Advertisement

ಮೊಬೈಲ್‌ಗಿಂತ ಪರಿಸರ ಸ್ನೇಹಿಯಾಗಿ: ನಮೋಶಿ

02:26 PM Sep 10, 2022 | Team Udayavani |

ಆಳಂದ: ಸಂರಕ್ಷಿತ ಕಾಡು ಕಡಮೆಯಾಗುತ್ತಿರುವ ಈ ಸಂದರ್ಭದಲ್ಲಿ ಪರಿಸರ ರಕ್ಷಣೆ ನಮ್ಮೆಲರ ಹೊಣೆಯಾಗಿದೆ. ಈಗಾಗಿ ನಾವು ಮೊಬೈಲ್‌ ಸ್ನೇಹಿಯಾಗುವುದಕ್ಕಿಂತ ಪರಿಸರ ಸ್ನೇಹಿಯಾಗುವುದು ಒಳ್ಳೆಯದು ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ ಜಿ. ನಮೋಶಿ ಅವರು ಹೇಳಿದರು.

Advertisement

ತಾಲೂಕಿನ ಕಡಗಂಚಿ ಹತ್ತಿರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಅರಣ್ಯ ಇಲಾಖೆ ಸಹಯೋಗದಿಂದ ಭೋಧಿ ವೃಕ್ಷ ಸಂಸ್ಥೆ ಆಯೋಜಿಸಿದ್ದ ಕಲ್ಯಾಣ ವನ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬೋಧಿ ವೃಕ್ಷ ಸಂಸ್ಥೆಯ ಗಿಡ ನೆಡುವ ಈ ಕಾರ್ಯ ಶ್ಲಾಘನೀಯವಾದದ್ದು. ವಿಶ್ವವಿದ್ಯಾಲಯವನ್ನು ಹಸಿರು ಆವರಣವನ್ನಾಗಿಸಲು ಉಪಕುಲಪತಿಗಳಾದ ಪ್ರೊಫೆಸರ್‌ ಬಟ್ಟು ಸತ್ಯನಾರಾಯಣ ಪ್ರಯತ್ನವನ್ನು ಶ್ಲಾಘಿಸುತ್ತ, ಅವರ ಹಲವಾರು ಕಾರ್ಯಕ್ರಮಗಳನ್ನು ನೆನಪಿಸಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್‌ ಬಟ್ಟು ಸತ್ಯನಾರಾಯಣ ಮಾತನಾಡಿ, ವಿಶ್ವವಿದ್ಯಾಲಯವನ್ನು ಹಸಿರು ಅವರಣವನ್ನಾಗಿ ಮಾಡಲು ಸಕಲ ಕ್ರಮ ತೆಗೆದುಕೊಳ್ಳಲಾಗಿದೆ ಈ ನಿಟ್ಟಿನಲ್ಲಿ ಬೋಧಿ ವೃಕ್ಷ ಸಂಸ್ಥೆ ಪ್ರಯತ್ನ ಸ್ಮರಣೀಯವಾಗಿದೆ ಎಂದರು.

ವಿಶ್ವ ವಿದ್ಯಾಲಯ ಆವರಣದಲ್ಲಿ ಹಣ್ಣಿನ ಗಿಡ ಬೆಳೆಯುವುದರಿದ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿ ವರ್ಗದ ಪೌಷ್ಟಿಕಾಂಶದ ಮೌಲ್ಯ ಹೆಚ್ಚುತ್ತದೆ. ತೇಗ ಮತ್ತು ಶ್ರೀಗಂಧ ಬೆಳೆಯುವುದರಿಂದ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯಕ್ಕೆ ಮೌಲ್ಯಯುತವಾದ ಆಸ್ತಿಗಳಾಗುತ್ತವೆ ಎಂದು ಹೇಳಿದರು.

Advertisement

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಹೇಮಾ ಮಾತನಾಡಿ, ಇಲ್ಲಿಯ ವರೆಗೂ ವಿಶ್ವವಿದ್ಯಾಲಯದ ಆವರಣದಲ್ಲಿ 2012 -13ರಿಂದ ಸುಮಾರು 25000 ಗಿಡಗಳನ್ನು ನೆಡಲಾಗಿದೆ. ಅದರಲ್ಲಿ ಶೇಕಡಾ 95ಪ್ರತಿಶತ ಗಿಡಗಳು ಬೆಳೆದಿವೆ ಎಂದು ತಿಳಿಸಿದರು.

ಭೋಧಿ ವೃಕ್ಷ ಸಂಸ್ಥೆ ಅಧ್ಯಕ್ಷ ಎಂ.ಎಸ್‌. ಚಂದ್ರ ಮಾತನಾಡಿ, ಈ ವರ್ಷದಲ್ಲಿ 5000 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ. ಇದರಲ್ಲಿ 2000 ಸಾವಿರ ಹಣ್ಣಿನ ಗಿಡಗಳು ಸೇರಿವೆ ಎಂದರು.

ವಿಶ್ವ ವಿದ್ಯಾ ಆವರಣದ ಕಲ್ಯಾಣ ವನ ಯೋಜನೆ ಕೇವಲ ಆರಂಭ. ಈ ರೀತಿಯ ಗಿಡ ನೆಡುವ ಕಾರ್ಯಕ್ರಮವನ್ನು ಸಂಪೂರ್ಣ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಅತಿಥಿಯಾಗಿದ್ದ ಪ್ರೊ|ಬಸವರಾಜ ಪಿ. ಡೋಣೂರು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಮರಗಳು ಕಲಿಕೆಯ ಗುಣಮಟ್ಟ ಹೆಚ್ಚಿಸುತ್ತವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next