Advertisement
ಯಾವುದೇ ಸಂಸ್ಥೆ ಅಥವಾ ಕಂಪೆನಿ ಸುಗಮವಾಗಿ ನಡೆಯುತ್ತಿದೆ ಅಂದರೆ ಅಲ್ಲಿ ಮಾನವ ಸಂಪನ್ಮೂಲ ವಿಭಾಗ (ಎಚ್.ಆರ್) ಚೆನ್ನಾಗಿದೆ ಅಂತಲೇ ಅರ್ಥ. ಇದೊಂಥರಾ ಕಂಪೆನಿಗಳ ಹೃದಯ ಇದ್ದ ಹಾಗೆ. ಏಕೆಂದರೆ, ಕಂಪೆನಿ ಚಿಕ್ಕದಿರಲಿ ದೊಡ್ಡದಾಗಿರಲಿ; ಅಲ್ಲಿನ ಉದ್ಯೋಗಿಗಳ ಪುರೋಭಿವೃದ್ಧಿ ಮೇಲುಸ್ತುವಾರಿ ನೋಡಿಕೊಳ್ಳುವುದು ಈ ಎಚ್.ಆರ್. ಕಾಲಕಾಲಕ್ಕೆ ಉದ್ಯೋಗಿಗಳ ರಜೆ, ಆರೋಗ್ಯ ಸೌಲಭ್ಯಗಳು, ಪಿಎಫ್, ಪ್ರಮೋಷನ್, ಬೋನಸ್ ನೀಡುವುದು, ತರಬೇತಿಗಳನ್ನು ಕೊಡುವುದು ಹೀಗೆ… ಉದ್ಯೋಗಿಗಳನ್ನು ಕ್ರಿಯಾಶೀಲವಾಗಿರುವಂತೆ ನೋಡಿಕೊಳ್ಳುವುದು ಈ ವಿಭಾಗದ ಕೆಲಸ. ಈ ರೀತಿ ಕಾಲಕಾಲಕ್ಕೆ ಉದ್ಯೋಗಿಗಳ ಕ್ರಿಯಾಶೀಲತೆ ಹೆಚ್ಚಿಸುವ ಕಾರ್ಯಕ್ರಮಗಳನ್ನು ಮಾಡುವುದರಿಂದ ಉತ್ಪನ್ನದ ಗುಣಮಟ್ಟ ಕೂಡ ಹೆಚ್ಚುತ್ತದೆ. ಹೀಗಾಗಿ, ಮಾನವ ಸಂಪನ್ಮೂಲ ವಿಭಾಗ ಅನ್ನೋದು, ಪ್ರತಿ ಕಂಪೆನಿಯ ನಾಡಿಮಿಡಿತವೇ ಆಗಿದೆ.
ಎಚ್.ಆರ್.ನಲ್ಲಿ ಡಿಪ್ಲೊಮೊದಿಂದ ಪದವಿ, ಪಿಎಚ್.ಡಿ ಕೂಡ ಮಾಡುವ ಅವಕಾಶವಿದೆ. ಇವುಗಳಲ್ಲಿ ಯಾವ ಕೋರ್ಸ್ ಮಾಡುತ್ತೇವೆಯೋ ಅದರ ಆಧಾರದ ಮೇಲೆ ಉದ್ಯೋಗಗಳು ದೊರೆಯುತ್ತವೆ. ಒಂದು ವರ್ಷದ ಡಿಪ್ಲೊಮೊ ಇನ್ ಎಚ್.ಆರ್ ಮಾಡುವುದಾದರೆ ಇದಕ್ಕೆ ವಿದ್ಯಾರ್ಹತೆ ಪಿಯುಸಿ ಪಾಸಾಗಿರಬೇಕು. ಎಸ್.ಎಸ್.ಎಲ್‌ಸಿ ಮೂಲಕ ಯಾವುದೇ ಕೋರ್ಸ್ ಮಾಡಲು ಆಗದು. ದ್ವಿತೀಯ ಪಿಯುಸಿಯಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದಿರುವುದು ಕಡ್ಡಾಯ. ಪೋಸ್ಟ್ ಗ್ರಾಜುಯೇಟ್ ಕೋರ್ಸ್‌ಗಳನ್ನು ಮಾಡಲು ಪದವಿಯ ಕೊನೆ ವರ್ಷ ಶೇ. 