ಪತ್ರಿಕೋದ್ಯಮ ಎಂದ ತತ್‌ಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಬರುವುದು ನ್ಯೂಸ್ ಆ್ಯಂಕರ್, ಪ್ರೋಗ್ರಾಮ್ ಆ್ಯಂಕರ್, ರಿರ್ಪೋಟರ್ ಮಾತ್ರ. ಆದರೆ, ಅದರಾಚೆಗಿನ ಪತ್ರಿಕೋದ್ಯಮ ಅದೊಂದು ಅದ್ಭುತಗಳ ಸಾಗರ ಹಾಗೂ ಅವಕಾಶಗಳ ಆಗರ. ನಾನೊಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ಎನ್ನುವುದು ನನಗೆ ಬಹಳಷ್ಟು ಹೆಮ್ಮೆಯಿದೆ. ಇದು ನಾಲ್ಕು ಗೋಡೆಗಳ ಮಧ್ಯೆ ನಡೆಯುವ ಚಾಕ್ ಆ್ಯಂಡ್ ಟಾಕ್ ಅಲ್ಲ. ಪ್ರಾಯೋಗಿಕವಾಗಿ ಒಬ್ಬ ವಿದ್ಯಾರ್ಥಿ ತನ್ನನ್ನು ತಾನು ಅರಿತು, ನಾಲ್ಕು ಜನರೊಂದಿಗೆ ಬೆರೆತು, ಒಂದಿಷ್ಟು ಜನಸಂದಣಿಯ ನಡುವೆ ಮಾತನಾಡುವ ಕಲೆಗಾರಿಕೆ, ವಿಷಯ ಸಂಗ್ರಹಣೆಯ ತಂತ್ರಗಾರಿಕೆಯನ್ನು ಅರಿಯುವ ಪ್ರಯೋಗಾತ್ಮಕ ವಿಷಯ.
ಪಿಯುಸಿಯಲ್ಲಿ ಆರ್ಟ್ಸ್, ಕಾಮರ್ಸ್ ಮಾಡಿದವರು ಜರ್ನಲಿಸಮ್ ಮಾಡುವುದು ಸಾಮಾನ್ಯ. ಆದರೆ, ಈಗೀಗ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಎ. ಪತ್ರಿಕೋದ್ಯಮದ ಹಾದಿ ಹಿಡಿದಿದ್ದಾರೆ. ಕೆಲವರಂತೂ ಪೋಷಕರಿಗೆ ವಿರುದ್ಧವಾಗಿ ಈ ವಿಷಯವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಕೇವಲ ಓದಿಗಷ್ಟೇ ಅಲ್ಲದೆ ವಿದ್ಯಾರ್ಥಿಗಳಿಗೆ ಅವರೊಳಗಿರುವ ಒಬ್ಬ ಬರಹಗಾರನನ್ನು ಇದು ಚುರುಕುಗೊಳಿಸುತ್ತದೆ.
ಇನ್ನೂ ಉದ್ಯಮ ಕ್ಷೇತ್ರದಲ್ಲಿ ಪ್ರಿಂಟ್ ಮೀಡಿಯಾ, ಇಲೆಕ್ಟ್ರಾನಿಕ್ ಮೀಡಿಯಾಗಳಲ್ಲಂತೂ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದೆ. ಪ್ರಸ್ತುತ ಮಾಧ್ಯಮಕ್ಕೆ ಬೇಕಾಗಿರುವುದು ಪ್ರತಿಭಾವಂತರು. ಅಂತೆಯೇ ಜುಲೈ ತಿಂಗಳಿಡೀ ಪತ್ರಿಕೋದ್ಯಮ ದಿನಾಚರಣೆಯನ್ನು ಆಚರಿಸಲಾಗುತ್ತದೆ.
ಮಲ್ಲಿಕಾ ಪೂಜಾರಿ, ಪ್ರಥಮ ಬಿ. ಎ. ಎಸ್‌ಡಿಎಮ್ ಕಾಲೇಜು, ಉಜಿರೆ