Advertisement

Kundapur: ‘ಮೂರು ಮುತ್ತು’ ನಾಟಕ ಖ್ಯಾತಿಯ ಅಶೋಕ್ ಶಾನಭಾಗ್ ನಿಧನ

07:33 AM Dec 09, 2023 | Team Udayavani |

ಕುಂದಾಪುರ: ರೂಪಕಲಾ ನಾಟಕ ತಂಡದ ಮೂರುಮುತ್ತು ಖ್ಯಾತಿಯ ಅಶೋಕ್ ಶಾನಭಾಗ್ ರವರು ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಇವರು ಮೂರು ಮುತ್ತು, ಅವನಲ್ಲ ಇವನು, ಪಾಪ ಪಾಂಡು, ಅಳುವುದೋ ನಗುವುದೋ, ರಾಮ ಕೃಷ್ಣ ಗೋವಿಂದ ಇನ್ನು
ಹಲವಾರು ನಾಟಕಗಳಲ್ಲಿ ಹಾಸ್ಯ ಪಾತ್ರದಿಂದ ಮಿಂಚಿದ್ದರು.

ಇವರ ಅಗಲಿಕೆಯ ಸುದ್ದಿ ಅಪಾರ ಅಭಿಮಾನಿಗಳಿಗೆ ದುಃಖ ಉಂಟುಮಾಡಿದೆ. ಮೃತರ ಅಂತ್ಯ ಸಂಸ್ಕಾರ ಶನಿವಾರ ಬೆಳಗ್ಗೆ ಕುಂದಾಪುರ ದಲ್ಲಿ ನಡೆಯಲಿದೆ. ಕೆಲ ಸಮಯದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ರು.

Advertisement

Udayavani is now on Telegram. Click here to join our channel and stay updated with the latest news.

Next