ಬೆಂಗಳೂರು: ರಾಜ್ಯ ಸರ್ಕಾರ ರಚಿಸಿರುವ ಕರ್ನಾಟಕ ಸ್ಟಾರ್ಟ್ ಅಪ್ ಸೆಲ್‌ನಲ್ಲಿ ನೋಂದಣಿಯಾದ 1000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳಿಗೆ ಕನೆಕ್ಟಿವಿಟಿ ಕಲ್ಪಿಸುವ ಏರ್‌ಟೆಲ್‌ನ “ಆಫಿಸ್ ಇನ್ ದಿ ಬಾಕ್ಸ್’ ಸೇವೆಗೆ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದ್ದಾರೆ.
ಇದರಲ್ಲಿ ಸಾಫ್ಟ್ವೇರ್ ಟೂಲ್‌ಗಳು ಹಾಗೂ ಸ್ಟಾರ್ಟ್‌ಅಪ್‌ಗ್ಳಿಗೆಂದೇ ವಿಶೇಷವಾಗಿ ರೂಪಿ ಸಿರುವ ಸೇವೆಗಳು ಸಿಗಲಿವೆ. ಉದ್ಯಮ ಬೆಳೆದಂತೆ ಸೇವೆಯ ವಿಸ್ತರಣೆಗೂ ಅವಕಾಶವಿರಲಿದೆ. ಕರೆ, ದತ್ತಾಂಶ, ಆಡಿಯೋ, ವೆಬ್ ಸಹಭಾಗಿತ್ವ, ಕೌಡ್ ಸೇವೆಗಳು, ಎಸ್‌ಎಂಎಸ್, ಎಂಎಂಎಸ್, ಇ-ಮೇಲ್, ಐಆರ್, ಯುಎಸ್‌ಎಸ್‌ಡಿ, ಜಿಪಿಎಸ್, ಆರ್‌ಎಫ್ಐಡಿ ಆಧಾರಿತ ಟ್ರ್ಯಾಕಿಂಗ್ ಸೌಲಭ್ಯವನ್ನೂ ಪಡೆಯಬಹುದಾಗಿದೆ.
ಏರ್‌ಟೆಲ್‌ನ “ಆಫಿಸ್ ಇನ್ ದಿ ಬಾಕ್ಸ್’ ಸೇವೆಗೆ ಚಾಲನೆ ನೀಡಿದ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ, “ಸಾರ್ಟ್‌ಅಪ್‌ಗಳು ವಿಶಾಲ ದೃಷ್ಟಿಕೋನದಿಂದ ಯೋಚಿಸಿ ಕಾರ್ಯ ಪ್ರವೃತ್ತ ವಾಗಲು ಅಗತ್ಯ ಪ್ರೋತ್ಸಾಹ ನೀಡಬೇಕಿದ್ದು, ಅದನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು. ಇತ್ತೀಚೆಗೆ “ಎಲಿವೇಟ್ 100′ ಕಾರ್ಯಕ್ರಮದಲ್ಲಿ ಆಯ್ಕೆಯಾದ 111 ಸ್ಟಾರ್ಟ್‌ಅಪ್‌ಗ್ಳಿಗೆ ಅಗತ್ಯವಿರುವ ಸೌಲಭ್ಯ ಕಲ್ಪಿಸುವ ಸಂಬಂಧ ಎಂಟು ಮಹತ್ವದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದರಂತೆ ಏರ್‌ಟೆಲ್‌ನ ಆಫಿಸ್ ಇನ್
ದಿ ಬಾಕ್ಸ್ ಕಾರ್ಯಕ್ರಮದಡಿ ಕರ್ನಾಟಕ ಸ್ಟಾರ್ಟ್‌ಅಪ್ ಸೆಲ್‌ನಲ್ಲಿ ನೋಂದಣಿ ಯಾದ ಎಲ್ಲ ಸಂಸ್ಥೆಗಳಿಗೂ ಇನ್ನಷ್ಟು ಹೆಚ್ಚುವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಇದರಿಂದ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.