Advertisement

ಜೀವನದಲ್ಲಿ ಸಂಸ್ಕಾರ ಬಹಳ ಮುಖ್ಯ

12:00 PM Oct 16, 2021 | Team Udayavani |

ರಾಯಚೂರು: ಜೀವನದಲ್ಲಿ ಸಂಸ್ಕಾರ ಎನ್ನುವುದು ಬಹಳ ಮುಖ್ಯ. ಉತ್ತಮ ಸಂಸ್ಕಾರ ನೀಡಿದಾಗಲೇ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ ಎಂದು ನಿಲಗಲ್‌ ಬೃಹನ್ಮಠದ ಡಾ| ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ನಗರದ ಐಡಿಎಸ್‌ಎಂಟಿ ಮತ್ತು ಗಂಗಾಪರಮೇಶ್ವರಿ ಬಡಾವಣೆ ಮಧ್ಯೆದಲ್ಲಿ ಹೋಳಿಗೆ ತಾಯಮ್ಮ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ನೆರವೇರಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಕಲ್ಲಿಗೆ ಸಂಸ್ಕಾರ ನೀಡಿ ಮೂರ್ತಿಯನ್ನಾಗಿಸಿ ಅದಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ. ಇಂದಿನಿಂದ ಭಕ್ತರು ಇಷ್ಟಾರ್ಥ ಈಡೇರಿಸುವ ಶಕ್ತಿ ಈ ತಾಯಿಯಲ್ಲಿ ಇರುತ್ತದೆ. ಎಲ್ಲ ಭಕ್ತರು ನವರಾತ್ರಿಯಲ್ಲಿ ಮಾತ್ರ ತಾಯಿಯ ಸೇವೆ ಮಾಡದೆ ನಿತ್ಯ ಪೂಜೆ ಸಲ್ಲಿಸಿ ದೇವಿಯ ಕೃಪೆಗೆ ಪ್ರತಾರಾಗಬೇಕು ಎಂದರು.

ನಗರಸಭೆ ಅಧ್ಯಕ್ಷ ಈ.ವಿನಯ್ ಕುಮಾರ್‌ ಮಾತನಾಡಿ, ನವರಾತ್ರಿಯಲ್ಲಿ ದೇವಿಯನ್ನು ಪೂಜಿಸಿ ಆಶೀರ್ವಾದ ಪಡೆದು ವರ್ಷಾನುಗಟ್ಟಲೆ ಸುಖ ಸಂಪತ್ತಿನಿಂದ ಜೀವಿಸುತ್ತಿದ್ದೇವು. ಇಂದು ಐಡಿಎಸ್‌ಎಂಟಿ ಬಡಾವಣೆಗೆ ಸಾಕ್ಷಾತ್ ತಾಯಮ್ಮ ದೇವಿ ಬಂದು ನೆಲೆಸಿರುವುದು ನಮ್ಮೆಲ್ಲರ ಪುಣ್ಯ. ಆ ತಾಯಿಗೆ ನಾವೆಲ್ಲರೂ ತನು-ಮನ-ಧನದಿಂದ ಸೇವೆ ಸಲ್ಲಿಸಿ ದೇವಿಯ ಕೃಪೆಗೆ ಪಾತ್ರರಾಗೋಣ ಎಂದರು.

ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಐಡಿಎಸ್‌ಎಂಟಿ ಬಡಾವಣೆ ಹಾಗೂ ಗಂಗಾಪರಮೇಶ್ವರಿ ಬಡಾವಣೆಯ ಭಕ್ತರು ಪಾಲ್ಗೊಂಡಿದ್ದರು. ಈ ನಿಮಿತ್ತ ಕಳೆದ ಮೂರು ದಿನಗಳಿಂದ ವಿಶೇಷ ಹೋಮ ಹವನ ಸೇರಿದಂತೆ ಪೂಜಾ ಕಾರ್ಯಕ್ರಮ ಜರುಗಿದವು.

Advertisement

Udayavani is now on Telegram. Click here to join our channel and stay updated with the latest news.

Next