Advertisement
ಇದೇ ವರ್ಷದ ಜನವರಿಯಲ್ಲಿ ಅಷ್ಫಾಕ್ ಮಜೀದ್ ಹಾಗೂ ಆತನ ಪತ್ನಿ ಮತ್ತು ನಾಲ್ವರು ಮಕ್ಕಳು ಐಸಿಸ್‌ಗೆ ಸೇರಿದ್ದಾರೆ ಎನ್ನಲಾಗಿದೆ. ಇವರು ಯುಎಇಗೆ ತೆರಳಿ, ಅಲ್ಲಿಂದ ಇರಾನ್ ಮೂಲಕ ಅಫ್ಘಾನಿಸ್ತಾನದ ನಂಗರ್‌ಹರ್ ಪ್ರಾಂತ್ಯಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಈ ಪ್ರಾಂತ್ಯವನ್ನು ಐಸಿಸ್ ನಿಯಂತ್ರಿಸುತ್ತಿದೆ.
Related Articles
Advertisement
ಮೂಲಗಳ ಪ್ರಕಾರ 2016 ರಲ್ಲಿ ಕಾಸರಗೋಡು ಮತ್ತು ಪಾಲಕ್ಕಾಡ್‌ನಿಂದ ಸೇರಿದ್ದ 20 ಕ್ಕೂ ಹೆಚ್ಚು ಜನರ ಪೈಕಿ ಬಹುತೇಕ ಕೇರಳಿಗರು ಸತ್ತಿದ್ದಾರೆ ಎಂದು ಹೇಳಲಾಗಿದೆ. ಶಜೀರ್ ಮಂಗಳಶೆÏೕರಿ ಅಬ್ದುಲ್ಲಾ, ಹಫೀಜುದ್ದೀನ್, ಮರ್ವನ್, ಮುರ್ಶಿದ್, ರಶೀದ್ ಅಬ್ದುಲ್ಲಾ ಮತ್ತು ಯಾಹ್ಯಾ, ಕಣ್ಣೂರಿನ ಶಮೀರ್, ಶಾಜಿಲ್, ಅಬ್ದುಲ್ ಖಯೂಮ್ ಮತ್ತು ಮನಾಫ್ ಸತ್ತಿದ್ದಾರೆ ಎಂದು ಹೇಳಲಾಗಿದೆ.
ಶರಣಾಗುತ್ತೇನೆ ಎಂದ ಫಿರೋಜ್: ಸಿರಿಯಾಗೆ ತೆರಳಿ ಐಸಿಸ್ ಸೇರಿದ್ದ ಕಾಸರಗೋಡಿನ ಫಿರೋಜ್ ಶರಣಾಗಲು ಬಯಸಿದ್ದಾನೆ ಎನ್ನಲಾಗಿದೆ. ಮೂಲಗಳ ಪ್ರಕಾರ ಎರಡು ತಿಂಗಳುಗಳ ಹಿಂದೆ ಈತ ತನ್ನ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ್ದ. ವಾಪಸ್ ಕೇರಳಕ್ಕೆ ಬಂದರೆ ಯಾವ ರೀತಿ ಪ್ರಕರಣಗಳು ದಾಖಲಾಗುತ್ತವೆ ಎಂಬ ಬಗ್ಗೆ ಆತ ವಿಚಾರಣೆ ನಡೆಸಿದ್ದಾನೆ ಎನ್ನಲಾಗಿದೆ. ಶರಣಾಗಬೇಕು ಎಂಬ ಮನಸ್ಸಿದ್ದು, ಹೇಗೆ ಎಂಬುದು ತಿಳಿದಿಲ್ಲ ಎಂದೂ ಆತ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಸಿರಿಯಾದಲ್ಲಿ ಸದ್ಯ ಕೇವಲ ಒಬ್ಬಿಬ್ಬರು ಮಲಯಾಳಿಗಳು ಉಳಿದುಕೊಂಡಿದ್ದಾರೆ. ಐಸಿಸ್ ಇಲ್ಲಿ ತನ್ನ ನೆಲೆ ಕಳೆದುಕೊಂಡಿದ್ದು, ಇವರ ಜೀವನ ದುಸ್ತರವಾಗಿದೆ. ಊಟ ತಿಂಡಿಯೂ ಸರಿಯಾಗಿ ಸಿಗದಂಥ ಪರಿಸ್ಥಿತಿ ಈಗ ಸಿರಿಯಾಗೆ ತೆರಳಿ ಐಸಿಸ್ ಸೇರಿದವರ ಪಾಡಾಗಿದೆ ಎನ್ನಲಾಗಿದೆ.