರೈಲ್ವೆ ನಿಲ್ದಾಣದಲ್ಲಿ ಚಹಾ ಸವಿದ ರೈಲ್ವೆ ಸಚಿವ ವೈಷ್ಣವ್
Related Articles
ಗೋವುಗಳ ಅಕ್ರಮ ಸಾಗಾಟ ಹಾಗೂ ಅಕ್ರಮ ಕಸಾಯಿಖಾನೆ ತಡೆ ಗಟ್ಟಲು ಬಿಗಿಯಾದ ಕಾನೂನು ಅನುಷ್ಠಾನಿಸಲಾಗುವುದು. ಮರಳು ಅಕ್ರಮ ಸಾಗಾಟ ತಡೆಯಲು ಹೊಸ ಕಾನೂನು ನೀತಿ ಜಾರಿಗೊಳಿಸಿದ್ದು, ಈ ಬಗ್ಗೆ ಗ್ರಾ.ಪಂ.ಗಳಿಗೆ ಅಧಿಕಾರ ನೀಡ ಲಾಗಿದೆ. ನೈತಿಕ ಪೊಲೀಸ್‌ಗಿರಿ ತಡೆಗಟ್ಟಲಾಗುವುದು. ಮೂಢ ನಂಬಿಕೆ, ಬಡತನದ ನೆಪದಿಂದ ಆಮಿಷ ಒಡ್ಡಿ ಮಾಡುವ ಮತಾಂತರವನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
Advertisement
ಹಳ್ಳಿಗಳಿಗೆ ಹೆಗ್ಗಡೆ ಚೈತನ್ಯಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕ್ರಾಂತಿಕಾರಿ ಸಾಮಾಜಿಕ ಪರಿವರ್ತನೆ ಮಾಡಿದ್ದಾರೆ. ಹತ್ತು – ಹಲವು ಕಾರ್ಯಕ್ರಮಗಳ ಮೂಲಕ ಮಾಡಿದ ಸುಧಾರಣೆ ಹಾಗೂ ಪ್ರಗತಿಪರ ಸೇವಾ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿಯವರೂ ಮೆಚ್ಚಿ ಅಭಿನಂದಿಸಿದ್ದಾರೆ. ಆರ್ಥಿಕ ಶಿಸ್ತು, ಮಹಿಳಾ ಸಶಕ್ತೀಕರಣ, ಪ್ರಕೃತಿ-ಪರಿಸರ ಸಂರಕ್ಷಣೆ, ಕೆರೆಗಳಿಗೆ ಕಾಯಕಲ್ಪ, ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುವಲ್ಲಿ ಒಂದು ಸರಕಾರದ ರೂಪದಲ್ಲಿ ಹಳ್ಳಿಗಳಿಗೆ ಚೈತನ್ಯ ನೀಡಿದ್ದಾರೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.