ಚಿಕ್ಕೋಡಿ: ಬೇಸಿಗೆಯಲ್ಲಿ ಸಮರ್ಪಕ ವಿದ್ಯುತ್ ಸಮಸ್ಯೆ, ರೈತರಿಗೆ ಸಿಗಬೇಕಾದ ವಿದ್ಯುತ್ ಪರಿವರ್ತಕಗಳು, ಗ್ರಾಮೀಣಪ್ರದೇಶದಲ್ಲಿ ಬಸ್ ವ್ಯವಸ್ಥೆ , ಗ್ರಾಮೀಣರಸ್ತೆಗಳ ಬೇಡಿಕೆ, ಆರೋಗ್ಯ ಸೇವೆ ಹೀಗೆಹತ್ತು ಹಲವು ಸಮಸ್ಯೆಗಳನ್ನು ಜನರಿಂದ ಆಲಿಸಿ ಸ್ಪಂ ದಿಸಿದ ಸಂಸದ ಅಣ್ಣಾಸಾಹೇಬಜೊಲ್ಲೆ ಅವರು ಶೀಘ್ರವಾಗಿ ಜನರ ಸಮಸ್ಯೆ ಇತ್ಯರ್ಥವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಶುಕ್ರವಾರ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಚಿಕ್ಕೋಡಿ ಲೋಕಸಭೆಯ ಚಿಕ್ಕೋಡಿ-ಸದಲಗಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಜನಸಂಪರ್ಕಸಭೆಯಲ್ಲಿ ಸಾರ್ವಜನಿಕರ ಹಲವಾರುಸಮಸ್ಯೆಗಳಿಗೆ ಸಂಸದ ಅಣ್ಣಾಸಾಹೇಬಜೊಲ್ಲೆ ಸಕಾರಾತ್ಮಕ ಸ್ಪಂದಿ ಸಿ ಜನರಿಂದ ಅರ್ಜಿ ಸ್ವೀಕರಿಸಿದರು.
ಚಿಕ್ಕೋಡಿ ತಾಲೂಕಿನ ಶಮನೇವಾಡಿ-ಬೇಡಕಿಹಾಳ ಗ್ರಾಮಗಳಿಗೆ ಹೋಗುವಸಾರ್ವಜನಿಕರಿಗೆ ಬಸ್ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನ ಸಾಕಷ್ಟು ಬಸ್ ಸಂಚಾರ ಮಾಡಿದರೂ ಸಹ ಬೇಡಕಿಹಾಳ ಕ್ರಾಸ್‌ದಲ್ಲಿ ನಿಲ್ಲಿಸಿಇಚಲಕರಂಜಿಗೆ ಹೋಗುತ್ತವೆ. ಇದರಿಂದಶಮನೇವಾಡಿ ಹಾಗೂ ಬೇಡಕಿಹಾಳ ಗ್ರಾಮದಜನರಿಗೆ ಬಸ್ ಸೇವೆ ಸಿಗುತ್ತಿಲ್ಲ, ಸಂಸದರು ಗಮನ ಹರಿಸಬೇಕು ಎಂದು ಶಮನೇವಾಡಿಗ್ರಾಮದ ಜನರು ಸಂಸದರ ಬಳಿ ಬೇಡಿಕೆಇಟ್ಟರು. ತಾಲೂಕಿನ ವಾಳಕಿ, ಪಟ್ಟಣಕುಡಿ ಮುಂತಾದ ಕಡೆಗಳಲ್ಲಿ ಗ್ರಾಮೀಣ ಪ್ರದೇಶದಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ.ಹಲವು ರೋಗಿಗಳಿಗೆ ಔಷಧ ಸಿಗುತ್ತಿಲ್ಲ,ವೈದ್ಯರ ಕೊರತೆ ಇದೆ ಎಂದು ವಾಳಕಿ ಗ್ರಾಮಸ್ಥರು ಮನವಿ ಮಾಡಿದರು.