50ರಷ್ಟು ಅಂಕಗಳನ್ನು ಪಡೆದಿರಬೇಕಾಗುತ್ತದೆ. ಎಚ್.ಆರ್‌ನಲ್ಲಿ ಡಾಕ್ಟರೇಟ್ ಕೂಡ ಪಡೆಯಬಹುದು. ಇದಕ್ಕೆ ಡಿಗ್ರಿಯಲ್ಲಿ ಪ್ರಮುಖವಾಗಿ ಎಚ್.ಆರ್. ವಿಷಯವನ್ನು ಅಧ್ಯಯನ ಮಾಡಿರಬೇಕು. ಕೊನೆಯ ವರ್ಷದಲ್ಲಿ ಶೇ. 50ರಷ್ಟು ಅಂಕಗಳಿಸಿರಬೇಕು. ಡಿಗ್ರಿಯಲ್ಲಿ ಬಿಬಿಎ ಇನ್ ಎಚ್‌ಆರ್, ಬಿಎ ಇನ್ ಎಚ್‌ಆರ್ ಅಂತಿದ್ದು, ಇದರ ಅವಧಿ ಮೂರು ವರ್ಷಗಳದ್ದಾಗಿರುತ್ತದೆ. ಪಿಎಚ್‌ಡಿ ನಾಲ್ಕುವರ್ಷಗಳ ಪದವಿಯಾಗಿದೆ. ಹೀಗೆ, ಎಚ್.ಆರ್. ಆಗಬೇಕಾದರೆ ಪದವಿಗಳನ್ನು ಗಳಿಸಬೇಕು. ಪದವಿಗಳಿಸುವುದೇನು ಸುಮ್ಮನೆ ಅಲ್ಲ. ಇದಕ್ಕೂ ಮೊದಲು ನೀವು ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ. ಅದರಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಅಡ್ಮಿಷನ್ ನಡೆಯುತ್ತದೆ.
Related Articles
Advertisement
ಕೆಲಸ ಎಲ್ಲೆಲ್ಲಿ?ಎಚ್.ಆರ್ ಕೋಸ್ ಪೂರೈಸಿದ ಮೇಲೆ ನಾಲ್ಕೈದು ವರ್ಷ ಅನುಭವ ಜೊತೆಗಿದ್ದರೆ, ಎಚ್.ಆರ್. ಜೆನರಲಿಸ್ಟ್, ಎಚ್.ಆರ್. ರಿಕ್ವಿರ್ಟರ್, ಎಚ್.ಆರ್ ಸ್ಪೆಷಲಿಸ್ಟ್. ಎಂಪ್ಲಾಯ್ ರಿಲೇಷನ್ ಮ್ಯಾನೇಜರ್, ಟ್ರೈನಿಂಗ್ ಅಂಡ್ ಡೆವಲಪ್‌ಮೆಂಟ್ ಮ್ಯಾನೇಜರ್ ಹೀಗೆ, ಅನೇಕ ಹುದ್ದೆಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಪ್ರತಿಯೊಂದು ಕಂಪನಿ, ಫ್ಯಾಕ್ಟರಿಗಳಲ್ಲೂ ಎಚ್.ಆರ್‌ವಿಭಾಗ ಇರಲೇಬೇಕು. ಹೀಗಾಗಿ, ಕೆಲ್ಲಿ ಸರ್ವೀಸ್, ಅಡೆಕೋ ಇಂಡಿಯಾ,ಎಬಿಸಿ ಕನ್ಸಲ್ಟೆಂಟ್ಸ್, ಮ್ಯಾನ್‌ಪವರ್ ಗ್ರೂಪ್, ಆರ್.ಎಚ್‌ಫ್ಯಾಕ್ಟರ್, ಎಚ್.ಆರ್. ಫುಟ್‌ಪ್ರಿಂಟ್ಸ್‌ನಂಥ ಕಂಪೆನಿಗಳಲ್ಲಿ ಉದ್ಯೋಗ ದೊರಕುತ್ತದೆ. ಕೆ.ಜಿ