Advertisement
“ಭಾರತೀಯರು ಲಂಡನ್‌ನಲ್ಲಿ ಮನೆಗಳ ಮೇಲೆ ಹೂಡಿಕೆ ಮಾಡುವುದಕ್ಕೆ ಮುಂಚೂಣಿಯಲ್ಲಿದ್ದಾರೆ. ಮನೆಗೆಂದೇ 2.60 ಕೋಟಿ ರೂ.ನಿಂದ 4.12 ಕೋಟಿ ರೂ.ವರೆಗೂ ಖರ್ಚು ಮಾಡುವುದಕ್ಕೆ ಸಿದ್ಧರಿದ್ದಾರೆ. ಬ್ರಿಟನ್ ರಾಜಧಾನಿಯಲ್ಲಿ ಬ್ರಿಟನ್ ನಾಗರಿಕರ ಮನೆಗಳಿಗಿಂತ ಹೆಚ್ಚು ಮನೆಗಳು ಭಾರತೀಯರದ್ದೇ ಆಗಿವೆ’ ಎಂದು ಸಂಸ್ಥೆ ಹೇಳಿದೆ.
ಭಾರತೀಯರು ಬೇರೆ ಯಾವುದೇ ಕ್ಷೇತ್ರಕ್ಕಿಂತ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ವಸತಿಗೆ ಕೊಡುತ್ತಿದ್ದಾರೆ ಎನ್ನುವುದು ಸಂಸ್ಥೆಯ ವರದಿ. ಅದಕ್ಕೆ ಕಾರಣ ಅಲ್ಲಿ ಆ ಕ್ಷೇತ್ರಕ್ಕಿರುವ ಬೆಲೆ. ವಿಶ್ವದ ಎಲ್ಲ ಮೂಲೆಗಳಿಂದಲೂ ಜನರು ಲಂಡನ್‌ಗೆ ಬರುತ್ತಾರೆ. ಹಾಗಾಗಿ ಭಾರತೀಯರು ಅತಿ ಹೆಚ್ಚು ಮನೆಗಳನ್ನು ಖರೀದಿಸಿ ಅದನ್ನು ಬಾಡಿಗೆ ಕೊಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂದೊಂದು ದಿನ ಮನೆಯನ್ನು ಮಾರಬೇಕೆಂದರೂ ಹೆಚ್ಚಿನ ಹಣವೇ ಅವರಿಗೆ ಹರಿದುಬರುತ್ತದೆ ಎಂದು ಸಂಸ್ಥೆ ಹೇಳಿದೆ.
Related Articles
ಅದೇ ರೀತಿ ಭಾರತದಿಂದ ಲಂಡನ್‌ಗೆ ಬಂದು ನೆಲೆಸುತ್ತಿರುವವ ಸಂಖ್ಯೆಯಲ್ಲೂ ಭಾರೀ ಏರಿಕೆ ಕಂಡುಬರುತ್ತಿದೆ. ಲಂಡನ್ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಲು ಬರುವ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ ಶೇ.128 ಏರಿಕೆಯಾಗಿದೆ.
Advertisement