Advertisement

Electric ವಾಹನಗಳಿಂದಲೇ ಹೆಚ್ಚು ಪರಿಸರ ಮಾಲಿನ್ಯ! ; ಹೇಗೆ ?

12:24 AM Mar 07, 2024 | Team Udayavani |

ವಾಷಿಂಗ್ಟನ್‌: ವಾಯು ಮಾಲಿನ್ಯವನ್ನು ತಡೆಯುವುದಕ್ಕಾಗಿ ಪೆಟ್ರೋಲ್‌ ಮತ್ತು ಡಿಸೇಲ್‌ ಆಧರಿತ ಸಾಂಪ್ರದಾಯಿಕ ವಾಹನಗಳ ಬದಲಿಗೆ ವಿದ್ಯುತ್‌ ಚಾಲಿತ ವಾಹನಗಳ(ಇವಿ) ಬಳಕೆ­ಯನ್ನು ಉತ್ತೇಜಿಸಲಾಗುತ್ತಿದೆ. ಹೆಚ್ಚುತ್ತಿ­ರುವ ತಾಪಮಾನವನ್ನು ನಿಯಂತ್ರಿಸಲು ಇದು ಅಗತ್ಯ­ವಾಗಿದೆ. ಆದರೆ, ಹೊಸ ಅಧ್ಯಯನ ವರದಿಯೊಂದು ತದ್ವಿರು­ದ್ಧವಾದ ಸಂಗತಿಗಳನ್ನು ಹಂಚಿ­ಕೊಂಡಿದೆ. ಎಮಿಷನ್‌ ಅನಾಲಿಟಿಕ್ಸ್‌ ಸಂಸ್ಥೆಯ ವರದಿಯಲ್ಲಿ ಸಾಂಪ್ರ­ದಾಯಿಕ ಇಂಧನ ವಾಹನಗಳಿಗಿಂತಲೂ ಈ ವಿದ್ಯುತ್‌ ಚಾಲಿತ ವಾಹನ­ಗ­ಳಿಂದಲೇ ಹೆಚ್ಚು ಪರಿಸರ ಮಾಲಿ­ನ್ಯವಾಗುತ್ತಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

Advertisement

ಹೇಗೆ ಮಾಲಿನ್ಯ?
ಸಾಂಪ್ರದಾಯಿಕ ಇಂಧನ ಕಾರುಗಳಿ­ಗಿಂತಲೂ ಇವಿ ಬ್ರೇಕ್‌ಗಳಿಂದ ಮಾಲಿನ್ಯ ಪ್ರಮಾಣ 1,850 ಪಟ್ಟು ಹೆಚ್ಚಿರುತ್ತದೆ!
ಟೈಯರ್‌ ಸವೆತದಿಂದ ಉಂಟಾ­ ಗುವ ಮಾಲಿನ್ಯಕಾರಕ ಕಣಗಳ ಹೊರ ಸೂಸುವ ಪ್ರಮಾಣವು ಸಾಂಪ್ರದಾಯಿಕ ಕಾರುಗಳಿಂತ 400 ಪಟ್ಟು ಹೆಚ್ಚಾಗಿರುತ್ತದೆ!

Advertisement

Udayavani is now on Telegram. Click here to join our channel and stay updated with the latest news.

Next