ಮಾಂಜರಿ, ಇಂಗಳಿ, ಯಡೂರ, ಕಲ್ಲೋಳಸೇರಿದಂತೆ ಕೃಷ್ಣಾ ನದಿ ವ್ಯಾಪ್ತಿಯ ರೈತರಜಮೀನುಗಳಿಗೆ ಸವಳು-ಜವಳು ಸಮಸ್ಯೆಕಾಡುತ್ತಿದೆ. ಸಂಸದರು ವಿಶೇಷ ಅನುದಾನ ಒದಗಿಸಿ ಸವಳು ಜವಳು ಹೋಗಲಾಡಿಸಲು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆನೀಡಬೇಕೆಂದು ರೈತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಇಡೀ ರಾಜ್ಯದಲ್ಲಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ದೊಡ್ಡ ಕ್ಷೇತ್ರವಾಗಿದೆ. ಸಂಸದರಾಗಿ ಎರಡು ವರ್ಷಕಳೆದಿದೆ. ಕೊರೊನಾ ಮತ್ತು ಪ್ರವಾಹದಿಂದಸರ್ಕಾರದಿಂದ ಬರುವ ಅನುದಾನಕಡಿತವಾಗಿದೆ. ಹೀಗಾಗಿ ಅಭಿವೃದ್ಧಿ ಕೆಲಸಗಳಿಗೆಸ್ವಲ್ಪಮಟ್ಟಿನ ಹಿನ್ನಡೆಯಾಗಿದೆ ಎಂದರು.ಓರ್ವ ಸಂಸದರಿಗೆ ಐದು ವರ್ಷದಲ್ಲಿ 25 ಕೋಟಿ ಅನುದಾನ ಒದಗಿ ಬರಲಿದೆ. ಕ್ಷೇತ್ರದಎಂಟು ವಿಧಾನಸಭೆ ಕ್ಷೇತ್ರಗಳಿಗೆ 25 ಲಕ್ಷರೂ ಹಂಚಿಕೆ ಮಾಡುತ್ತಿದ್ದೇನೆ. ಈಗ ಎರಡು ವರ್ಷದಲ್ಲಿ 5 ಕೋಟಿ ಅನುದಾನ ಬಂದಿದೆ.ಎಲ್ಲ ವಿಧಾನಸಭೆ ಕ್ಷೇತ್ರದಲ್ಲಿ 5 ಲಕ್ಷ ರೂ.ಅನುದಾನ ವಿವಿಧ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದೇನೆ ಎಂದರು.
ಮುಂಬರುವ ದಿನಗಳಲ್ಲಿ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ನೀಡುವ ಭರವಸೆ ಇದೆ. ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ನನೆಗುದಿಗೆ ಬಿದ್ದಿರುವ ಯೋಜನೆಗಳಿಗೆಅನುದಾನ ಸಿಗಲಿದೆ. ರಸಗೊಬ್ಬರಕ್ಕೆ ಸಬ್ಸಿಡಿನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್‌ನಂತಹ ಮಾರಕ ರೋಗ ದೂರವಾಗಲು ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದರು.
ಧುರೀಣ ಜಗದೀಶ ಕವಟಗಿಮಠ, ಬಿಜೆಪಿ ಮಂಡಲ ಅಧ್ಯಕ್ಷ ಸಂಜು ಪಾಟೀಲ,ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷದುಂಡಪ್ಪ ಬೆಂಡವಾಡೆ, ವಿಶ್ವನಾಥ ಕಮತೆ,ಅಪ್ಪಾಸಾಹೇಬ ಚೌಗಲೆ, ಪುರಸಭೆಅಧ್ಯಕ್ಷ ಪ್ರವೀಣ ಕಾಂಬಳೆ, ಪುರಸಭೆಸದಸ್ಯರಾದ ನಾಗರಾಜ ಮೇದಾರ, ಸಿದ್ದಪ್ಪಡಂಗೇರ, ಬಾಬು ಮಿರ್ಜೆ, ವಿಶ್ವನಾಥಕಾಮಗೌಡ, ಶಕುಂತಲಾ ಡೋನವಾಡೆ, ಶಾಂಭವಿ ಅಶ್ವಥಪೂರ ಇದ್ದರು.