Advertisement
ವಿದೇಶ ಮತ್ತು ಹೊರ ರಾಜ್ಯಗಳಿಂದ ಬರುವ ವರು ಅಧಿಕ ಸಂಖ್ಯೆಯಲ್ಲಿ ಈ ಭಾಗಕ್ಕೆ ಭೇಟಿ ನೀಡು ತ್ತಿದ್ದು ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಳಕ್ಕೆ ಇದು ಒಂದು ಕಾರಣ ಎಂಬ ಮಾಹಿತಿ ಪತ್ತೆಯಾಗಿದೆ. ಬೊಮ್ಮನಹಳ್ಳಿ, ಮಹಾದೇವಪುರ, ವರ್ತೂರು, ಎಚ್. ಎಸ್.ಆರ್.ಲೇಔಟ್, ಅನೇಕಲ್, ಕೋರಮಂಗಲ,ಬೆಳ್ಳಂದೂರು ಪ್ರದೇಶ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಸಂಖ್ಯೆ ದಿನ ಕಳೆದಂತೆ ಅಧಿಕ ವಾಗುತ್ತಿದೆ. ಐಟಿ-ಬಿಟಿ ಕಂಪನಿಗಳು ನೆಲೆಯೂರಿ ರುವ ವಸತಿ ಪ್ರದೇಶಗಳಲ್ಲೇಸೋಂಕಿನ ಅಧಿಕ ಪ್ರಕರಣಗಳು ಕಂಡು ಬರುತ್ತಿದ್ದು ಇದು ಪಾಲಿಕೆ ಮತ್ತು ನಗರ ಜಿಪಂ ಚಿಂತೆಗೆ ಕಾರಣವಾಗಿದೆ.
Related Articles
Advertisement
ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಕೊರೊನಾ : ಡಿ.22 ರಂದು 1,178 ಮಂದಿ ವಿದೇಶದಿಂದ ಬಂದಿದ್ದು ಅದರಲ್ಲಿ 9 ಮಂದಿಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಡಿ.23ರಂದು 133 ಮಂದಿ ಆಗಮಿಸಿದ್ದು, 6 ಮಂದಿಗೆ ಪಾಸಿಟಿವ್ ಬಂದಿದೆ. ಡಿ.24 ರಂದು 529 ಮಂದಿ ಆಗಮಿಸಿದ್ದು, 508 ಮಂದಿತಪಾಸಣೆ ನಡೆದು ನಾಲ್ವರಿಗೆ ಪಾಸಿಟಿವ್ ಆಗಿತ್ತು. ಡಿ.25 ರಂದು 865 ಮಂದಿಆಗಮಿಸಿದ್ದು, ಅದರಲ್ಲಿ 11 ಮಂದಿಗೆ ಕೊರೊನಾ ಕಂಡು ಬಂದಿದೆ. ಡಿ. 26ರಂದು933 ಮಂದಿ ಆಗಮಿಸಿದ್ದು ಅದರಲ್ಲಿ 14 ಪಾಸಿಟಿವ್ ದಾಖಲಾಗಿದೆ.ಡಿ.27ರಂದು 704 ಮಂದಿ ಆಗಮಿಸಿದ್ದು ಅವರಲ್ಲಿ 9 ಮಂದಿಗೆ ಪಾಸಿಟಿವ್‌ಬಂದಿದೆ. ಡಿ.28 ರಂದು 129 ಮಂದಿ ಆಗಮಿಸಿದ್ದು, 3 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಡಿ.29ರಂದು 1,282 ಮಂದಿಯಲ್ಲಿ 20 ಪಾಸಿಟಿವ್ ಪ್ರಕರಣ ದಾಖಲಾಗಿದೆ. ಡಿ.30ರಂದು 75 ಜನ ಬಂದಿದ್ದು 9 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಹಾಗೆಯೇ ಡಿ.31ರಂದು 416 ಮಂದಿ ನಗರಕ್ಕೆ ಆಗಮಿಸಿದ್ದು 9 ಪಾಸಿಟಿವ್ ಬಂದಿದೆ.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಹೆಚ್ಚಳವಾಗುತ್ತಿದ್ದು, ಆ ಹಿನ್ನೆಲೆಯಲ್ಲಿ ಪರೀಕ್ಷೆ ಪ್ರಮಾಣವನ್ನು 40 ಸಾವಿರದಿಂದ 60 ಸಾವಿರಕ್ಕೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ವಸತಿ ಸಮುತ್ಛಯಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪ್ರಕರಣಗಳು ಕಂಡುಬರುತ್ತಿದ್ದು, ವಲಯಆಯುಕ್ತರು ಆಯಾ ಭಾಗದ ವಸತಿ ಸಮುತ್ಛಯಗಳ ಅಸೋಶಿಯೇಷನ್‌ಗಳ ಜತೆಗೆ ಸಮಾಲೋಚನೆ ನಡೆಸಿದ್ದಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲಾಗಿದೆ. –ಗೌರವ್ ಗುಪ್ತ, ಪಾಲಿಕೆ ಆಯುಕ್ತ
–ದೇವೇಶ ಸೂರಗುಪ್ಪ